ವರದಿ :ಬಂಗಾರಪ್ಪ ಸಿ .
ಹನೂರು:ತನ್ನ ಖಾತೆಯಲ್ಲಿ ಟ್ಟಿದ ಹಣವನ್ನು ಮನೆಗೆ ತೆಗೆದುಕೊಂಡು ಮನೆಗೆ ಹೋಗಲು ಎಟಿಎಂನಲ್ಲಿ ಸಹಾಯ ಮಾಡುವ ನೆಪದಲ್ಲಿ ವ್ಯಕ್ತಿಯೊಬ್ಬರನ್ನು ರೈತರೊಬ್ಬರು ತನ್ನ ಕಾರ್ಡು ನೀಡಿದಾಗ ಅಪರಿಚತರೊಬ್ಬ ವಂಚಿಸಿ ಹಣ ಲಪಟಾಯಿಸಿರುವ ಘಟನೆ ಹನೂರು ಪಟ್ಟಣದ ಕೆನರಾ ಬ್ಯಾಂಕ್‌ನ ಎಟಿಎಂ ಕೇಂದ್ರದಲ್ಲಿ ಸೋಮವಾರ ನಡೆದಿದೆ.
ತಾಲ್ಲೂಕಿನ ಕೌದಳ್ಳಿ ಜಿಪಂ ವ್ಯಾಪ್ತಿಯ ಕುರಟ್ಟಿ ಹೊಸೂರು ಗ್ರಾಮದ ರೈತ ಬಸವರಾಜು ಹಣ ಕಳೆದುಕೊಂಡ ವ್ಯಕ್ತಿ. ಘಟನೆ ವಿವರ: ಪಟ್ಟಣದ ಶ್ರೀ ಬೆಟ್ಟಳ್ಳಿ ಮಾರಮ್ಮ ಕಾಂಪ್ಲೆಕ್ಸ್ ನಲ್ಲಿರುವ ಕೆನರಾ ಬ್ಯಾಂಕ್‌ನ ಎಟಿಎಂಗೆ ತೆರಳಿದ ಬಸವರಾಜುರವರು ಎಟಿಎಂನಿಂದ ಹಣ ತೆಗೆದು ಕೊಳ್ಳಲು ಗೊತ್ತಾಗದೆ ಇದ್ದಾಗ ಎಟಿಎಂನಲ್ಲಿ ಹಣ ತೆಗೆದು ಕೊಂಡು ಬರುತ್ತಿದ್ದ ವ್ಯಕ್ತಿಯೋರ್ವನ ಸಹಾಯ ಕೇಳಿದ್ದಾರೆ. ಈ ವೇಳೆ ರೈತ ಕೇಳಿದ 5 ಸಾವಿರ ರೂ.ಗಳನ್ನು ಎಟಿಎಂನಿಂದ ತೆಗೆದುಕೊಟ್ಟು, ನಂತರ ರೈತನಿಗೆ ಬೇರೆ ಎಟಿಎಂ ಕಾರ್ಡ್ ಕೊಟ್ಟು ರೈತನ ಎಟಿಎಂ ಕಾರ್ಡ್‌ನಿಂದ 61 ಸಾವಿರ ರೂ. ಲಪಟಾಯಿಸಿಕೊಂಡು ಪರಾರಿಯಾಗಿ ದ್ದಾನೆ. ಈ ಸಂಬಂಧ ಹಣ ಕಳೆದುಕೊಂಡ ರೈತ ಹನೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕೆನರಾ ಬ್ಯಾಂಕ್ ಎಟಿಎಂಗೆ ತೆರಳಿ ಸಿಸಿಟಿವಿಯನ್ನು ಪರಿಶೀಲಿಸಿದ್ದು, ಆತನ ಪತ್ತೆಗೆ ಪೋಲಿಸರು ಬಲೆ ಬೀಸಿದ್ದಾರೆ.