Breaking News

ಗಂಗಾವತಿ : 6 ವರ್ಷದ ಬಾಲಕ ಕಾಲುಜಾರಿ ಬಿದ್ದು ಸಾವನ್ನಪ್ಪಿದ ಘಟನೆ

The short URL of the present article is: https://kalyanasiri.in/k9gs
Gangavathi: 6-year-old boy dies after falling off a cliff
Screenshot 2025 09 28 10 52 48 11 965bbf4d18d205f782c6b8409c5773a424610835659306123880

ಗಂಗಾವತಿ ನಗರದ ಆರನೇ ವಾರ್ಡ್ ಮಹಬೂಬ್ ನಗರದಲ್ಲಿ ಆರು ವರ್ಷದ ಬಾಲಕ ಆಜಾನ್ ದುರ್ಘಟನೆಯಲ್ಲಿ ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ಶನಿವಾರ ನಡೆದಿದೆ.

ಜಾಹೀರಾತು

ಮನೆ ಪಕ್ಕದ ಹಳ್ಳದ ಬಳಿ ಆಟವಾಡುತ್ತಿದ್ದ ಆಜಾನ್, ದುರ್ಗಮ್ಮನ ಹಳ್ಳಕ್ಕೆ ಕಾಲು ಜಾರಿ ಬಿದ್ದು ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ. ಈ ಘಟನೆಯಿಂದ ಗಂಗಾವತಿ ನಗರ ಪ್ರದೇಶದಲ್ಲಿ ಶೋಕಸಾಗರ ಆವರಿಸಿದೆ.

ಇದಕ್ಕೂ ಮುನ್ನ ಮಹಬೂಬ್ ನಗರದ ನಿವಾಸಿಗಳು ಸೇತುವೆಗೆ ತಡೆಗೋಡೆ ನಿರ್ಮಿಸಲು ಹಲವು ಬಾರಿ ನಗರಸಭೆ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ,

ನಗರಸಭೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಇಂತಹ ದುರಂತ ಸಂಭವಿಸಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಘಟನಾ ಸ್ಥಳಕ್ಕೆ ನಗರಸಭೆ ಪೌರಾಯುಕ್ತ ವಿರುಪಾಕ್ಷಮೂರ್ತಿ ಆಗಮಿಸಿದಾಗ, ಸ್ಥಳೀಯರು ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ವಾರ್ಡ್ ಸದಸ್ಯರು ಸಹ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸಾರ್ವಜನಿಕರು ನಗರಸಭೆಯ ವಿರುದ್ಧ ಕಿಡಿಕಾರುತ್ತ, “ಈಗಲಾದರೂ ತಡೆಗೋಡೆ ನಿರ್ಮಿಸದಿದ್ದರೆ ಹಾಗೂ ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಬೀದಿಗೆ ಇಳಿದು ನಗರಸಭೆ ಮುಂದೆ ಭಾರೀ ಪ್ರತಿಭಟನೆಗೆ ಮುಂದಾಗುತ್ತೇವೆ” ಎಂದು ನಗರ ಸಭೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

The short URL of the present article is: https://kalyanasiri.in/k9gs

About Mallikarjun

Check Also

img202510021202142.jpg

ಸ್ವಾಭಿಮಾನಿ ಕಲ್ಯಾಣ ಪರ್ವ 12ನೇ ಶತಮಾನದ ಶರಣರ ಸ್ವಾಭಿಮಾನದ ಪ್ರತೀಕ

Swabhimani Kalyana Parva is a symbol of the self-respect of the 12th century Sharanas. ಹನ್ನೆರಡನೇ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.