
Woman missing: Request for assistance in finding her
ಮಹಿಳೆ ಕಾಣೆ: ಪತ್ತೆಗೆ ಸಹಕರಿಸಲು ಮನವಿ
ಕೊಪ್ಪಳ ಡಿಸೆಂಬರ್ 22 (ಕರ್ನಾಟಕ ವಾರ್ತೆ): ಯಲಬುರ್ಗಾ ತಾಲೂಕಿನ ತುಮ್ಮರಗುದ್ದಿ ಗ್ರಾಮದ ಅಂದಮ್ಮ ಗಂಡ ಕೆರೆಬಸಪ್ಪ ಕಳಸಣ್ಣನವರ ಅವರ ಮಗಳಾದ 30 ವರ್ಷದ ನೇತ್ರಾವತಿ ಗಂಡ ಹನಮಂತಪ್ಪ ಕಿನ್ನಾಳ ಎಂಬ ಮಹಿಳೆ 2025ರ ಎಪ್ರಿಲ್ 21ರ ಬೆಳಿಗ್ಗೆ 5ಗಂಟೆಗೆ ಗಂಡನ ಊರಾದ ಕೋಮಲಾಪೂರದ ಮನೆಯಿಂದ ಮನೆ ಕೆಲಸಕ್ಕೆ ಹೋಗಿ ಬರುವುದಾಗಿ ಹೇಳಿ ಹೋಗಿ ಕಾಣೆಯಾಗಿದ್ದು, ಈವರೆಗೂ ಪತ್ತೆಯಾಗಿರುವುದಿಲ್ಲ. ಈ ಬಗ್ಗೆ ಕುಕನೂರು ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ:68/2025, ಕಲಂ ಮಹಿಳೆ ಕಾಣೆ ರೀತ್ಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತದೆ.
ಕಾಣೆಯಾದ ವ್ಯಕ್ತಿಯ ಚಹರೆ: ಕಾಣೆಯಾದ ಮಹಿಳೆಯು ಕೋಲು ಮುಖ, ಸಾದಗಪ್ಪು ಮೈ ಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು. ಕನ್ನಡ, ಭಾಷೆ ಮಾತನಾಡುತ್ತಾರೆ.
ಮೇಲ್ಕಂಡ ಚಹರೆಯ ಮಹಿಳೆಯ ಬಗ್ಗೆ ಯಾರಿಗಾದರೂ ಮಾಹಿತಿ ಇದ್ದಲ್ಲಿ ಅಥವಾ ದೊರೆತಲ್ಲಿ ಕುಕನೂರು ಪೋಲಿಸ್ ಠಾಣೆ ಮೊ.ಸಂ: 9480803750, ಅಥವಾ ದೂ. ಸಂ:08534-230333 ಹಾಗೂ
ಕೊಪ್ಪಳ ಎಸ್ಪಿ ಕಚೇರಿ ಸಂಖ್ಯೆ: 08539-230111 ಗೆ ಸಂಪರ್ಕಿಸಿ ಮಾಹಿತಿ ನೀಡಬೇಕು ಎಂದು ಕುಕನೂರು ಪೊಲೀಸ್ ಠಾಣೆಯ ಪ್ರಕಟಣೆ ತಿಳಿಸಿದೆ.





