Rupees 32,92, 500, which were being transported without documents, were checked and seized by the check post officials.
ಗಂಗಾವತಿ , ಇಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಕೊಪ್ಪಳ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಗಂಗಾವತಿ ವಿಧಾನಸಭಾ ಕ್ಷೇತ್ರ ಕಡೆ ಬಾಗಿಲು ಚೆಕ್ ಪೋಸ್ಟ್ ಹತ್ತಿರ ಯಾವುದೇ ದಾಖಲೆಗಳಿಲ್ಲದೆ ಸಾಗಣೆ ಮಾಡುತ್ತಿದ್ದ ರೂಪಾಯಿ 32,92, 500 ರೂಪಾಯಿಗಳು ಮೊತ್ತವನ್ನು ಚೆಕ್ ಪೋಸ್ಟ್ ಅಧಿಕಾರಿ ಮತ್ತು ಪೊಲೀಸ್ ಸಿಬ್ಬಂದಿಯವರು ತಪಾಸಣೆ ಮಾಡಿ ವಶಪಡಿಸಿಕೊಂಡಿರುತ್ತಾರೆ .ಸದರಿ ವಿಷಯದ ಕುರಿತು ಸ್ಥಳಕ್ಕೆ ಮಾನ್ಯ ತಹಸೀಲ್ದಾರರು ಗಂಗಾವತಿ, ಪೊಲೀಸ್ ವೃತ್ತ ಆರಕ್ಷಕ ನಿರೀಕ್ಷಕರು ಎಂಸಿಸಿ ತಂಡದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ ಹಾಗೂ ಸದರಿ ವಿಷಯದ ಕುರಿತು ಮುಂದಿನ ಕ್ರಮಕ್ಕಾಗಿ ಇನ್ಕಮ್ ಟ್ಯಾಕ್ಸ್ ಇಲಾಖೆ ಅಧಿಕಾರಿಗಳಿಗೆ ಮಾಹಿತಿಯನ್ನು ನೀಡಲಾಗಿದ್ದು ಮುಂದಿನ ಕ್ರಮಕ್ಕಾಗಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಗಂಗಾವತಿ
ತಹಸೀಲ್ದಾರ್ ಕಾರ್ಯಾಲಯ ದಿಂದ ತಿಳಿದು ಬಂದಿದೆ.