
ಶ್ರೀ ದುರ್ಗಾದೇವಿ ಜಾತ್ರಾ ಮಹೋತ್ಸವ ಅದ್ಧೂರಿ ಕುಂಭ ಮೆರವಣೆಗೆ
ವಿ.ಪ. ಮಾಜಿ ಸದಸ್ಯಹೆಚ್.ಆರ್.ಶ್ರೀನಾಥ್ ಚಾಲನೆ

Shree Durga Devi Jatra Mahotsava Adhuri Kumbh procession
V.P. Ex-member H.R.Srinath drive
ಗಂಗಾವತಿ: ಬಹುಜನರ ಆರಾಧ್ಯ ನಗರ ದೇವತೆ ಶ್ರೀ ದುರ್ಗಾದೇವಿ ನಾಲ್ಕು ದಿನಗಳ ಜಾತ್ರಾಮಹೋತ್ಸವದ ಪ್ರಥಮ ದಿನವಾದ ಇಂದು ನಗರದ ಕಲ್ಮಠದ ಬಳಿ ಇರುವ ಶ್ರೀ ಗಾಳೆಮ್ಮ ದೇವಿ ದೇವಸ್ಥಾನದಿಂದರೆಗೆ ೨೫೧ ಕ್ಕು ಹೆಚ್ಚು ಕುಂಭ ಹೊತ್ತ ಮಹಿಳೆಯರೊಂದಿಗೆ ಬಾಜಾ ಭಜಂತ್ರಿ, ಡೊಳ್ಳು ಕುಣಿತ ಹಾಗು ವೈಭವದ ವಾದ್ಯ ಭಜನೆ ಮೇಳಗಳೊಳಗೂಡಿ ಅದ್ಧೂರಿ ಮೆರವಣೆಗೆ ಜರುಗಿತು.
ನಗರ ಶ್ರೀ ಕಲ್ಮಠದ ಹತ್ತಿರದ ಗಾಳೆಮ್ಮ ದೇವಸ್ಥಾನದಿಂದ ಬಸವಣ್ಣ ವೃತ್ತ, ಗಾಂಧಿ ವೃತ್ತ, ಗಣೇಶ ವೃತ್ತದೊಂದಿಗೆ ಶ್ರೀ ದುರ್ಗಾದೇವಿ ದೇವಸ್ಥಾನ ಸೇರಿತು. ನಂತರ ದೇವಿಯ ದೇವಸ್ಥಾನದಲ್ಲಿ ಸಂಕಲ್ಪ ದುರ್ಗಾಸಪ್ತಪತಿ ಪಾರಾಯಣ ಜರುಗಿತು ದೇವಸ್ಥಾನ ಸಮಿತಿ ಅಧ್ಯಕ್ಷ ಜೋಗದ ನಾರಾಯಣಪ್ಪ ನಾಯಕ ದಂಪತಿಗಳು ಪೂಜಾ ಕಂಕೈರ್ಯದಲ್ಲಿ ಭಾಗವಹಿಸಿದ್ದರು. ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ಯೊಂದಿಗೆ ಸಂಜೆ ಕುಂಕಮಾರ್ಚನೆ ಧಾರ್ಮಿಕ ವಿಧಿವಿಧಾನಗಳೊಂದಿಗೆ ನಡೆಸಲಾಯಿತು.
ಕಲ್ಮಠದ ಶ್ರೀ ಕೊಟ್ಟೂರೇಶ್ವರ ಶ್ರೀಗಳು, ವಿಧಾನ ಪರಿಷತ್ ಮಾಜಿ ಸದಸ್ಯ ಹೆಚ್.ಆರ್.ಶ್ರೀನಾಥ್, ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ, ಮಾಜಿ ಸಂಸದ ಶಿವರಾಮಗೌಡ, ಪ್ರಮುಖರಾದ ಲಲಿತಾರಾಣಿ ಶ್ರೀರಂಗದೇವರಾಯಲು, ಕೆ.ಕಾಳಪ್ಪ, ಸಿಂಗನಾಳ ವಿರುಪಾಕ್ಷಪ್ಪ, ಬ ನೆಕ್ಕಂಟಿ ಸೂರಿಬಾಬು, ನರಸಪ್ಪ ಅಮರಜ್ಯೋತಿ, ಜೋಗದ ಹನುಮಂತಪ್ಪ ನಾಯಕ, ವೀರಭದ್ರಪ್ಪ ನಾಯಕ, ಬಸಪ್ಪ ನಾಯಕ, ಸುನಿತಾ ಶಾವಿ, ಗೀತಾ ವಿಕ್ರಮ್, ಜಿ.ಶ್ರೀಧರ, ಸಾಗರ ಮುನವಳ್ಳಿ, ಎಫ್ ರಾಘು, ಜೋಗದ ಕೃಷ್ಣಾ ನಾಯಕ, ಅಂಜಿನಪ್ಪ, ಬಿ.ರಾಜು ಇತರರಿದ್ದರು.




