ಸ್ಥಳಕ್ಕೆ ಬಾರದ ಅಧಿಕಾರಿವರ್ಗ ಧರಣಿ ಮುಂದುವರಿಸಿದ ರೈತ ಸಂಘದ ಮುಖಂಡರುಗಳು
Farmers' union leaders continued their sit-in protest against the authorities who did not come to the spot.
ವರದಿ: ಬಂಗಾರಪ್ಪ .ಸಿ .
ಹನೂರು : ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ದಂಟಳ್ಳಿ ಏತನೀರಾವರಿ ಹೋರಾಟ ಸಮಿತಿಯವರಿಂದ ಕಾವೇರಿ ನದಿಯಿಂದ ದಂಟಳ್ಳಿ ಮಾರ್ಗವಾಗಿ ಏತನೀರಾವರಿ ಯೋಜನೆ ಕಲ್ಪಿಸುವಂತೆ 24 ನೇ ದಿನದ ಶಾಂತಿಯುತ ಅಹೋರಾತ್ರಿ ಧರಣಿಗೆ ತಮಿಳು ಶಿಕ್ಷಕರ ಸಂಘದ ಪದಾಧಿಕಾರಿಗಳು ಭಾಗವಹಿಸಿ ಬೆಂಬಲ ಸೂಚಿಸಿದ್ದಾರೆ ಎಂದು ಜಿಲ್ಲಾ ರೈತ ಸಂಘದ ಮುಖಂಡರಾದ ಶೈಲೇಂದ್ರರವರು ತಿಳಿಸಿದರು.
ಕಳೆದ ತಿಂಗಳು ದಿನಾಂಕ 27 10 2025 ರಿಂದ ಕಾವೇರಿ ನದಿಯಿಂದ ದಂಟಳ್ಳಿ ಮಾರ್ಗವಾಗಿ ಏತನೀರಾವರಿ ಯೋಜನೆ ಹಾಗೂ ಇನ್ನಿತರ ಸಮಸ್ಯೆಗಳನ್ನು ಬಗೆಹರಿಸುವಂತೆ ಅಹೋರಾತ್ರಿ ಧರಣಿ ನಡೆಸಲಾಗುತ್ತಿದ್ದು ಬೇಜವಾಬ್ದಾರಿ ಸರ್ಕಾರದ ಯಾವೊಬ್ಬ ಪ್ರತಿನಿಧಿಯೂ ಸಹ ಬಾರದೆ ಜನಸಾಮಾನ್ಯರ ಹಕ್ಕನ್ನು ತುಳಿಯಲು ಪ್ರಯತ್ನಿಸುತ್ತಿದ್ದಾರೆ, ಈವತ್ತಿನ ಅಹೋರಾತ್ರಿ ಧರಣಿಗೆ ತಮಿಳು ಶಿಕ್ಷಕರ ಸಂಘದ ಪದಾಧಿಕಾರಿಗಳಾದ ಧನಂಜಯ್ ಮತ್ತು ದಾಮೋದರನ್ ಭಾಗವಹಿಸಿ ಸರ್ಕಾರ ಆದಷ್ಟು ಬೇಗ ಈ ಭಾಗದ ಜನರ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಮನವಿ ಮಾಡಿದರು,
ಬಿದರಹಳ್ಳಿ ಪುಟ್ಟಸ್ವಾಮಿ ಮಾತನಾಡಿ ರೈತರು ಜನಪ್ರತಿನಿಧಿಗಳ ಆಸ್ತಿ ಕೇಳಲು ಧರಣಿ ನಡೆಸುತ್ತಿಲ್ಲ ಬದುಕಲು ನೀರು ಕೇಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು,
ಅರ್ಪುತ್ ರಾಜ್ ಮಾತನಾಡಿ ಚುನಾವಣೆಗೂ ಮುಂಚೆ ಶಾಸಕರು ನೀಡಿದ್ದ ಭರವಸೆಗಳು ಹುಸಿಯಾಗಿರುವುದನ್ನು ಪ್ರತಿ ದಿನ ನಾಗರೀಕರು ತಿಳಿದುಕೊಳ್ಳಬೇಕು ಅಹೋರಾತ್ರಿ ಧರಣಿ ಯಿಂದ ಮುಂದೆ ಎನಾಗುತ್ತದೆ ಎಂಬುದನ್ನು ಗಮನಿಸುತ್ತಿದ್ದಾರೆ ಎಂದು ತಿಳಿಸಿದರು.
ಧರಣಿಯ ಸಂದರ್ಭದಲ್ಲಿ ಲೂರ್ದುಸ್ವಾಮಿ , ಪೀಟರ್, ರೆಜಿನಾ ಮೇರಿ,ಸೂಸೈಮಾಣಿಕ್ಯಂ,ಸಂದನಮೇರಿ, ಜಾನ್ ಜೋಸೆಫ್, ಶಿವಣ್ಣ, ಸಮನ್ಸ್ ನಾಧನ್,ಜೈದೀಪ್, ಮುಂತಾದವರು ಭಾಗವಹಿಸಿದ್ದರು.
Kalyanasiri Kannada News Live 24×7 | News Karnataka
