
Don't burn trees: Lakshmi Mahesh.

ವರದಿ: ಬಂಗಾರಪ್ಪ .ಸಿ.
ಚಾಮರಾಜನಗರ :ಗುಂಡ್ಲುಪೇಟೆ ಯಲ್ಲಿ ರಾಷ್ಟ್ರಿಯ ಹೆದ್ದಾರಿ 766 ರಲ್ಲಿ ಬೆಳೆದಿರುವ ಸುಮಾರು 137 ಮರಗಳನ್ನು ತೆರವುಗೊಳಿಸುವ ಸಂಬಂಧ ಸಾರ್ವಜನಿಕರಿಂದ ಆಕ್ಷೇಪಣೆ ಅಹವಾಲು ಸ್ವೀಕರಿಸಲು ಸಾಹಾಯಕ ಅರಣ್ಯ ಸಂರಕ್ಷಣಾ ಧಿಕಾರಿಗಳು ಕರೆದಿದ್ದ ಸಾರ್ವಜನಿಕ ಸಭೆಯಲ್ಲಿ, ರಾಷ್ಟ್ರೀಯ ಹೆದ್ದಾರಿ ಪ್ರಧಿಕಾರದ ಅಧಿಕಾರಿಗಳು ಹಾಜರಿದ್ದರು.
ಕರ್ನಾಟಕ ರಾಜ್ಯ ಮೂಲಭೂತ ಹಕ್ಕುಗಳ ರಕ್ಷಣೆ ಹಾಗೂ ಭ್ರಷ್ಟಾಚಾರ ನಿರ್ಮೂಲನಾ ಸಮಿತಿ (ರಿ ) ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಲಕ್ಷೀಮಹೇಶ್ ಮಾತನಾಡಿ, ಮರಗಳ್ಳನ್ನು ಕಡಿಯುವ ಉದ್ದೇಶ ಕೈಬಿಟ್ಟು ಪರ್ಯಾಯ ಮಾರ್ಗ ಕಂಡುಕೊಳ್ಳುವತೆ ತಿಳಿಸಿದರು ಮುಂದು ವರೆದು ವಿಶಪ್ರಾಷಣ ಮಾಡಿ 30ಕೋತಿಗಳನ್ನ ಕೊಂದ ಆರೋಪಿಗಳನ್ನು ಪತ್ತೆಮಾಡುವಲ್ಲಿ ವಿಫಲರಾದ ಅರಣ್ಯ ಅಧಿಕಾರಿಗಳ ವಿಪಲ್ಯವನ್ನು ಖಂಡಿಸಿದರು,ಕ್ರಷರ್ ಹಾಗೂ ಕ್ವಾರೇಗಳ ಟಿಪ್ಪರ್ ಹಾವಳಿ ಯಿಂದ ಹೆದ್ದಾರಿಯಲ್ಲಿ ಅಪಘಾತ ಹೆಚ್ಚಾಗಿದ್ದು ಇವುಗಳ ಮೇಲೆ ಕ್ರಮ ಜರುಗಿಸದೆ ಪಾಪದ ಮರಗಳ ಮಾರಣಹೋಮ ನೆಡೆಸಲು ಉದ್ದೇಸಿರುವ ಹೆದ್ದಾರಿ ಪ್ರಧಿಕಾರದ ನೆಡೆಯನ್ನು ಖಂಡಿಸಿದರು. ಈ ಸಂದರ್ಭದಲ್ಲಿ ಚಾಮರಾಜನಗರ ಜಿಲ್ಲಾ ಗೌರವ ಅಧ್ಯಕ್ಷರು ನಟರಾಜು ಹಾಗೂ ಜಿಲ್ಲಾ ಉಪಾಧ್ಯಕ್ಷರು ಲಕ್ಕೂರು ಕುಮಾರ ಉಪಸ್ಥಿತರಿದ್ದರು.
ಸಭೆಯಲ್ಲಿ ಪರಿಸರ ಬಹಳಗದ ಹೋರಾಟಗಾರರು ಹಾಗೂ ಗುಂಡ್ಲುಪೇಟೆ ಯ ಪರಿಸರವಾದಿಗಳು ಮಂಜು, ಕುಮಾರ್ ದೊರೆಸ್ವಾಮಿ, ಬಾಲು ಹಂಗಳಪುರ ರೇವಣ್ಣ,ಶೈಲೇಶ್ . ಅಕ್ಬರ್, ಸೇರಿದಂತೆ ಇನ್ನಿತರರು ಹಾಜರಿದ್ದರು.





