
ಕಾರ್ಖಾನೆ, ಯೋಜನಾ ಅಭಿವೃದ್ಧಿಯನ್ನೇ ಮಾನವನ ಸುಸ್ಥಿರ ಅಭಿವೃದ್ಧಿ ಎನ್ನಲಾಗದು: ಮಂಡ್ಯ ಅಭಿಗೌಡ

Factory and project development alone cannot be called sustainable human development: Mandya Abhi Gowda
ಕೊಪ್ಪಳ: ನಗರಸಭೆ ಆವರಣದಲ್ಲಿ 33 ದಿನಗಳಿಂದ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆಯ ಜಂಟಿ ಕ್ರಿಯಾ ಸಮಿತಿಯಿಂದ ನಗರಕ್ಕೆ ಹೊಂದಿಕೊಂಡ ಬಲ್ಡೋಟಾ (ಬಿಎಸ್ಪಿಎಲ್), ಕಿರ್ಲೋಸ್ಕರ್, ಕಲ್ಯಾಣಿ ಸ್ಟೀಲ್, ಮುಕುಂದ ಸುಮಿ, ಎಕ್ಸಿಂಡಿಯಾ ಮುಂತಾದ ಕಾರ್ಖಾನೆಗಳ ವಿಸ್ತರಣೆ ವಿರೋಧಿಸಿ, ಬಸಾಪುರ ಕೆರೆ ಗ್ರಾಮದ ಜನರ ಬಳಕೆಗೆ ಮುಕ್ತವಾಗಿಡಲು ಆಗ್ರಹಿಸಿ ನಡೆಯುತ್ತಿರುವ ಅನಿರ್ದಿಷ್ಟ ಧರಣಿಗೆ ನಾವು ದ್ರಾವಿಡ ಕನ್ನಡಿಗರು ಚಳುವಳಿ ಬೆಂಬಲಿಸಿತು.
ಧರಣಿ ಬೆಂಬಲಿಸಿ ಮಾತನಾಡಿದ ದ್ರಾವಿಡ ಕನ್ನಡಿಗರು ಚಳವಳಿಯ ಮುಂದಾಳು ಮಂಡ್ಯ ಅಭಿಗೌಡ ಒಕ್ಕಲಿಗ ಮಾತನಾಡಿ ರಾಜಕಾರಣಿಗಳು ಯೋಜನಾ ಅಭಿವೃದ್ಧಿಯ ಹಿಂದೆ ಬೀಳುತ್ತಾರೆ. ಅವರ ಮೇಲೆ ನಾವು ಮೊದಲು ಜನಾಭಿವೃದ್ಧಿ ಮಾಡುವಂತೆ ಒತ್ತಡ ಹೇರಬೇಕು. ಸುಸ್ಥಿರ ಅಭಿವೃದ್ಧಿ ಕಾರ್ಖಾನೆಗಳಿಂದ ಮಾತ್ರವಲ್ಲ. ಅದು ಮಾನವನ ಆರೋಗ್ಗ, ಆಯುಷ್ಯ ಒಳಗೊಂಡರಷ್ಟೇ ಸರಿ. ಕೊಪ್ಪಳ ಈ ಅಭಿವೃದ್ಧಿಗೆ ಕೊಳ್ಳಿ ಇಟ್ಟ ಕಾರ್ಖಾನೆಗಳನ್ನು ಹಿಮ್ಮೆಟ್ಟಿಸಲು, ಜಿಲ್ಲೆಯ ಜನರ ಅಭಿವೃದ್ಧಿಗೆ ಒಂದು ನೀಲ ನಕ್ಷೆ ತಯಾರಿಸಲು ನಾವೆಲ್ಲರೂ ಸೇರಿ ಶ್ರಮಿಸೋಣ ಎಂದರು.
ದ್ರಾವಿಡ ಚಳವಳಿಯ ಯಮನೂರಪ್ಪ ಹಳ್ಳೇರ, ಹೋರಾಟ ವೇದಿಕೆಯ ಅಲ್ಲಮಪ್ರಭು ಬೆಟ್ಟದೂರು, ಮಲ್ಲಿಕಾರ್ಜುನ ಗೋನಾಳ, ಮೂಕಪ್ಪ ಮೇಸ್ತ್ರಿ ಬಸಾಪುರ, ಮಾನವ ಬಂಧುತ್ವ ವೇದಿಕೆಯ ರಣದಪ್ಪ ಸುಂಕಣ್ಣವರ, ಮಂಜುನಾಥ ಕವಲೂರು, ನಿವೃತ್ತ ಪ್ರಿನ್ಸಿಪಾಲರು ಎಸ್.ಬಿ.ರಾಜೂರು, ನಿವೃತ್ತ ಕೋರ್ಟ್ ಅಧೀಕ್ಷಕರು ಜಿ.ಬಿ.ಪಾಟೀಲ್, ಪ್ರಕಾಶಕರು ಡಿ.ಎಂ.ಬಡಿಗೇರ, ಮಹಾದೇವಪ್ಪ ಮಾವಿನಮಡು, ರವಿ ಕಾಂತನವರ, ನಿವೃತ್ತ ಎಸ್.ಜಿ.ಕಾಲೇಜ್ ಅಧೀಕ್ಷಕರು ಎಫ್.ಎಸ್.ಜಾಲಿಹಾಳ, ಕಾಶಪ್ಪ ಚಲವಾದಿ ಇದ್ದರು.




