
ರಾಮನಗುಡ್ಡ ಜಲಾಶಯಕ್ಕೆ ಕಾವೇರಿ ನದಿ ನೀರನ್ನು ಚಾಲನೆ ನೀಡಿದ : ಶಾಸಕ ಎಮ್ ಆರ್ ಮಂಜುನಾಥ್ .
Cauvery river water released to Ramanagudda reservoir: MLA MR Manjunath.

ವರದಿ:ಬಂಗಾರಪ್ಪ .ಸಿ .

ಹನೂರು : ರಾಮನಗುಡ್ಡ ಕೆರೆಗೆ ನೀರು ತುಂಬಿಸುವ ಯೋಜನೆಗೆ ಶಾಸಕ ಎಂ.ಆರ್ ಮಂಜುನಾಥ್ ರವರು ಅಧಿಕೃತವಾಗಿ ಚಾಲನೆ ನೀಡುವ ಮೂಲಕ ಈ ಭಾಗದ ರೈತರ ಕನಸನ್ನು ನನಸು ಮಾಡಿದ್ದೆನೆ ಎಂದು ಶಾಸಕ ಎಮ್ ಆರ್ ಮಂಜುನಾಥ್ ತಿಳಿಸಿದರು.ಹನೂರು ಕ್ಷೇತ್ರ ವ್ಯಾಪ್ತಿಯಲ್ಲಿನ ಜನರು ಅತಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಶ್ರಿತ ಕೃಷಿಯನ್ನು ನಂಬಿ ಬದುಕುತ್ತಿರುವ ರೈತರ ಜೀವನಕ್ಕೆ ನೆರವಾಗುವ ರಾಮನ ಗುಡ್ಡೆ ಕೆರೆಗೆ ನೀರು ತರುತ್ತಿರುವುದು ರೈತರು ಆರ್ಥಿಕವಾಗಿ ಸಬಲರಾಗಲು ಅನುಕೂಲ ಆಗಲಿದೆ ,ತಾಲೂಕಿನ ರಾಮನ ಗುಡ್ಡೆ ಕೆರೆಗೆ ಕಾವೇರಿ ನದಿ ನೀರನ್ನು ಹಳ್ಳದ ಮೂಲಕ ನೀರು ತುಂಬಿಸುವ ಕಾರ್ಯಕ್ಕೆ ಪೂಜೆ ಸಲ್ಲಿಸಿದರು. ರೈತನಿಗೆ ಬಹಳ ಮುಖ್ಯವಾಗಿ ನೀರು ವಿದ್ಯುತ್ ಕೊಟ್ಟರೆ ಬೇರೆನನ್ನು ಕೇಳುವುದಿಲ್ಲ. ಆ ನಿಟ್ಟಿನಲ್ಲಿ ಈಗಾಗಲೇ ಗುಂಡಾಲ್ ಜಲಾಶಯ ಭರ್ತಿಯಾಗಿದೆ ಅದರ ಅಚ್ಚುಕಟ್ಟು ಪ್ರದೇಶದಲ್ಲಿ ರೈತರು ವ್ಯವಸಾಯವನ್ನು ಮಾಡುತ್ತಿದ್ದಾರೆ. ಅದರಂತೆಯೇ ರಾಮನ ಗುಡ್ಡೆ ಕೆರೆಗೆ ಕಾವೇರಿ ನದಿ ಮೂಲದಿಂದ ನೀರು ಹರಿದು ಬರುತ್ತಿದ್ದು ಈ ಭಾಗದ ಸುಮಾರು 615ಕ್ಕೂ ಹೆಚ್ಚು ಎಕರೆಗೆ ನೀರು ಉಣಿಸಿದಂತಾಗುತ್ತದೆ. ಆ ನಿಟ್ಟಿನಲ್ಲಿ ಮುಂದುವರೆದ ಭಾಗವಾಗಿ ಹುಬ್ಬೆ ಹುಣಸೆ ಜಲಾಶಯಕ್ಕೆ ಹಾಗೂ ಉಡುತೋರೆ ಹಳ್ಳ ಜಲಾಶಯಕ್ಕೆ ಕಾವೇರಿ ನದಿ ಮೂಲದಿಂದ ನೀರು ಹರಿಸಲು ಸಾಕಷ್ಟು ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದು ಮುಂದಿನ ದಿನಗಳಲ್ಲಿ ಕಾವೇರಿ ನದಿ ನೀರು ತುಂಬಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಅಲ್ಲದೆ ಈಗಾಗಲೇ ಶಾಸಕರ ಅನುದಾನದಡಿಯಲ್ಲಿ ಸುಮಾರು ನಾಲ್ಕು ಕೋಟಿ ರೂಗಳ ವೆಚ್ಚದಲ್ಲಿ ಬರುವಂತಹ ಕೆರೆಗಳ ಹೂಳು ತೆಗೆಸುವ ಕಾರ್ಯ ಮಾಡಲಾಗುತ್ತದೆ. ಅಲ್ಲದೆ ರಾಮಾಪುರ ಹೋಬಳಿ ವ್ಯಾಪ್ತಿಯಲ್ಲಿ ಹಾಗೂ ಮಾರ್ಟಳ್ಳಿ ವ್ಯಾಪ್ತಿಯಲ್ಲಿ ಸಹ ಕೆರೆಗಳಿಗೆ ನೀರು ತುಂಬಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಜೊತೆಗೆ ಮಿನ್ನತ್ತು ಹಳ್ಳ ಹಾಗೂ ಗೋಪಿನಾಥನ ಜಲಾಶಯಗಳಿಗೆ ನೀರು ತುಂಬಿಸಲು ಅಗತ್ಯ ಕ್ರಮವಿಸಲಾಗುವುದು. ಇವುಗಳ ಜೊತೆಗೆ ವಿದ್ಯುತ್ ಶಿಕ್ಷಣ ಆರೋಗ್ಯ ಹಾಗೂ ರಸ್ತೆಗೆ ಸಂಬಂಧಿಸಿದಂತೆ ಈಗಾಗಲೇ ಅಗತ್ಯ ಕ್ರಮವಿಸಲಾಗಿದೆ ಎಂದು ತಿಳಿಸಿದರು.ಕಾವೇರಿ ನೀರಾವರಿ ನಿಗಮದ ಅಧೀಕ್ಷಕರಾದ ಮಹೇಶ್ ಮಾತನಾಡಿ ರಾಮನಗುಡ್ಡೆ ಕೆರೆಗೆ ನದಿ ಮೂಲದಿಂದ ನೀರು ಬರುತ್ತಿರುವುದು ರೈತರೆಲ್ಲರಿಗೂ ಸಂತೋಷದ ವಿಷಯ , ಕಳೆದ ಮೂರು ತಿಂಗಳ ನಿರಂತರ ಪರಿಶ್ರಮದಿಂದ ನದಿ ಮೂಲದಿಂದ ನೀರು ತೆಗೆದುಕೊಂಡು ಬರಲಾಗುತ್ತಿದೆ. ಶಾಸಕರ ಶ್ರಮ ಹಾಗೂ ಅಧಿಕಾರಿಗಳ ಶ್ರಮದ ಫಲವಾಗಿ ರಾಮನ ಗುಡ್ಡೆ ಕೆರೆಗೆ ನೀರು ತುಂಬುತ್ತಿದೆ. ರೈತರು ಇದರ ಸದುಪಯೋಗ ಪಡೆದುಕೊಂಡು ಪ್ರಶ್ನೆಗಳನ್ನು ಕೇಳುವ ಸಾಮರ್ಥ್ಯ ಬೆಳೆಸಿಕೊಂಡು ತಮ್ಮ ಜೀವನದಲ್ಲಿ ಆರ್ಥಿಕವಾಗಿ ಸದೃಢರಾಗಲು ಪ್ರಯತ್ನ ಮಾಡಬೇಕು ಎಂದರು.




