raitarige an’yāya jagadīś ārōpa.Jagdish accuses farmers of injustice due to ultratech cement factory dust near Ginigeri village.
ಗಿಣಿಗೇರಿ ಗ್ರಾಮದ ಪಕ್ಕದಲ್ಲಿರುವ ಅಲ್ಟ್ರಾಟೆಕ್ ಸಿಮೆಂಟ್ ಫ್ಯಾಕ್ಟರಿ ಧೂಳಿನಿಂದ ರೈತರಿಗೆ ಅನ್ಯಾಯ.
ಗಿಣಿಗೇರಿ ಗ್ರಾಮದಲ್ಲಿ ಇತ್ತೀಚಿಗೆ ಧೂಳು, ಕಲುಷಿತ ವಾತಾವರಣ, ರೈತರ ಬೆಳೆದ ಕೃಷಿ ನಾಶ, ಗ್ರಾಮದ ಜನರಿಗೆ ಅನಾರೋಗ್ಯ ತೊಂದರೆಗಳು ಕಾಣಿಸುತ್ತಿವೆ ಎಂದು ಜಗದೀಶ್ ಆರಂಭಿಸಿದ್ದಾರೆ.
ಜಗದೀಶ್ ಹೊಲದ ಪಕ್ಕದಲ್ಲಿ ಸಿಮೆಂಟ್ ಕಾರ್ಖಾನೆ ಇತ್ತು ಕಳೆದ 15 ವರ್ಷಗಳಿಂದ ಧೂಳು ಬೆಳೆದ ಮೇಲೆ ಬೆಳೆಯ ಮೇಲೆ ಕುಳಿತು ಇಳುವರಿ ಬರುತ್ತಿಲ್ಲ.
ಇದರ ಬಗ್ಗೆ ಹಲವಾರು ಬಾರಿ ಪರಿಹಾರ ಕ್ರಮ ಕೈಗೊಳ್ಳಲು ಕಂಪನಿಗೆ ಮನವಿ ಮಾಡಿದರು ಯಾವುದೇ ಪರಿಹಾರ ಆಗಲಿ ಧೂಳು ಬರೆದಂತ ತಡೆಗಟ್ಟಲು ಕ್ರಮ ಕೈಗೊಂಡಿಲ್ಲ.
ಕೊಪ್ಪಳದ ವಾಯುಮಾಲಿನ್ಯ ನಿಯಂತ್ರಣ ಅಧಿಕಾರಿಗಳಿಗೆ, ಹಾಗೂ ಮಾನ್ಯ ಅಪರಾ ಜಿಲ್ಲಾಧಿಕಾರಿಗಳಾದ ಸಾವಿತ್ರಿ ಬಿ ಕಡಿಯವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಕಿಡಿಗೇರಿ ನಾಗರಿಕ ಹೋರಾಟ ಸಮಿತಿಯ ಮುಖಂಡರಾದ ಮಂಗಳೇಶ್ ರಾಥೋಡ್ ಮತ್ತು ಆನಂದ್ ಮೂರು ಮನಿ ಮಾತನಾಡಿ ಬಡ ರೈತ ಜಗದೀಶ್ ಅವರಿಗೆ ಸಿಮೆಂಟ್ ಫ್ಯಾಕ್ಟರಿಯಿಂದ ಆಗಿರುವ ಅನ್ಯಾಯವನ್ನು ಕೂಡಲೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು.
ಇಲ್ಲಿವರೆಗೂ ಆಗಿರುವ ನಷ್ಟಕ್ಕೆ ಪರಿಹಾರ ಕೊಡಬೇಕು ಬಡ ಕುಟುಂಬದಿಂದ ಬಂದ ರೈತ ಇವರಿಗೆ ಪರಿಹಾರ ಸಿಗಬೇಕು ಇಲ್ಲವಾದಲ್ಲಿ ಮುಂದಿನ ದಿನದಲ್ಲಿ ಪ್ರತಿಭಟನೆ ಮಾಡಬೇಕಾಗುತ್ತದೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಗಿಣಿಗೇರಿ ನಾಗರಿಕ ಹೋರಾಟ ಸಮಿತಿಯ ಸಂಚಾಲಕ ಶರಣು ಗಡ್ಡಿ ದಾನಪ್ಪ ಹಲಿಗೆರಿ ಆನಂದ್ ಮುರ್ಮನಿ ಜಗದೀಶ್ G, ಮೌನೇಶ್ ಹಲಿಗೆರಿ ಮುಂತಾದವರು ಭಾಗವಹಿಸಿದ್ದರು.