ಮೆಕ್ಕೆಜೋಳಕ್ಕೆ ಬೆಲೆ ವ್ಯತ್ಯಾಸದ ಮೊತ್ತ ಪಾವತಿ
Payment of price difference amount for maize
ಕೊಪ್ಪಳ ಜನವರಿ 14 (ಕರ್ನಾಟಕ ವಾರ್ತೆ): 2025-26ನೇ ಸಾಲಿಗೆ ಮುಂಗಾರು ಹಂಗಾಮಿಗೆ ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಯಡಿಯಲ್ಲಿ ಮೆಕ್ಕೆಜೋಳಕ್ಕೆ ಬೆಲೆ ವ್ಯತ್ಯಾಸದ ಮೊತ್ತ ಪಾವತಿಸಲಾಗುವುದು ಎಂದು ಕೊಪ್ಪಳ ಕೃಷಿ ಮಾರಾಟ ಇಲಾಖೆ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ಸರ್ಕಾರದ ಮಾರ್ಪಾಡು ಆದೇಶ ಸಂಖ್ಯೆ: ಸಿಒ 243 ಎಂಆರ್ ಇ 2025 ಬೆಂಗಳೂರು ದಿನಾಂಕ: 10-01-2026 ಆದೇಶದಂತೆ ಕೊಪ್ಪಳ ಜಿಲ್ಲೆಯ ಎಲ್ಲಾ ರೈತ ಬಾಂಧವರಿಗೆ ಈ ಮೂಲಕ ಕೋರುವುದೇನೆಂದರೆ 2025-26ನೇ ಸಾಲಿಗೆ ಮುಂಗಾರು ಹಂಗಾಮಿಗೆ ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಯಡಿಯಲ್ಲಿ ಎಫ್.ಎ.ಕ್ಯೂ ಗುಣಮಟ್ಟದ ಮೆಕ್ಕೆಜೋಳವನ್ನು ಮಾರುಕಟ್ಟೆಗಳಲ್ಲಿ ಮೆಕ್ಕೆಜೋಳದ ಮಾದರಿ ಧಾರಣೆಯು ಏನೇ ಇದ್ದರೂ ಸಹ ಪ್ರತಿ ಕ್ವಿಂಟಾಲ್ಗೆ ಗರಿಷ್ಠ ರೂ. 250 ರಂತೆ ಸರ್ಕಾರದಿಂದ ಬೆಲೆ ವ್ಯತ್ಯಾಸ ಪಾವತಿಸಲಾಗುವದು. ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆ ಅಥವಾ ಉಪ ಮಾರುಕಟ್ಟೆ ಪ್ರಾಂಗಣಗಳ ಜೊತೆಗೆ ಕುಕನೂರು ತಾಲ್ಲೂಕಿನ ಪಿಎಸಿಎಸ್ ಮಂಗಳೂರು ಮೊ.ಸಂ: 9945631054, ಯಲಬುರ್ಗಾ ತಾಲ್ಲೂಕಿನ ಪಿಎಸಿಎಸ್ ಯಲಬುರ್ಗಾ ಮೊ.ಸಂ: 9611465666, ಕೊಪ್ಪಳ ತಾಲ್ಲೂಕಿನ ಪಿಎಸಿಎಸ್ ಅಳವಂಡಿ ಮೊ.ಸಂ: 9945809338, ಈ ಮೂರು ಸ್ಥಳಗಳಲ್ಲಿಯೂ ಸಹ ರೈತರ ನೋಂದಣಿ ಕೇಂದ್ರಗಳನ್ನು ತೆರೆಯಲಾಗಿರುತ್ತದೆ.
ಆದ್ದರಿಂದ ಕೊಪ್ಪಳ ಜಿಲ್ಲೆಯ ಎಲ್ಲಾ ರೈತ ಬಾಂಧವರು ಈ ಎಲ್ಲಾ ಸ್ಥಳಗಳಲ್ಲಿ ಆಧಾರ ಕಾರ್ಡ, ಫ್ರೂಟ್ಸ್ ಗುರುತಿನ ಸಂಖ್ಯೆಯೊAದಿಗೆ ಎನ್.ಇ.ಎಂ.ಎಲ್ (NEML) ತಂತ್ರಾಂಶದಲ್ಲಿ ಬಯೋಮೆಟ್ರಿಕ ಮೂಲಕ ನೋಂದಣೆ ಮಾಡಿಸಿಕೊಂಡು ಎಪಿಎಂಸಿ ಮಾರುಕಟ್ಟೆ ಪ್ರಾಂಗಣಗಳಲ್ಲಿ ಯುಎಂಪಿ ವೇದಿಕೆಯಲ್ಲಿ ಮೆಕ್ಕೆಜೋಳ ಮಾರಾಟ ಮಾಡುವಂತೆ ಜಿಲ್ಲೆಯ ರೈತ ಬಾಂಧವರಲ್ಲಿ ಈ ಮೂಲಕ ಮನವಿ ಮಾಡಿದೆ.

ಹೆಚ್ಚಿನ ಮಾಹಿತಿಗಾಗಿ ಆಯಾ ತಾಲ್ಲೂಕಿನ ಎಪಿಎಂಸಿ ಕಾರ್ಯದರ್ಶಿಯವರು ಮತ್ತು ಶಾಖಾ ವ್ಯವಸ್ಥಾಪಕರು, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಕೊಪ್ಪಳ ಇವರಿಗೆ ಸಂಪರ್ಕಿಸುವಂತೆ ಕೊಪ್ಪಳ ಕೃಷಿ ಮಾರಾಟ ಇಲಾಖೆಯ ಪ್ರಕಟಣೆ ತಿಳಿಸಿದೆ.


