
ಗಂಗಾವತಿ,: ಶ್ರದ್ಧೆಯಿಂದ ಅಭ್ಯಾಸ ಮಾಡಿದರೆ ಗುರಿ ಸಾಧನೆ ಸಾಧ್ಯ ಎಂದು ಪೊಲೀಸ್ ಉಪ ವಿಭಾಗಾಧಿಕಾರಿ ಶ್ರೀ ಸಿದ್ದಲಿಂಗಪ್ಪ ಗೌಡ, ಹೇಳಿದರು.
ಅವರು ಶ್ರೀ ಚನ್ನಮಲ್ಲಿಕಾರ್ಜುನ ಟ್ರಸ್ಟ್ ಕಮಿಟಿಯ ಸಿಬಿಎಸ್ ಉಚಿತ ಕೋಚಿಂಗ್ ಸೆಂಟರ್ ನ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡುತ್ತಾ ವಿದ್ಯಾರ್ಥಿಗಳು ಶ್ರದ್ಧೆ ಪ್ರಾಮಾಣಿಕತೆ ಯಿಂದ ಅಭ್ಯಾಸ ಮಾಡಬೇಕು ಈಗಿನಿಂದಲೇ ಗುರಿಯನ್ನು ನಿರ್ಧರಿಸಿಕೊಂಡು ಗುರಿಯಡೆಗೆ ಗಮನಹರಿಸಿ ತಯಾರು ಮಾಡಿಕೊಂಡರೆ ಯಶಸ್ಸು ಸಾಧಿಸಲು ಸಾಧ್ಯವಾಗುತ್ತದೆ ಎಂದು ಗಂಗಾವತಿಯ ಪೊಲೀಸ್ ಉಪ ವಿಭಾಗಾಧಿಕಾರಿಗಳಾದ ಸನ್ಮಾನ್ಯ ಶ್ರೀ ಸಿದ್ದಲಿಂಗಪ್ಪಗೌಡ ಅಭಿಪ್ರಾಯ ಪಟ್ಟರು. ಅವರು ಶ್ರೀ ಚನ್ನಮಲ್ಲಿಕಾರ್ಜುನ ಟ್ರಸ್ಟ್ ಕಮಿಟಿಯ ಸಿಬಿಎಸ್ ಉಚಿತ ಕೋಚಿಂಗ್ ಸೆಂಟರ್ ಮಲ್ಲಿಕಾರ್ಜುನ ಮಠದ ವತಿಯಿಂದ ವಾಗಿರುವ 10ನೇ ತರಗತಿ ಮಕ್ಕಳ ಬೇಸಿಗೆ ಅವಧಿಯ ಸತತ 17ನೇ ವರ್ಷದ ಉಚಿತ ಕೋಚಿಂಗ್ ಸೆಂಟರ್ ನ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಬರೀ ಹಣ ವೇ ಪ್ರಾಮುಖ್ಯವಾಗಿರುವ ಇಂದಿನ ದಿನಮಾನಗಳಲ್ಲಿ ಉಚಿತವಾಗಿ ಸೇವೆ ಸಲ್ಲಿಸುವ ಶಿಕ್ಷಕರ ಕಾರ್ಯ ಅತ್ಯಂತ ಶ್ಲಾಘನೀಯ. ಈ ಉಚಿತ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರ ಎಲ್ಲ ಕುಟುಂಬ ವರ್ಗಕ್ಕೆ ಒಳಿತಾಗಲಿ ಎಂದು ಶುಭ ಹಾರೈಸಿದರು. ಗಂಗಾವತಿಯ ಖ್ಯಾತ ವಕೀಲರು ಹಾಗೂ ಪ್ರೇರಕ ಭಾಷಣಕಾರರಾದ ನಾಗರಾಜು ಗುತ್ತೇದಾರ್ ಅವರು ವೈಯಕ್ತಿಕವಾಗಿ ಉಚಿತವಾಗಿ ಸೇವೆ ಸಲ್ಲಿಸಿದ ಶಿಕ್ಷಕರಿಗೆ ಸನ್ಮಾನಿಸಿ ಮಾತನಾಡಿ ವಿದ್ಯಾರ್ಥಿಗಳಿಗೆ ಧೈರ್ಯ ಆತ್ಮವಿಶ್ವಾಸ ಬಹಳ ಮುಖ್ಯ ಆತ್ಮವಿಶ್ವಾಸದಿಂದ ಎಲ್ಲವನ್ನು ಎದುರಿಸಬಹುದು ಎಂದರು. ಶ್ರೀ ಮಠದ ಧರ್ಮದರ್ಶಿಗಳು ಹಾಗೂ ನಿವೃತ್ತ ಉಪನ್ಯಾಸಕರಾದ ಚಂದ್ರೇಗೌಡ ಪೊಲೀಸ್ ಪಾಟೀಲ್ ಮಾತನಾಡಿ ವಿದ್ಯಾರ್ಥಿ ಜೀವನ ಬಂಗಾರದ ಜೀವನ ಇದ್ದ ಹಾಗೆ ಅದನ್ನು ಉಳಿಸಿ ಬೆಳೆಸಿ ಕೊಳ್ಳಬೇಕೆಂದರು. ವಿದ್ಯಾರ್ಥಿಗಳು ವಿದ್ಯಾರ್ಥಿಗಳು ಬೇರೆಯವರಿಗಾಗಿ ಅಭ್ಯಾಸ ಮಾಡದೆ ತಮ್ಮ ಒಳಿತಿಗಾಗಿ ತಮ್ಮ ಜೀವನದ ಭವಿಷ್ಯತ್ತಿಗಾಗಿ ಚೆನ್ನಾಗಿ ಅಭ್ಯಾಸ ಮಾಡಬೇಕೆಂದರು. ಶ್ರೀಮಠದ ಹಿರಿಯ ಧರ್ಮ ದರ್ಶಿಗಳಾದ ಕೆ ಚನ್ನಬಸವಯ್ಯ ಸ್ವಾಮಿಗಳು ಅಧ್ಯಕ್ಷತೆ ವಹಿಸಿದ್ದರು. ಉಚಿತ ಕೋಚಿಂಗ್ ಸೆಂಟರ್ ಸಂಚಾಲಕರಾದ ಸಿದ್ದಲಿಂಗೇಶ್ವರ ಪೂಲಬಾವಿ ಪ್ರಾಸ್ತಾವಿಕವಾಗಿ ಮಾತನಾಡಿ 17 ವರ್ಷಗಳ ಕೋಚಿಂಗ್ ಸೆಂಟರ್ ನ ಇತಿಹಾಸ ಮೆಲುಕು ಹಾಕಿದರು ಹಾಗೂ ಈ ವರ್ಷದ ವಿದ್ಯಾರ್ಥಿಗಳು ತಮ್ಮ ಫಲಿತಾಂಶ ಬಂದ ನಂತರ ಶ್ರೀಮಠಕ್ಕೆತಮ್ಮ ಅಂಕಪಟ್ಟಿಯ ನಕಲು ಪ್ರತಿಯನ್ನು ನೀಡಲು ತಿಳಿಸಿದರು. ಶ್ರೀಮಠದಿಂದ ಅತಿ ಚಂಗ ಗಳಿಸಿದ ವಿದ್ಯಾರ್ಥಿಗಳಿಗೆ ಗೌರವ ಪೂರಕ ಶ್ರೀ ರಕ್ಷೆ ನೀಡಲಾಗುವುದು ಎಂದರು. ಹಾಗೂ ಉಚಿತವಾಗಿ ಸೇವಿಸಲಿಸಿರುವ ಶಿಕ್ಷಕರ ಕುಟುಂಬ ವರ್ಗಕ್ಕೆ ಚನ್ನಬಸವ ತಾತನವರು ಅಷ್ಟೈಶ್ವರ್ಯ ಕೊಟ್ಟು ಕಾಪಾಡಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮಠದ ಮ್ಯಾನೇಜರ್ ಶರಣಪ್ಪ ಬೂದುಗುಂಪಿ ಸಂಪನ್ಮೂಲ ಶಿಕ್ಷಕರಾದ ಶ್ರೀ ಬಸವರಾಜ್ ಬುಕನತ್ತಿ ವಿರೂಪಾಕ್ಷ ಗೌಡ ಪೊಲೀಸ್ ಪಾಟೀಲ್ , ಉಲ್ಲಾಸ್ ರೆಡ್ಡಿ ಶಿವಾನಂದ್ ತಿಮ್ಮಾಪುರ್ ಉಮೇಶ್ ಮುರಳಿ ಮಹೇಶ್ ಮುಕೇಶ್ ಸಚಿನ್ ಮುಂತಾದವರು ಹಾಜರಿದ್ದರು.
Kalyanasiri Kannada News Live 24×7 | News Karnataka
