
ಪರಿಸರ ರಕ್ಷಣೆಗೆ ಅನಂತ ಪ್ಲೇಟ್ ಬ್ಯಾಂಕ್
ಪೂರಕವಾಗಲಿದೆ: ಶ್ರೀ ಪರಣ್ಣ ಮುನವಳ್ಳಿ
Anantha Plate Bank will be a complement to environmental protection: Shri Paranna Munavalli

ಗಂಗಾವತಿ: ಸಂಕ್ರಾAತಿ ದಿನದಂದು ಗಂಗಾವತಿಯಲ್ಲಿ ಅನಂತ ಪ್ಲೇಟ್
ಬ್ಯಾಂಕ್ನ್ನು ಮಾಜಿ ಶಾಸಕ ಪರಣ್ಣ ಮುನವಳ್ಳಿ ಅವರು ಉದ್ಘಾಟಿಸಿ
ಮಾತನಾಡಿದರು.
ಮಾಜಿ ಕೇಂದ್ರ ಸಚಿವ ದಿ, ಅನಂತಕುಮಾರ್ ಅವರು ಪ್ರಾರಂಭಿಸಿದ್ದ
ಪ್ಲೇಟ್ ಬ್ಯಾಂಕ್ನ್ನು ಅವರ ಪತ್ನಿಯದ ಶ್ರೀಮತಿ ತೇಜಶ್ವಿನಿ
ಅನಂತಕುಮಾರ ಅವರು ನಾಡಿನಾದ್ಯಂದ ನಡೆಸುತ್ತಾ ಪ್ಲೇಟ್
ಬ್ಯಾಂಕ್ಗಳ ಸೇವೆ ಪರಿಸರ ಕಾಪಾಡಲು ಅನುಕೂಲವಾಗಲಿದೆ, ಶ್ರೀಮತಿ
ತೇಜಸ್ವಿನಿ ಅವರ ಕಾರ್ಯ ಎಲ್ಲರೂ ಮೆಚ್ಚುವಂತದ್ದು ಎಂದು
ಹೇಳಿದರು.
ದಿವ್ಯ ಸಾನಿದ್ಯವನ್ನು ಹೆಬ್ಬಾಳ ಬೃಹನ್ಮಠದ ಪ.ಪೂ. ಶ್ರೀ
ನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಿ ಮಾತನಾಡಿ, ಇದು
ಉತ್ತಮ ಕಾರ್ಯವಾಗಿದೆ, ಮದುವೆ ಸ್ಭೆರಿದಂತೆ ಇತರೆ ಶುಭ
ಸಮಾರಂಭಗಳಲ್ಲಿ ಪ್ಲಾಸ್ಟಿಕ್ ತ್ಯಜಿಸಿ ಸ್ಟೀಲ್ ಪ್ಲೇಟ್, ಗ್ಲಾಸ್ಗಳನ್ನು
ಉಪಯೋಗಿಸುವುದರಿಂದ ಮನುಷ್ಯನ ಆರೋಗ್ಯದ ಜೊತೆಗೆ
ಪರಿಸರವನ್ನು ಸಂರಕ್ಷಿಸಬಹುದು ಎಂದರು.
ಮುಖ್ಯ ಅತಿಥಿಗಳಾಗಿ ಗಂಗಾವತಿ ಪೊಲೀಸ್ ಉಪ ವಿಭಾಗದ
ಉಪಾಧೀಕ್ಷಕರಾದ ನ್ಯಾಮಗೌಡರ್ ಅವರು ಮಾತನಾಡಿ, ಜಗತ್ತಿನಲ್ಲಿ
ಪ್ಲಾಸ್ಟಿಕ್ನಿಂದ ಗ್ಲೋಬಲ್ ವಾರ್ಮಿಂಗ್ ಆಗುತ್ತಿದ್ದು, ಅದನ್ನು ತಡೆಗಟ್ಟಲು
ಈ ತರಹದ ಹಲವಾರು ಕಾರ್ಯಗಳನ್ನು ಎಲ್ಲಾ ಊರುಗಳಲ್ಲಿ
ಮಾಡಬೇಕೆಂದರು.
ರಾಜಕೀಯ ಮುಖಂಡರಾದ ವಿರೂಪಾಕ್ಷಪ್ಪ ಸಿಂಗನಾಳ, ಖ್ಯಾತ
ಸಂಶೋಧಕರಾದ ಡಾ. ಶರಣಬಸಪ್ಪ ಕೋಲ್ಕಾರ್, ಕಲಾ ನಿಕೇತನ
ಸಾಂಸ್ಕೃತಿಕ ವೇದಿಕೆಯ ಖಜಾಂಚಿಗಳಾದ ಡಾ. ಪ್ರವೀಣ್ ಹಿರೇಮಠ,
ವಾಣಿಜ್ಯೋದ್ಯಮಿ ಹಾಗೂ ಪರಿಸರ ಪ್ರೇಮಿಗಳಾದ ಎನ್.
ಸೂರ್ಯನಾರಾಯಣ ಭಾಗವಹಿಸಿ, ಅನಂತ ಪ್ಲೇಟ್ ಬ್ಯಾಂಕ್ಗೆ ಎಲ್ಲಾ ರೀತಿಯ
ಸಹಕಾರ ನೀಡಲಾಗುವುದು ಎಂದರು.
ಕಲಾ ನಿಕೇತನ ಸಾಂಸ್ಕೃತಿಕ ವೇದಿಕೆಯ ಕಾರ್ಯದರ್ಶಿ ಹಾಗೂ
ಗಂಗಾವತಿ ಪ್ಲೇಟ್ ಬ್ಯಾಂಕ್ ಸಂಯೋಜಕರಾದ ಡಾ|| ಶಿವಕುಮಾರ್
ಮಾಲಿಪಾಟೀಲ ಅವರು ಪ್ಲೇಟ್ ಬ್ಯಾಂಕ್ ಅವಶ್ಯಕತೆಯ ಬಗ್ಗೆ
ಪ್ರಾಸ್ತಾವಿಕವಾಗಿ ಮಾತನಾಡಿ, ನಿರ್ಮಲ ತುಂಗಭದ್ರಾ ಅಭಿಯಾನ
ಯಶಸ್ವಿಯಾಗಿದೆ, ಅದರ ಮುಂದುವರಿದ ಭಾಗವಾಗಿ ರಾಜಮಾತೆ ಶ್ರೀಮತಿ
ಲಲಿತಾರಾಣಿ ಶ್ರೀರಂಗದೇವರಾಯಲು ಅವರ ನೇತೃತ್ವದಲ್ಲಿ ಯುವ
ಚಾರಣ ಬಳಗದ ವತಿಯಿಂದ ನದಿ ತಟದಲ್ಲಿ ವಿಷ ಮುಕ್ತ ಪುಣ್ಯ ಸ್ನಾನ
ಅಭಿಯಾನ ನಡೆಯುತ್ತಿದೆ ಹಾಗೂ ನಗರದಲ್ಲಿ ಪ್ಲೇಟ್ ಬ್ಯಾಂಕ್
ಉದ್ಘಾಟನೆ ಮಾಡುತ್ತಿದ್ದೇವೆ ಎಂದರು.

ಪ್ರಹ್ಲಾದ್ ಕುಲಕರ್ಣಿ, ಪ್ರಾಚಾರ್ಯರಾದ ಬಸಪ್ಪ
ನಾಗೊಲಿ, ರಮೇಶ್ ಗಬ್ಬೂರ್, ಆಂಜನೇಯ ಟಿ., ಡಾ. ಬದರಿಪ್ರಸಾದ್,
ಮಂಜುನಾಥ ಗುಡ್ಲಾನೂರ್, ಶಿವಪ್ಪ ಗಾಳಿ, ಜಂಬಣ್ಣ ಐಲಿ, ವೀರೇಶ ಬಲಕುಂದಿ,
ಶಿವದೀಪಕ್ ಹಾದಿಮನಿ, ಆರ್. ಕೃಷ್ಣ, ಚಿದಾನಂದ ಕೀರ್ತಿ, ಸಂಗಪ್ಪ ಗಾಜಿ,
ರಗಡಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಗಂಗಾವತಿ ಚಾರಣ ಬಳಗದ ಮೈಲಾರಪ್ಪ ಬೂದಿಹಾಳ
ಕಾರ್ಯಕ್ರಮ ನಿರೂಪಿಸಿದರು.




