Breaking News

ರಾಜ್ಯದಲ್ಲಿ ವಿಲೀನದ ಹೆಸರಿನಲ್ಲಿ ಹಳ್ಳಿಗಳ ಸರ್ಕಾರಿ ಶಾಲೆಗಳನ್ನು ಮುಚ್ಚಬಾರದು -ಯು ನಾಗರಾಜ ಅಗ್ರಹ

The short URL of the present article is: https://kalyanasiri.in/c6bq

ರಾಜ್ಯದಲ್ಲಿ ವಿಲೀನದ ಹೆಸರಿನಲ್ಲಿ ಹಳ್ಳಿಗಳ ಸರ್ಕಾರಿ ಶಾಲೆಗಳನ್ನು ಮುಚ್ಚಬಾರದು –-ಯು ನಾಗರಾಜ ಅಗ್ರಹ

ಜಾಹೀರಾತು
U Nagaraja demands that government schools in villages should not be closed in the name of merger in the state

Screenshot 2025 11 17 18 42 44 65 6012fa4d4ddec268fc5c7112cbb265e75991738621484722327

ಗಂಗಾವತಿ : ನಗರದಲ್ಲಿ ಶ್ರೀ ದೇವರಾಯ ಸರ್ಕಲ್ ನಲ್ಲಿಎಸ್.ಎಫ್.ಐ ಸಂಘಟನೆಯಿಂದ ತಾಲೂಖ ಜಿಲ್ಲಾ ಸಮಿತಿ ವತಿಯಿಂದ ತಹಶೀಲ್ದಾರ್ ಗೆ ಮುಖಾಂತರ ಮನವಿ ಸಲ್ಲಿಸಲಾಯಿತು ಮುಖ್ಯಮಂತ್ರಿಗಳಿಗೆ
ಈ ಸಂದರ್ಭದಲ್ಲಿ ತಾಲೂಕ ಅಧ್ಯಕ್ಷರು ಯು ‌. ನಾಗರಾಜ ಮಾತನಾಡಿ ಸರ್ಕಾರ ವಿಲೀನ ಮಾಡುವ ಕ್ರಮದಿಂದ ರಾಜ್ಯದಲ್ಲಿ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯೇ ನಾಶವಾಗುತ್ತದೆ. ಎನ್.ಇ.ಪಿ ಯನ್ನು ರಾಜ್ಯ ಸರ್ಕಾರ ರದ್ದು ಮಾಡಿದೆ ರಾಜ್ಯ ಶಿಕ್ಷಣ ನೀತಿಯನ್ನು ಜಾರಿ ಮಾಡಿದೆ. ಆದರೆ ಹೆಸರನ್ನು ಮಾತ್ರ ಬದಲಾವಣೆ ಮಾಡಿ ಎನ್.ಇ.ಪಿ ಯಲ್ಲಿದ್ದ ಅಂಶಗಳನ್ನು ಜಾರಿ ಮಾಡಲು ಸರ್ಕಾರ ಮುಂದಾಗಿರುವುದು ಗ್ರಾಮೀಣ ಭಾಗದ ಬಡ, ಹಿಂದುಳಿದ, ಕೂಲಿ ಕಾರ್ಮಿಕ, ದಲಿತ, ಅಲ್ಪಸಂಖ್ಯಾತರ ವಿದ್ಯಾರ್ಥಿಗಳನ್ನು ಶಿಕ್ಷಣದಿಂದ ವಂಚಿತಗೊಳಿಸುವ ನೀತಿ ಎದ್ದು ಕಾಣುತ್ತಿದೆ.
೭೦೦ ಪಂಚಾಯತಿಗಳ ಮಟ್ಟದಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಗಳಾಗಿ ಉನ್ನತೀಕರಿಸಿ ಸುತ್ತಮುತ್ತಲಿನ ಸರ್ಕಾರಿ ಶಾಲೆ / ಪದವಿ ಪೂರ್ವ ಕಾಲೇಜುಗಳನ್ನು ವಿಲೀನಗೊಳಿಸಲು ಮುಂದಾಗಿರುವ ಸರ್ಕಾರದ ಕ್ರಮವನ್ನು ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್.ಎಫ್.ಐ) ಗಂಗಾವತಿ ತಾಲೂಕ ಸಮಿತಿ ಬಲವಾಗಿ ವಿರೋಧಿಸುತ್ತದೆ.

ವಿಲೀನದ ಹೆಸರಿನಲ್ಲಿ ಹಳ್ಳಿಗಳ ಸರ್ಕಾರಿ ಶಾಲೆಗಳನ್ನು ಮುಚ್ಚಬಾರದು ಹಾಗೂ ರಾಜ್ಯದಲ್ಲಿರುವ ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಕರ್ಯ ಒದಗಿಸಬೇಕು ಮತ್ತು ಖಾಲಿ ಇರುವ ೫೯,೦೦೦ ಶಿಕ್ಷಕರ ನೇಮಕಾತಿ ಮಾಡಿಕೊಳ್ಳಬೇಕು, ಇಲ್ಲದಿದ್ದಲ್ಲಿ ವಿಧಾನಸೌಧವನ್ನು ಮುತ್ತಿಗೆ ಹಾಕುತ್ತೇವೆ ಎಂದು ಆಗ್ರಹಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್.ಎಫ್.ಐ) ಮುಖಾಂತರ ಮುಖ್ಯಮಂತ್ರಿಗಳಿಗೆ ಎಚ್ಚರಿಕೆಯನ್ನು ಹೇಳಿದರು . ಈಸಂದರ್ಭದಲ್ಲಿ ‌ ‌ ಜಿಲ್ಲಾ ಸಮಿತಿ ಸದಸ್ಯರಾದ ,ಶರಣಬಸವ , ಲಕ್ಷ್ಮಣ ,ದೊಡ್ಡ ಬಸವರಾಜ್
, ವಿಜಯಕುಮಾರ್ ವಿದ್ಯಾರ್ಥಿಗಳಾದ , ರಮೇಶ್ ,
ಪ್ರಜ್ವಲ ,ಮಹೇಶ್ ,ಮಹಬೂಬ್ ಹೋರಾಟದಲ್ಲಿ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು

The short URL of the present article is: https://kalyanasiri.in/c6bq

About Mallikarjun

Check Also

screenshot 2025 11 19 18 50 08 70 6012fa4d4ddec268fc5c7112cbb265e7.jpg

ಸುಳ್ವಾಡಿ ದುರಂತಕ್ಕೆ ಕಾರಣರಾದ ಇಮ್ಮಡಿ ಮಹಾದೇವಸ್ವಾಮಿಗೆ ಜಾಮೀನು ಸಂತ್ರಸ್ತರ ಆಕ್ರೋಶ . Victims' anger over bail granted to …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.