Public objection to construction of barrier on roundabout.
ತಿರುಗಾಡುವ ರಸ್ತೆಗೆ ತಡೆಗೋಡೆ ನಿರ್ಮಾಣ ಸಾರ್ವಜನಿಕರ ಆಕ್ಷೇಪ .

ವರದಿ: ಬಂಗಾರಪ್ಪ .ಸಿ .
ಹನೂರು: ಕ್ಷೇತ್ರ ವ್ಯಾಪ್ತಿಯಲ್ಲಿನ ಹಲವಾರು ಗ್ರಾಮಗಳಲ್ಲಿ ತಮ್ಮ ಜಮೀನುಗಳಿಗೆ ತಿರುಗಾಡಲು ಸಾಕಷ್ಟು ಜನ ತೊಂದರೆ ಅನುಭವಿಸುವಂತಾಗಿದೆ ,ಇದೇ ರೀತಿಯಲ್ಲಿ ಜಾಗ ನಮ್ಮದೆಂದು ಸಾರ್ವಜನಿಕರು ತಿರುಗಾಡುವ ರಸ್ತೆಯನ್ನೇ ಒತ್ತುವರಿ ಮಾಡಿ ಕಾಂಪೌಂಡ ನಿರ್ಮಿಸಿದ ವ್ಯಕ್ತಿ ವಿರುದ್ದ ದೂರು ನೀಡಿ ಕೆಲಸ ನಿಲ್ಲಿಸಿರುವ ಘಟನೆ ಬೂದಿ ಪಡಗ ಗ್ರಾಮದಲ್ಲಿ ಜರುಗಿದೆ.
ತಾಲ್ಲೂಕಿನ ಲೊಕ್ಕನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಸೇರಿದ ಬೂದಿ ಪಡಗ ಗ್ರಾಮದಲ್ಲಿ ಸವರ್ಣಿಯರ ಗುಂಪಿನ ವ್ಯಕ್ತಿಯೊಬ್ಬನ ಈ ಕೃತ್ಯ ಇಡಿ ಗ್ರಾಮದಲ್ಲಿ ಪರಿಶಿಷ್ಟ ಜಾತಿ ದಲಿತ ಸಮುದಾಯಕ್ಕೂ ಮತ್ತು ಪರಿಶಿಷ್ಟ ಪಂಗಡ ಸಮುದಾಯದ ಆದಿವಾಸಿ ಸೋಲಿಗ ಜನಾಂಗಕ್ಕೂ ತಿರುಗಾಡಲು ತುಂಬಾ ತೊಂದರೆ ಹಾಗೂ ಅನಾನುಕೂಲ ಉಂಟಾಗಿದೆ.
ನೆರೆ ರಾಜ್ಯ ತಮಿಳುನಾಡಿಗೆ ತೆರಳುವ ಮುಖ್ಯರಸ್ತೆಯಲ್ಲಿ ಬೂದಿ ಪಡಗ ಗ್ರಾಮವಿದ್ದು ಈ ರಸ್ತೆಯಿಂದ ಪೂರ್ವಕ್ಕೆ ಇರುವ ದಲಿತರು ಸೋಲಿಗರು ವಾದಿಸುವ ಮನೆಗಳಿದ್ದು ಈ ಮುಖ್ಯ ರಸ್ತೆಯಿಂದಲೇ ಅಲ್ಲಿಗೆ ತೆರುಳಬೇಕಾಗುತ್ತದೆ. ಈ ರಸ್ತೆಯು ನೂರಾರು ವರ್ಷಗಳ ಹಳೆಯ ರಸ್ತೆ ಹಾಗೂ ಬೀದಿಗೆ ಪ್ರಮುಖ ರಸ್ತೆ ಮಾರ್ಗವಾಗಿರುತ್ತದೆ. ದಿಡೀರನೆ ವ್ಯಕ್ತಿ ರಸ್ತೆ ಒತ್ತುವರಿ ಮಾಡಿ ಕಾಂಪೌಂಡ್ ನಿರ್ಮಾಣ ಮಾಡಿರುವುದರಿಂದ ಗ್ರಾಮದ ಜನರಿಗೆ ತುಂಬಾನೇ ಅನಾನುಕೂಲವಾಗಿದೆ.
ಈ ವಿಚಾರವಾಗಿ ಗ್ರಾಮಸ್ಥರು ಗ್ರಾಮ ಪಂಚಾಯಿತಿ ಅಧಿಕಾರಿಗೂ ಮತ್ತು ಹನೂರು ಪೊಲೀಸ್ ಠಾಣೆಗೂ ಹಾಗೂ ತಹಸೀಲ್ದಾರ್ ರವರಿಗೂ ಲಿಖಿತ ದೂರು ನೀಡಿದ್ದರೂ ಅದ್ಯಾವುದಕ್ಕೂ ಕ್ಯಾರೆ ಅನ್ನದೆ ಕಾಂಫೌಂಡ ನಿರ್ಮಾಣ ಮಾಡಿರುವುದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ರಸ್ತೆ ಹಗೆದು ಪ್ರತಿಭಟನೆ ಮಾಡಲು ಮುಂದದಾಗ ಪಂಚಾಯ್ತಿ ಅಧಿಕಾರಿ ಪಿಡಿಓ ಪೊಲೀಸ್ ಠಾಣೆಗೆ ದೂರು ನೀಡಿ ಪೊಲೀಸರ ಸಮ್ಮುಖದಲ್ಲಿ ದಾಖಲೆ ಒದಗಿಸಿ ನಂತರ ಕೆಲಸ ಮಾಡುವಂತೆ ಐದು ದಿನ ಕಾಲಾವಕಾಶ ನೀಡಿದ್ದಾರೆ.
ಕಾಂಪೌಂಡ ನಿರ್ಮಾಣ ಸ್ಥಳವು ಪೂರ್ವಿಕರದಾಗಿದ್ದು ನಿಖರ ದಾಖಲೆ ಇರುವುದಿಲ್ಲ ಎನ್ನುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಗ್ರಾಮಸ್ಥರು ಜನರು ತಿರುಗಾಡಲು ದಾರಿ ಬಿಟ್ಟು ಇನ್ನುಳಿಕೆಯ ಜಾಗವನ್ನು ಅವರು ಏನಾದರೂ ಮಾಡಿಕೊಳ್ಳಲಿ ಎನ್ನುತ್ತಿದ್ದಾರೆ. ಇದಕ್ಕೆ ಒಪ್ಪದ ಸವರ್ಣೀಯ ವ್ಯಕ್ತಿ ಮೊಂಡು ತನಕೆ ಬಿದ್ದಿರುವುದು ವಿಪರ್ಯಾಸವಾಗಿದೆ. ಈತನು ಜಾಗದ ಸುತ್ತಲೂ ಕಾಂಪೌಂಡ್ ನಿರ್ಮಿಸುತ್ತಿಲ್ಲ ಉದೇಶ ಪೂರ್ವಕವಾಗಿ ರಸ್ತೆ ಕಡೆಗೆ ಮಾತ್ರ ಒತ್ತುವರಿ ಮಾಡಿ ಐ�
Kalyanasiri Kannada News Live 24×7 | News Karnataka
