
ಅಪಘಾತದಲ್ಲಿ ಮೃತರಾದ ಕುಟುಂಬಸ್ಥರ ಭೇಟಿಯಾಗಿ ಸಾಂತ್ವನ ಹೇಳಿದ ಮಾಜಿ ಶಾಸಕ ಆರ್ ನರೇಂದ್ರ

Former MLA R Narendra meets and consoles the families of those who died in the accident
ವರದಿ: ಬಂಗಾರಪ್ಪ .ಸಿ.
ಹನೂರು :ಸಾರಿಗೆ ನಿಗಮದಿಂದ ಮೃತರ ಕುಟುಂಬಕ್ಕೆ ಮೊದಲ ಪರಿಹಾರದ ಮೊತ್ತವಾಗಿ ಇಪ್ಪತೈದು ಸಾವಿರ ರೂಪಾಯಿಗಳನ್ನು ಅಧಿಕಾರಿಗಳ ಮುಖಾಂತರ ಮೃತರ ಕುಟುಂಬಕ್ಕೆ ಹಸ್ತಾಂತರ ಮಾಡಲಾಗಿದೆ ,ಮುಂದಿನ ದಿನಗಳಲ್ಲಿ ನಾವು ಅವರ ಕುಟುಂಬಸ್ಥರ ಒಪ್ಪಿಗೆಯ ಮೇರೆಗೆ ವಕೀಲರ ಸಹಾಯದಿಂದ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದು ಮಾಜಿ ಶಾಸಕರಾದ ಆರ್ ನರೇಂದ್ರ ತಿಳಿಸಿದರು .
ಹನೂರು ಪಟ್ಟಣದ ಸರ್ಕಾರಿ ಆಸ್ಪತ್ರೆಯ ಶವಗಾರದಲ್ಲಿನ ಆವರಣದಲ್ಲಿ ಮಾತನಾಡಿದ ಅವರು
ಕೆ.ಎಸ್.ಆರ್.ಟಿ.ಸಿ ಬಸ್ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿದ ಪರಿಣಾಮ ಬೈಕ್ ಸವಾರರು ಇಬ್ಬರು ವ್ಯಕ್ತಿಗಳು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮಲೆ ಮಹದೇಶ್ವರ ಬೆಟ್ಟ ಮುಖ್ಯ ರಸ್ತೆಯಲ್ಲಿರುವ ಮೂಕಳ್ಳಿ ಮಾರಮ್ಮನ ದೇವಸ್ಥಾನದ ಹತ್ತಿರ ಮಂಗಳವಾರ ಸಾಯಂಕಾಲ 5-00 ಗಂಟೆಯ ಸಮಯದಲ್ಲಿ ಸಂಭವಿಸಿದೆ.
ಮೃತರು :
ಹನೂರು ತಾಲೂಕಿನ ಪೊನ್ನಾಚಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಮೇಗೌಡನ ಹಳ್ಳಿ ಗ್ರಾಮದ ಶಿವಪ್ಪ ಬಿನ್ ರಾಜು ಮತ್ತು ಸತೀಶ ಬಿನ್ ಮಾದೇವ ಇಬ್ಬರು ಮೃತ ವ್ಯಕ್ತಿಯಾಗಿದ್ದಾರೆ.
ಬೈಕ್ ನಲ್ಲಿ ಕೌದಳ್ಳಿ ಗ್ರಾಮದಿಂದ ತಮ್ಮ ಊರಿಗೆ ರಾಮೇಗೌಡನ ಹಳ್ಳಿ ಗ್ರಾಮಕ್ಕೆ ತೆರಳುತ್ತಿದ್ದಾಗ ಮಲೆ ಮಹದೇಶ್ವರ ಬೆಟ್ಟ ಮುಖ್ಯ ರಸ್ತೆಯ ಮೂಕಳ್ಳಿ ಮಾರಮ್ಮನ ದೇವಸ್ಥಾನದ ಹತ್ತಿರ ಎದುರುಗಡೆಯಿಂದ ಬಂದ ಸಾರಿಗೆ ಬಸ್ ಮುಖಾ ಮುಖಿ ಡಿಕ್ಕಿಯಾಗಿ ಸ್ಥಳದಲ್ಲಿಯೇ ಸಾವನಪ್ಪಿದ್ದಾರೆ.
ಘಟನೆ ಬಗ್ಗೆ ಮಾಹಿತಿ ತಿಳಿದು ರಾಮಾಪುರ ಪೊಲೀಸ್ ಠಾಣೆ ಅಧಿಕಾರಿ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಹಿತಿ ಪಡೆದಿದ್ದಾರೆ. ಇಬ್ಬರು ಮೃತ ದೇಹವನ್ನು ಹನೂರು ಸರ್ಕಾರಿ ಆಸ್ಪತ್ರೆಯ ಶವಗಾರಕ್ಕೆ ರವಾನಿಸಲಾಗಿ ನಂತರ ಮರಣೋತ್ತರ ಪರೀಕ್ಷೆ ಮಾಡಿ ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗಿದೆ ಎಂದು ತಿಳಿಸಿದರು .
ಇದೇ ಸಮಯದಲ್ಲಿ ಪಿ ಎಸ್ ಐ ಲೋಕೇಶ್ ,ಎ ಎಸ್ ಐ ಮಹದೇವಸ್ವಾಮಿ .ಮುಖ್ಯ ಪೇದೆಗಳಾದ ಮಹೇಂದ್ರ , ರಾಜು ಪಟ್ಟಣ ಪಂಚಾಯತಿ ಮಾಜಿ ಉಪಾಧ್ಯಕ್ಷರಾದ ಹರೀಶ್ ಕುಮಾರ್ . ಗೀರಿಶ್ , ಮುಖಂಡರುಗಳಾದ ದಾಸಪ್ಪ , ಮುನಿಮಾರ , ಭದ್ರೆಗೌಡ. ಬಂಗಾರಪ್ಪ ಮುತ್ತಯ್ಯ ,ಮಾದೆವ್ , ಹುಚ್ಚಯ್ಯ, ರವಿಕುಮಾರ್ , ಸಿದ್ದಪ್ಪ , ಭಾಗ್ಯಮ್ಮ , ಮಹಾದೇವಸ್ವಾಮಿ ಸೇರಿದಂತೆ ಇನ್ನಿತರರು ಹಾಜರಿದ್ದರು


