ಸಿ.ಸಿರಸ್ತೆಹಾಳುಮಾಡಿ,ರಸ್ತೆಯನ್ನು ಬಂದು ಮಾಡಿ, ಮೆರೆಯುತ್ತಿರುವ ಭೂಪನಿಗೆ ಬಿಸಿ ಮುಟ್ಟಿಸಿ,ರಸ್ತೆ ಬಂದು ಮಾಡಿರುವುದನ್ನು ತೆರವುಗೊಳಿಸಿ, ಸಾರ್ವಜನಿಕರ ಪ್ರಶಂಸೆಗೆಒಳಗಾದಾಧಕಾರಿಗಳು
ಸಿ.ಸಿರಸ್ತೆಹಾಳುಮಾಡಿ,ರಸ್ತೆಯನ್ನು ಬಂದು ಮಾಡಿ, ಮೆರೆಯುತ್ತಿರುವ ಭೂಪನಿಗೆ ಬಿಸಿ ಮುಟ್ಟಿಸಿ,ರಸ್ತೆ ಬಂದು ಮಾಡಿರುವುದನ್ನು ತೆರವುಗೊಳಿಸಿ, ಸಾರ್ವಜನಿಕರ ಪ್ರಶಂಸೆಗೆಒಳಗಾದಾಧಕಾರಿಗಳು
ಕೊಪ್ಪಳ: ಜಿಲ್ಲೆಯ ಕಾರಟಗಿ ತಾಲೂಕಿನ ಸಿದ್ದಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮಲ್ಲನಗೌಡ ತಂದೆ ಮಲ್ಕಾಜಪ್ಪ ಹೊಸಮನಿ ಎಂಬ ಗೂಂಡಾ ವ್ಯಕ್ತಿಯು ಗ್ರಾಮದ ಎರೆಡು ಮತ್ತು ನಾಲ್ಕನೇ ವಾರ್ಡಿಗೆ ಸಂಪರ್ಕ ಬೆಳೆಸುವ ಮುಖ್ಯ ರಸ್ತೆಯನ್ನು (ಹನ್ನೆರೆಡು ಲಕ್ಷ ರೂಪಾಯಿ ಬೆಲೆ ಬಾಳುವ ಸಿ.ಸಿ. ರಸ್ತೆಯನ್ನು) ಹಾಳು ಮಾಡಿ, ಕಳೆದ ಒಂದು ವರ್ಷಗಳ ಹಿಂದೆಯೇ ರಸ್ತೆಯ ಮದ್ಯಲ್ಲಿ ಕಲ್ಲು ಬಂಡೆಗಳನ್ನು ನೆಟ್ಟು, ಸಾರ್ವಜನಿಕರಿಗೆ ಓಡಾಡಲು ಆಗದಂತೆ ರಸ್ತೆಯನ್ನು ಬಂದುಮಾಡಿ, ಗೂಂಡಾವರ್ತನೆ ಮೆರೆಯುತ್ತಿದ್ದ, ಇದರ ಬಗ್ಗೆ ನಮ್ಮ ಪತ್ರಿಕೆಯು ವರದಿ ಮಾಡಿತ್ತು, ಎಚ್ಚರಗೊಂಡ ಅಧಿಕಾರಿಗಳು,
ಬಂದು ಮಾಡಿರುವ ರಸ್ತೆಯನ್ನು ತೆರವುಗೊಳಿಸುವ ಮೂಲಕ ಅಧಿಕಾರಿಗಳು ಗೂಂಡಾ ವ್ಯಕ್ತಿಗೆ ಬಿಸಿಮುಟ್ಟಿಸಿದ್ದಾರೆ.
ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಸೂಚನೆಯ ಮೇರೆಗೆ ತಾಲೂಕ ಪಂಚಾಯತಿಯ ರ್ಕಾರ್ಯನಿರ್ವಾಹಕ ಅಧಿಕಾರಿಗಳು,ತಹಶೀಲ್ದಾರರು ಹಾಗೂ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಕಂದಾಯ ನಿರೀಕ್ಷಕರು ಹಾಗೂ ಪೊಲೀಸ್ ಇನ್ಸ್ ಪೆಕ್ಟರ್ ಜಂಟಿಯಾಗಿ ಕಾರ್ಯಚರಣೆ ನೆಡೆಸಿ,
ಪೊಲೀಸ್ ಸಿಬ್ಬಂದಿ, ಕಂದಾಯ ಇಲಾಖೆಯ ಸಿಬ್ಬಂದಿ ಮತ್ತು ಪಂಚಾಯತಿ ಸಿಬ್ಬಂದಿಗಳ ಸಹಾಯದಿಂದ ಬಂದು ಮಾಡಿರುವ ರಸ್ತೆಯನ್ನು ಬುಧವಾರ ಬೆಳಗಿನ ಜಾವ ತೆರವುಗೊಳಿಸಿದ್ದಾರೆ.
ಕಳೆದ ಒಂದು ವರ್ಷದಿಂದ ಗೂಂಡಾ ಪ್ರವೃತ್ತಿಯ ಮಲ್ಲನಗೌಡನ ದುಶ್ ಕೃತ್ಯದಿಂದ ನೊಂದಂತಹ ಸಾರ್ವಜನಿಕರು ಅಧಿಕಾರಿಗಳ ಈ ಕಾರ್ಯಚರಣೆಗೆ ಮೆಚ್ಚುಗೆ ವ್ಯಕ್ತಪಡಿಸಿ, ಪ್ರಶಂಸಿಸಿದ್ದಾರೆ.