Voting awareness program at the marriage ceremony of Hatty village of Koppal village

ಕೊಪ್ಪಳ ತಾಲ್ಲೂಕಿನ ಹ್ಯಾಟಿ ಗ್ರಾಮದ ಕಾಮನೂರು ಮದುವೆ ಸಮಾರಂಭದಲ್ಲಿ ಮತದಾನ ಜಾಗೃತಿ ಕಾರ್ಯಕ್ರಮವನ್ನು ತಾಲ್ಲೂಕಾ ಸ್ವೀಪ್ ಸಮಿತಿ ಕೊಪ್ಪಳ ಹಮ್ಮಿಕೊಂಡಿತ್ತು.
ಜಿಲ್ಲಾ ಚುನಾವಣಾ ರಾಯಭಾರಿಗಳಾದ ಡಾ. ಶಿವಕುಮಾರ್ ಮಾಲಿಪಾಟೀಲ್, ಪೂರ್ಣಿಮಾ ಏಳುಬಾವಿ, ಮೆಹಬೂಬ್ ಸಾಬ್ ಕಿಲ್ಲೇದಾರ್, ರಮ್ಯಾ ಹಾಗೂ ಕವಿಗಳಾದ ಸುರೇಶ ಕಂಬಳಿ, ಸಿ.ಬಿ ಪಾಟೀಲ್, ಚಿದಾನಂದ ಕೀರ್ತಿ ಪಾಲ್ಗೊಂಡಿದ್ದರು.
ಸ್ವೀಪ್ ಜಿಲ್ಲಾ ರಾಯಭಾರಿ ಪೂರ್ಣಿಮಾ ಏಳುಬಾವಿಯವರು ವಧುವರರಿಗೆ ಪ್ರತಿಜ್ಞಾವಿಧಿ ಭೋಧಿಸಿದರು. ಸಮಾರಂಭದ ಹಾಲ್‌ನ ಒಳಗಡೆ ಜಾತದಾನ ಜಾಗೃತಿ ಫಲಕಗಳನ್ನು ಪ್ರದರ್ಶಿಸುವ ಮೂಲಕ ಕಾಮನೂರು ಕುಟುಂಬ ವರ್ಗದವರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಮತದಾನ ಮಾಡಬೇಕು ಮತ್ತು ನೈತಿಕ ಮತದಾನದ ಬಗ್ಗೆ ಜಾಗೃತಿ ಮೂಡಿಸಲಾಯಿತು.
Kalyanasiri Kannada News Live 24×7 | News Karnataka
