Breaking News

೧೩೨ನೇಬೆಟ್ಟದಲಿಂಗೇಶ್ವರಜಾತ್ರಾಮಹೋತ್ಸವದ ಅಂಗವಾಗಿ ಜೋಡು ರಥೋತ್ಸವ ಮತ್ತು ಸಾಮೂಹಿಕವಿವಾಹಗಳು.

Jodu rathotsava and mass weddings as part of the 132nd hill Lingeshwar Jatra mahotsava.

ಗಂಗಾವತಿ: ಸಮೀಪದ ಚಿಕ್ಕಬೆಣಕಲ್ ಗ್ರಾಮದ ೧೩೨ನೇ ಬೆಟ್ಟದ ಲಿಂಗೇಶ್ವರರ ಜಾತ್ರಾ ಮಹೋತ್ಸವದ ಅಂಗವಾಗಿ ಜೋಡು ರಥೋತ್ಸವ ಏಪ್ರಿಲ್-೦೨ ರಂದು ನಡೆಯಲಿದೆ.
ಏಪ್ರಿಲ್-೦೧, ೧೩೨ನೇ ಪುಣ್ಯತಿಥಿಯ ಅಂಗವಾಗಿ ಪಲ್ಲಕ್ಕಿ ಉತ್ಸವ ಹಾಗೂ ಫಾಲ್ಗುಣ ಬಹುಳ ಅಷ್ಠಮಿ ಮಂಗಳವಾರ ದಿನಾಂಕ: ೦೨.೦೪.೨೦೨೪ ರಂದು ಬೆಳಗಿನ ಜಾವ ೫:೩೦ಕ್ಕೆ ಬ್ರಾಹ್ಮಿ ಮುಹೂರ್ತದಲ್ಲಿ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ ತದನಂತರ ಮಹಾಮಂಗಳಾರತಿ, ೧೧:೩೦ ರಿಂದ ೧೨:೩೦ ರವರೆಗೆ ಸಲ್ಲುವ ಅಭಿಜಿನ್ ಲಗ್ನದ ಶುಭಮುಹೂರ್ತದಲ್ಲಿ ಸಾಮೂಹಿಕ ವಿವಾಹಗಳು ಹಾಗೂ ಮಹಾಪ್ರಸಾದ ಕಾರ್ಯಕ್ರಮ ಮತ್ತು ಸಂಜೆ ೫:೦೦ ಗಂಟೆಗೆ ಶ್ರೀ ಬೆಟ್ಟದೇಶ್ವರ ಹಾಗೂ ಶ್ರೀ ಲಿಂಗೇಶ್ವರರ ಜೋಡು ರಥೋತ್ಸವ ಜರುಗಲಿವೆ.
ಉತ್ಸವದ ಸಾನಿಧ್ಯವನ್ನು ಕೊಪ್ಪಳ ಗವಿಮಠದ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು, ಹೆಬ್ಬಾಳ ಮಠದ ಶ್ರೀ ನಾಗಭೂಷಣ ಶಿವಾಚಾರ್ಯರು, ಕಂಪ್ಲಿ ಕಲ್ಮಠದ ಶ್ರೀ ಮ.ನಿ.ಪ್ರ ಅಭಿನವ ಪ್ರಭು ಮಹಾಸ್ವಾಮಿಗಳು, ಶಾ.ಗ ಹೂವಿನಹಡಗಲಿ ಶ್ರೀ ಮ.ನಿ.ಪ್ರ. ಹಿರೇಶಾಂತವೀರ ಮಹಾಸ್ವಾಮಿಗಳು, ಬೆಳ್ಳಟ್ಟಿ ರಾಮಲಿಂಗೇಶ್ವರ ದಾಸೋಹ ಮಠದ ಶ್ರೀ ಷ.ಬ್ರ. ಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಹಾವನೂರಿನ ಶ್ರೀ ಶಿವಕುಮಾರ ಮಹಾಸ್ವಾಮಿಗಳು, ಸುಳೇಕಲ್ ಬೃಹನ್ಮಠದ ಶ್ರೀಶೀಶ್ರೀ ಭುವನೇಶ್ವರಯ್ಯ ತಾತನವರು, ಉಡುಮಕಲ್ ಹಿರೇಮಠದ ಶ್ರೀ ವೀರಬಸಯ್ಯ ಮಹಾಸ್ವಾಮಿಗಳು ಆಗಮಿಸಲಿದ್ದಾರೆ.
ಏಪ್ರಿಲ್-೦೩ ರಂದು ರಂದು ಸಾಯಂಕಾಲ ಕಡುಬಿನ ಕಾಳಗ ನಡೆಯಲಿದೆ. ಪ್ರತಿ ವರ್ಷದಂತೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸಬೇಕೆಂದು ಎಂದು ಹಿರೇಬೆಣಕಲ್‌ನ ಭಕ್ತಾದಿಗಳು ವಿನಂತಿಸಿದ್ದಾರೆ.

About Mallikarjun

Check Also

ಕರ್ನಾಟಕ ಗ್ರಾಮೀಣ ಬ್ಯಾಂಕ್ ಸಿಬ್ಬಂದಿ ಕಿರುಕುಳ ತಪ್ಪಿಸಿ..!

12೦೦ ಗ್ರಾಹಕರಿಗೆ ಜೀವ ಭದ್ರತೆ ಒದಗಿಸಬೇಕೆಂದು ರಕ್ಷಣಾ ವೇದಿಕೆ ಮನವಿ: ಗಂಗಾವತಿ: 2018ನೇ ಸಾಲಿನಲ್ಲಿ lಗಂಗಾವತಿ ತಾಲೂಕು ಕರ್ನಾಟಕ ಗ್ರಾಮೀಣ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.