ಸಾವಳಗಿ: ಬರಗಾಲದ ನಡುವೆ ಸಸಿಗಳಿಗೆ ನೀರು ಉಣಿಸುತಿರುವ ಅರಣ್ಯ ಇಲಾಖೆ ಅಧಿಕಾರಿಗಳ ಕಾರ್ಯಕ್ಕೆ ಗ್ರಾಮಸ್ಥರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಹೌದು ಜಮಖಂಡಿ ತಾಲೂಕಿನ ಸಾವಳಗಿ ಹೋಬಳಿಯ ತುಂಗಳ ಗ್ರಾಮದಲ್ಲಿ ವಲಯ ಅರಣ್ಯಾಧಿಕಾರಿ ಪವನಕುಮಾರ್ ಕುರನಿಂಗ ಅವರ ಮಾರ್ಗದರ್ಶನದಲ್ಲಿ ಬರಗಾಲ ಮದ್ಯೆಯು ಸಸಿಗಳಿಗೆ ನೀರು ಉಣಿಸುತ್ತಿರುವ ಅರಣ್ಯ ಇಲಾಖೆ.
ತುಂಗಳ ಗ್ರಾಮದ ಅರಣ್ಯ ಪ್ರದೇಶದಲ್ಲಿ ಮಳೆಗಾಲದ ಸಮಯದಲ್ಲಿ ಸಸಿಗಳನ್ನು ನೆಡಲಾಗಿತ್ತು.ಆದರೆ ಮಳೆ ಆಗದೆ ಸಸಿಗಳು ಒಣಗಲು ಪ್ರಾರಂಭಿಸಿದವು ಇದನ್ನು ಮನಗಂಡ ಅಧಿಕಾರಿಗಳು ಸುಮಾರು 9 ಕಿಮೀ ದೂರದಿಂದ ಟ್ಯಾಂಕರ್ ಮೂಲಕ ನೀರು ತಂದು ಹಾಕುತ್ತಿದ್ದಾರೆ.
ಬೇಸಿಗೆ ಕಾಲದಲ್ಲಿ ಒಂದು ಗಿಡ ಮರ ನೆಟ್ಟು ನೀರು ಉಣಿಸಿ ಬೇಳಿಸಿದರೆ ಸಾಕು ಅದು ಇಡಿ ಜೀವನಕ್ಕೆ ಎಷ್ಟು ತಂಪು ವಾತಾವರಣ ಕೋಡುತ್ತದೆ, ಅದರಂತೆ ಎಲ್ಲರೂ ಸಸಿಗಳನ್ನು ನೆಟ್ಟು ಪಾಲನೆ ಪೋಷಣೆ ಮಾಡಿ ಬೆಳೆಸಬೇಕು ಎಂಬುದು ಅರಣ್ಯ ಇಲಾಖೆಯ ಅವರ ಅಧಿಕಾರಿಗಳ ಮಾತಾಗಿದೆ.
ಪ್ರಗತಿಪರ ರೈತರಾದ ಬರಮು ಸಾವಳಗಿ ಮಾತನಾಡಿ ಅಂಭಿಕ ಪರಿಸರದ ರಕ್ಷಣೆ ನಮ್ಮೆಲ್ಲರ ಹೊಣೆ ಗಿಡ ಮರ ಬೆಳಸಿ ಉಳಿಸಿ ಎಂಬ ಕೂಗು ಎಲ್ಲೆಡೆ ಕೇಳಿ ಬರುತ್ತಿದೆ ಅದಕ್ಕೆ ಇಂದು ಬದಲಾದ ವಾರವರಣ ಮತ್ತು ದಿನೇ ದಿನೇ ಸಾಕಷ್ಟು ಏರಿಳಿಕೆಯಾಗುತಿರುವ ಹವಾಮಾನ ಪ್ರತಿ ಜೂನ್ ತಿಂಗಳಲ್ಲಿ ಪರಿಸರ ಎಷ್ಟು ಹಾನಿಯಾಗಿದೆ ಎಂದು ಯೋಚಿಸುವ ಮುನ್ನ ನಾವು ಪರಿಸರಕ್ಕೆ ನೀಡಿರುವ ಕೊಡುಗೆ ಎಷ್ಟು ಎಂಬುದನ್ನು ಓಮ್ಮೆ ಯೋಚಿಸಬೇಕು ನಮ್ಮ ಸುತ್ತಮುತ್ತಲಿನ ಪರಿಸರ ಆರೋಗ್ಯವಾಗಿದ್ದರೆ ನಾವು ಆರೋಗ್ಯವಾಗಿರಬಹುದು ಎಂದು ಹೇಳಿದರು.
ಅಧಿಕಾರಿಗಳಾದ ಉಪ ವಲಯ ಅರಣ್ಯಾಧಿಕಾರಿ ರಾಜಶೇಖರ ಜಾಧವ, ಅರಣ್ಯ ರಕ್ಷಕರು ಅಕ್ಷತಾ ಜಂಬಗಿ ಅವರು ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವರದಿ ಸಚೀನ ಜಾಧವ ಸಾವಳಗಿ