
ಎಂ.ಜೆ. ಶ್ರೀನಿವಾಸ ಅವರಿಗೆ ಸಂಪಾದಕ ರತ್ನ ಪ್ರಶಸ್ತಿ

Editor Ratna Award to M.J. Srinivas
ಗಂಗಾವತಿ, ಡಿ.18: ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘ(ರಿ) ತುಮಕೂರು ಜಿಲ್ಲಾ ಘಟಕದಿಂದ ಕೊಡಮಾಡುವ 2024-25ನೇ ಸಾಲಿನ *ಸಂಪಾದಕ ರತ್ನ ದತ್ತಿನಿಧಿ ರಾಜ್ಯ ಪ್ರಶಸ್ತಿ*ಗೆ ಮಾನವೀಯ ಮೌಲ್ಯವುಳ್ಳ ಪರಿಣಾಮಕಾರಿ ವರದಿಗಳಿಗಾಗಿ ಪ್ರಜಾಪರ್ವ ಕನ್ನಡ ದಿನಪತ್ರಿಕೆ ಸಂಪಾದಕ ಎಂ.ಜೆ.ಶ್ರೀನಿವಾಸ ಅವರನ್ನು ಆಯ್ಕೆ ಮಾಡಲಾಗಿದೆ.
ಪ್ರಶಸ್ತಿಯು ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ಬೆಂಗಳೂರಿನಲ್ಲಿ ಡಿ.21ರ ಭಾನುವಾರದಂದು ನಡೆಯುವ ರಾಷ್ಟ್ರೀಯ ಪತ್ರಿಕಾ ದಿನಾಚರಣೆ, ಸಂಪಾದಕರ ರತ್ನ ರಾಜ್ಯ ದತ್ತಿ ನಿಧಿ ಪ್ರಶಸ್ತಿ ಹಾಗೂ ರಾಜಕಾರ್ಯಕಾರಿಣಿ ಸಭೆಯಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಜಿಲ್ಲಾಧ್ಯಕ್ಷ ಜಿ.ಕರುಣಾಕರ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಎನ್.ಮಂಜುನಾಥ ತಿಳಿಸಿದ್ದಾರೆ.
ಸಾಮಾಜಿಕ ಕಳಕಳಿಯ ವರದಿಗಳಿಂದ ಕೊಪ್ಪಳ ಜಿಲ್ಲೆಯ ಮನೆ ಮಾತಾಗಿರುವ ಪ್ರಜಾಪರ್ವ ದಿನಪತ್ರಿಕೆಯ ಸಂಪಾದಕ ಎಂ.ಜೆ ಶ್ರೀನಿವಾಸ ಅವರಿಗೆ ಸಂಪಾದಕ ರತ್ನ* ಪ್ರಶಸ್ತಿ ಲಭಿಸಿದ್ದಕ್ಕೆ ಪ್ರಜಾಪರ್ವ ದಿನಪತ್ರಿಕೆಯ ಸಂಸ್ಥಾಪಕ, ಗೌರವ ಸಂಪಾದಕ ವಿಶ್ವನಾಥ ಬೆಳಗಲ್ ಮಠ, ಉಪ ಸಂಪಾದಕ ಶ್ರೀನಿವಾಸ ದೇವಿಕೇರಿ,ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘದ ಕೊಪ್ಪಳ ಜಿಲ್ಲಾ ಕಾರ್ಯಕಾರಣಿ ಸದಸ್ಯರಾದ ಕೆ.ಎಂ.ಶರಣಯ್ಯಸ್ವಾಮಿ, ಹನಮೇಶ ಬಟಾರಿ,ವಸಂತಕುಮಾರ, ಹಾಗೂ ಪತ್ರಿಕಾ ಬಳಗ, ಪತ್ರಕರ್ತ ಮಿತ್ರರು ಹಾಗೂ ಹಿತೈಷಿಗಳು ಹರ್ಷ ವ್ಯಕ್ತಪಡಿಸಿ ಶುಭಹಾರೈಸಿದ್ದಾರೆ.




