
Hanur: MLA M R Manjunath launched the construction of a 2 crore-worth chak dam and retaining wall.

ವರದಿ : ಬಂಗಾರಪ್ಪ ಸಿ .
ಹನೂರು : ಪ್ರಸಿದ್ಧ ಯಾತ್ರ ಸ್ಥಳವಾದ ಶ್ರೀ ಮಲೆ ಮಹದೇಶ್ವರ ಕ್ಷೇತ್ರದಲ್ಲಿನ ಸಾಲೂರು ಮಠದ ರಸ್ತೆಯಲ್ಲಿ ಚೆಕ್ ಡ್ಯಾಂ ಮತ್ತು ತಡೆಗೋಡೆ ನಿರ್ಮಾಣಕ್ಕೆ ಚಾಲನೆ ನೀಡಿ ನ
ಭೂಮಿ ಪೂಜೆ ನೆರವೇರಿಸಿದ ಶಾಸಕ ಎಂ. ಆರ್ ಮಂಜುನಾಥ್ ರವರು
ನಂತರ ಮಾತನಾಡಿದ ಅವರು ನಮ್ಮ
ತಾಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಶ್ರೀ ಮಲೆ ಮಹದೇಶ್ವರ ಬೆಟ್ಟದಲ್ಲಿ ಸಾಲೂರು ಬೃಹನ್ ಮಠದ ಬಳಿ ಅಂದಾಜು ವೆಚ್ಚ ರೂ 2ಕೋಟಿಗಳ ವೆಚ್ಚದಲ್ಲಿ ಸಣ್ಣ ನೀರಾವರಿ ಇಲಾಖೆಯ ವತಿಯಿಂದ ಚೆಕ್ ಡ್ಯಾಮ್ ಮತ್ತು ತಡೆಗೋಡೆ ನಿರ್ಮಾಣ ಕಾಮಗಾರಿಯಿಂದ ಅನೇಕ ಜನರಿಗೆ ಸಹಕಾರಿಯಾಗಲಿದೆ ಮತ್ತು ಗುತ್ತಿಗೆದಾರರು ಗುಣಮಟ್ಟ ಕಾಮಗಾರಿಯನ್ನು ಕೈಗೊಳ್ಳುವಂತೆ ಸೂಚಿಸಿದರು.
ಇದಲ್ಲದೆ ಸಾಲೂರು ಮಠದ ಸುತ್ತ ನಿರ್ಮಿಸುವ ತಡೆಗೋಡೆಯನ್ನು ಅಚ್ಚುಕಟ್ಟಾಗಿ ನಿರ್ಮಿಸಿ ಭಕ್ತದಿಗಳಿಗೆ ಅನುಕೂಲ ಕಲ್ಪಿಸುವಂತೆ ಸೂಚಿಸಿದರು. ಈ ಪುಣ್ಯ ಸ್ಥಳದಲ್ಲಿ ಯಾವುದೇ ರೀತಿಯಾದ ಲಾಭವನ್ನು ಕಾಣದೆ ಗುಣಮಟ್ಟದ ವಸ್ತುಗಳನ್ನು ಬಳಸಿ ಕಾಮಗಾರಿಯನ್ನು ಪೂರ್ಣಗೊಳಿಸಬೇಕು,ಇಲ್ಲಿಗೆ ಬರುವಂತಹ ಭಕ್ತರು ಆರೈಸುವುದೇ ನಿಮ್ಮ ಬಾಳಲ್ಲಿ ನೆಮ್ಮದಿಯನ್ನು ತರುತ್ತದೆ. ಮುಂದಿನ ದಿನಗಳಲ್ಲಿ ಸಾಲೂರು ಮಠವು ಅತೀ ಹೆಚ್ಚು ಭಕ್ತರನ್ನು ಸೆಳೆಯುವಂತಾಗಿ ಭಕ್ತರು ನೆಮ್ಮದಿಯಿಂದ ವಾಸ್ತವ್ಯವನ್ನು ಹೂಡುವಂತಾಗಿ ತಮ್ಮ ಕಷ್ಟಗಳನ್ನು ಪರಿಹರಿಸಿಕೊಳ್ಳುವಂತವಂಗಾಲಿ ಎಂದು ತಿಳಿಸಿದರು.

ಇದೇ ಸಂರ್ಭದಲ್ಲಿ ಶಾಂತಮಲ್ಲಿಕಾರ್ಜುನ ಸ್ವಾಮಿಗಳು, ಪ್ರಾಧಿಕಾರದ ಕಾರ್ಯದರ್ಶಿ ಎ ಈ ರಘು, ಉಪ ಕಾರ್ಯದರ್ಶಿ ಚಂದ್ರಶೇಖರ್, ಸಣ್ಣ ನೀರಾವರಿ ಇಲಾಖೆಯ ಎಇಇ ಅಭಿಲಾಷ್, ಎ.ಇ ಪ್ರತಾಪ್,ಹಾಗೂ ಮುಖಂಡರುಗಳಾದ ವಿಜಯಕುಮಾರ್ , ಮಂಜೇಶ್ ಗೌಡ, ಚಿನ್ನವೆಂಕಟ್, ನವೀನ್,ನಾಗರಾಜು ಹಾಗೂ ಇನ್ನಿತರರು ಹಾಜರಿದ್ದರು.




