
Sindh D. Appeal to Minister Nirmala Sitaram for naming Kishkindhe
ಕಿಷ್ಕಿಂಧೆ ನಾಮಕರಣಕ್ಕೆ ಸಿಂಧು ಡಿ. ಸಚಿವೆ ನಿರ್ಮಲ ಸೀತಾರಾಮ್ಗೆ ಮನವಿ

ಗಂಗಾವತಿ: ಕೊಪ್ಪಳ ಜಿಲ್ಲೆಗೆ ಕಿಷ್ಕಿಂಧ ಜಿಲ್ಲೆ ಎಂದು ಮತ್ತು ಕೊಪ್ಪಳ ಲೋಕಸಭಾ ಕ್ಷೇತ್ರಕ್ಕೆ ಕಿಷ್ಕಿಂಧ ಲೋಕಸಭಾ ಕ್ಷೇತ್ರ ಎಂದು ನಾಮಕರಣ ಮಾಡುವಂತೆ ಆಗ್ರಹಿಸಿ ಪರಿಸರ ಪ್ರೇಮಿ ಕು. ಸಿಂಧು ಡಿ.ಯವರು ಹಣಕಾಸು ಸಚಿವ ನಿರ್ಮಲ ಸೀತರಾಮ್ ಅವರಿಗು ಅವರ ಮೂಲಕ ಪ್ರಧಾನಿ ನರೇಂದ್ರ ಮೋದಿಯವರಿಗು ಕಮಲಾಪುರದಲ್ಲಿ ಮನವಿ ಸಲ್ಲಿಸಿದ್ದಾರೆ. ಹನುಮಂತನ ನಾಡು ಶಬರಿ ವಾಸವಿದ್ದ ಬೀಡು, ಪಂಪಾಸರೋವರ ಇತರೆ ಐತಿಹಾಸಿಕ, ಬೌಗೋಳಿಕ ಹಾಗು ಪೌರಾಣಿಕವಾಗಿ ಅತ್ಯಂತ ಮಹತ್ವದ ಸ್ಥಳ ಇದಾಗಿದ್ದು, ರಾಮಾಯಣ, ಮಹಾಭಾರತದ ಕಾಲ ಘಟದಲ್ಲೂ ಈ ಸ್ಥಳ ಉಲ್ಲೇಖವಿದೆ, ಅಯೋಧ್ಯೆ ಮತ್ತು ಅಂಜನಾದ್ರಿ ಎರಡಕ್ಕೂ ಅವಿನಾಭಾವ ಸಂಬAಧವಿದ್ದು, ಅಯೋಧ್ಯೆಗೆ ನೀಡಿದ ಪ್ರಾಮುಖ್ಯತೆಯನ್ನು ಅಂಜನಾದ್ರಿಗು ನೀಡಿ ಇಲ್ಲಿನ ಮೂಲ ಸೌಕರ್ಯ ಹೆಚ್ಚಿಸಿ ವಿಶ್ವದ ಪ್ರವಾಸಿ ತಾಣಗಲ್ಲೊಂದಾಗುವAತೆ ಅಭಿವೃದ್ಧಿ ಪಡಿಸಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.
ದೇಶದ ಎಲ್ಲಾ ಲೋಕಸಭೆ ಹಾಗು ವಿಧಾನ ಸಭಾಗಳಲ್ಲಿ ಸುಗ್ರೀವನ ಮೂರ್ತಿ ಪ್ರತಿಷ್ಠಾಪನೆಯಾಗಬೇಕು, ಗಂಗಾವತಿ ಅಯೋಧ್ಯಾ, ಗಂಗಾವತಿ – ರಾಮೇಶ್ವರ ರೈಲುಗಳಿಗೆ ಕಿಷ್ಕಿಂಧೆ ಎಂದು ನಾಮಕರಣ ಮಾಡಬೇಕು ಎಂದು ಕೋರಿದ್ದಾರೆ.
ಹನುಮ ಜನಿಸಿದ




