Breaking News

ಬ್ರಹ್ಮಾಂಡದ ಪ್ರತೀಕವೇ ಇಷ್ಟಲಿಂಗ

Ishtalinga is the symbol of the universe

ಜಾಹೀರಾತು


ಯಲಬುರ್ಗಾ ತಾಲೂಕಿನ ಶರಣ ಗ್ರಾಮ ಗುಳೆ ಗ್ರಾಮದಲ್ಲಿ ಮಹಾ ಶಿವರಾತ್ರಿ ಪ್ರಯುಕ್ತ ರಾಷ್ಟ್ರೀಯ ಬಸವ ದಳ ಮತ್ತು ಅಕ್ಕನಾಗಲಾಂಬಿಕೆ ಮಹಿಳಾ ಗಣದ ವತಿಯಿಂದ ಸಾಮೂಹಿಕ ಇಷ್ಟಲಿಂಗ ಶಿವಯೋಗ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಪ್ರಥಮದಲ್ಲಿ ಗುರು ಪೂಜೆ, ಪ್ರಾರ್ಥನೆ ಮತ್ತು ಇಷ್ಟಲಿಂಗ (ತ್ರಾಟಕ ) ಶಿವಯೋಗ ಕಾರ್ಯಕ್ರಮವನ್ನ ಶರಣ ಬಸವರಾಜ ಹೂಗಾರ ಇವರು ಪ್ರಾತ್ಯಕ್ಷಿಕವಾಗಿ ತೋರಿಸಿ ಕೊಡುವುದರ ಮೂಲಕ ಪ್ರತಿಯೊಬ್ಬರ ಅಂಗದ ಮೇಲೆ ಧರಿಸಿರುವ ಲಿಂಗವನ್ನ ಅಂಗೈಯಲ್ಲಿ ಇರಿಸಿ ಶಿವನಾಮ ಸ್ಮರಣೆಯೊಂದಿಗೆ ತ್ರಾಟಕ ಯೋಗ ಮಾಡಿಸಿ, ಮಾತನಾಡಿದ ಇವರು
ಇಷ್ಟಲಿಂಗ ಹಿಡಿದು ಶಿವಯೋಗ ಸಾಧನೆ ಮಾಡಿದರೆ ಇಷ್ಟಾರ್ಥಗಳು ಸಾಕಾರಗೊಳಿಸಿಕೊಳ್ಳಲು ಇದು ಅತ್ಯಂತ ಸರಳ ಸಾಧನ. ಇದು ನಮ್ಮಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನವಾದಿ ಗಳಾಗಬೇಕು.
ಸಹಜ ಶಿವಯೋಗದ ಪಿಂಡದೊಳಗೆ ಪ್ರಾಣ, ಪ್ರಾಣದೊಳಗೆ ಶಬ್ದ, ಶಬ್ದದೊಳಗೆ ನಾದ, ನಾದದೊಳಗೆ ಮಂತ್ರ, ಮಂತ್ರದೊಳಗೆ ಶಿವ ಇರುವಂತೆ ನಮಃ ಶಿವಾಯ ಓಂ ಮಂತ್ರದಿಂದ ಧ್ಯಾನ ಮಾಡಬೇಕು ಎಂದು ತಮ್ಮ ಅನುಭವ ಹಂಚಿಕೊಂಡರು.
ನಂತರ ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕ ಮಾತನಾಡಿದ ಶರಣ ಶರಣಪ್ಪ ಎಚ್ ಹೊಸಳ್ಳಿ ಇವರು ಮಾತನಾಡಿ,
ನಮ್ಮನ್ನು ನಾವು ಆರಾಧಿಸುವುದೇ ಶಿವಯೋಗ. ಹೊರಗಡೆ ದೇವರಿಲ್ಲ, ದೇವರು ಪ್ರಕಟವಾಗುವುದಿಲ್ಲ. ನಮ್ಮ ಸಾಧನೆ ಅನುಭಾವದಿಂದ ಮಾತ್ರ ಜೀವನದಲ್ಲಿ ತೃಪ್ತಿ ಪಡೆಯಬಹುದಾಗಿದೆ ಎಂದು ಶಿವಯೋಗದಿಂದಾಗುವ ಪರಿಣಾಮ ಬಗ್ಗೆ ಮನವರಿಕೆ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶರಣ ಬಸವನಗೌಡ ಪೋಲಿಸ್ ಪಾಟೀಲ್ ನಿವೃತ್ತ ಪಿ ಎಸ್ ಐ ಇವರು ಮಾತನಾಡಿ, ದಿನಾಲು ಸೂರ್ಯೋದಯಕ್ಕಿಂತ ಮುಂಚೆ ಜಳಕ ಮಾಡಿ, ಶುಭ್ರ ಬಟ್ಟೆ ಧರಿಸಿ, ಕೋಣೆಯಲ್ಲಿ ಯಾವುದೇ ಭಾವ ಚಿತ್ರ ಜೋತು ಹಾಕದೆ, ಊದಿನ ಕಡ್ಡಿ ಹಚ್ಚದೆ, ಕೋಣೆ ಕತ್ತಲು ಮಾಡಿ ಎಡ ಹಿಂಬದಿಯ ಕಿವಿಯ ಎತ್ತರಕ್ಕೆ ಔಡಲ ಎಣ್ಣೆಯ ದೀಪ ಹಚ್ಚಿ ಸುಖಾಸನ, ಸಿದ್ಧಾಸನ ಇಲ್ಲವೆ ಪದ್ಮಾಸನದಲ್ಲಿ ನೇರವಾಗಿ ಕುಳಿತುಕೊಂಡು ಮೊದಲು ಪ್ರಾರ್ಥನೆ, ಧ್ಯಾನ ಆಮೇಲೆ ಲಿಂಗನಿರೀಕ್ಷಿಣೆ ಕಣ್ಣು ರೆಪ್ಪೆ ಬಡಿಯದೆ ತ್ರಾಟಕ ಮಾಡಬೇಕು ಅಂದಾಗ ಮಾತ್ರ ನಮ್ಮ ಮನಸ್ಸು ಆನಂದಮಯವಾಗಿರಲು ಸಾದ್ಯವಿದೆ, ಪ್ರತಿಯೊಬ್ಬರು ದಿನ ನಿತ್ಯ ಐದು ನಿಮಿಷಗಳಾದರು
ಶಿವಯೋಗ ಮಾಡಿದರೆ ನಮ್ಮ ಜೀವನದಲ್ಲಿ ಬರುವಂತ ಅಪ ಮೃತ್ಯಗಳು ದೂರಾಗುತ್ತವೆ ಎಂದು ತಿಳಿಸಿದರು. ಶಿವಯೋಗದ ಪ್ರಾತ್ಯಕ್ಷಿಕೆಯಲ್ಲಿ ನೂರಾರು ಮಹಿಳೆಯರು, ಪುರುಷರು ಪಾಲ್ಗೊಂಡಿರುವುದು ವಿಶೇಷವಾಗಿತ್ತು. ಕಾರ್ಯಕ್ರಮದಲ್ಲಿ ಪ್ರಮುಖರಾಗಿ ಆಗಮಿಸಿದ ಶರಣ ನಾಗನಗೌಡ ಜಾಲಿಹಾಳ , ಗಿರಿಗೌಡ ಕೋರಿ, ದೇವಪ್ಪ ಕೋಳೂರು ವನಜಭಾವಿ, ರೇಣುಕಪ್ಪ ಮಂತ್ರಿ ಅಧ್ಯಕ್ಷರು ರಾಷ್ಟ್ರೀಯ ಬಸವ ದಳ ಗುಳೆ, ಲಿಂಗನಗೌಡ ದಳಪತಿ,
ಶರಣ ಚಿದಾನಂದಗೌಡ ಗೊಂದಿ, ಹುಲ್ಲಪ್ಪ ಕೋಳೂರು ಲಿಂಗದಳ್ಳಿ, ವಿರುಪಣ್ಣ ಕಾಡಾಪುರ ಸಾ. ಹಿರೇ ವಡ್ಡರಕಲ್.
ಹನಮಂತಪ್ಪ ಮೇಟಿ ವನಜಭಾವಿ ವೇದಿಕೆ ಹಂಚಿಕೊಂಡು ಅನುಭಾವ ಮಾಡಿದರು.
ಮಂಜುನಾಥ ಉಚ್ಚಲಕುಂಟಿ ಸಾ. ಮಾಟಲದಿನ್ನಿ, ನಿಂಗಪ್ಪ ಪರಂಗಿ ವನಜಭಾವಿ, ಯಲ್ಲಪ್ಪ ಅತ್ತಿಗುಡ್ಡದ, ಪಂಪಾಪತಿ, ಬಸಣ್ಣ ಹೊಸಳ್ಳಿ, ನಿಜಲಿಂಗಪ್ಪ ಮಂತ್ರಿ, ನಿಂಗಪ್ಪ ವಿರುಪಣ್ಣ ಮಂತ್ರಿ ರಾಷ್ಟ್ರಪತಿ, ಹನಮೇಶ್, ಬಸವರಾಜ ಹೊಸಳ್ಳಿ, ಬಸವರಾಜ ಕೋಳೂರು, ನಿಂಗಪ್ಪ ಮೇಟಿ, ಮಲ್ಲಿಕಾರ್ಜುನ ಮಂತ್ರಿ, ದೇವೇಂದ್ರಪ್ಪ ಆವಾರಿ, ಶರಣಪ್ಪ ಮಂತ್ರಿ, ಹಾಗು ಅಕ್ಕ ನಾಗಲಾಂಬಿಕೆ ಬಳಗದ ಶರಣೆ ಶರಣಮ್ಮ ಬಸವನಗೌಡ ಪೋಲಿಸ್ ಪಾಟೀಲ್, ಯಮನಮ್ಮ ಗೌಡ್ರ ವನಜಭಾವಿ ಹುಲಿಗೆಮ್ಮ ಅತ್ತಿಗುಡ್ಡದ, ಸಾವಿತ್ರಮ್ಮ ಆವಾರಿ, ಶಂಕ್ರಮ್ಮ ಹೊಸಳ್ಳಿ, ಬಸಮ್ಮ ಹೂಗಾರ, ಹಂಪಮ್ಮ ಮೇಟಿ, ಹನಮಮ್ಮ ಉಚ್ಚಲಕುಂಟಿ, ವಿಶಲಾಕ್ಷಮ್ಮ ಕೋಳೂರು, ಕಸ್ತೂರಿ ಹೊಸಳ್ಳಿ, ರೇಣುಕಮ್ಮ, ಮಲ್ಲಮ್ಮ, ಚನ್ನಮ್ಮ, ಗುರಲಿಂಗಮ್ಮ ಮಂತ್ರಿ, ನಾಗಮ್ಮ ಜಾಲಿಹಾಳ, ದ್ರಾಕ್ಷಾಯಣಮ್ಮ ಹೊಸಳ್ಳಿ. ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು ಕಾರ್ಯಕ್ರಮ ಯಶಸ್ವಿಗೊಳಿಸಿದರು.

✍️ ಬಸವರಾಜ ಎಸ್ ಹೂಗಾರ ರಾಷ್ಟ್ರೀಯ ಬಸವ ದಳ ಶರಣ ಗ್ರಾಮ ಗುಳೆ .

About Mallikarjun

Check Also

ಜ್ಞಾನಾಕ್ಷಿರಾಜರಾಜೇಶ್ವರಿ ಮ್ಯೂಸಿಕ್ ವಿಡಿಯೋ ಆಲ್ಬಮ್ ಶೀರ್ಷಿಕೆ ಅನಾವರಣ

Gnanakshi Rajarajeshwari Music Video Album Title Unveiled ಬೆಂಗಳೂರಿನ ಸುಪ್ರಸಿದ್ದ ಐತಿಹಾಸಿಕ ಶ್ರೀ ಜ್ಞಾನಾಕ್ಷಿ ರಾಜರಾಜೇಶ್ವರಿ ದೇವಸ್ಥಾನ, ಶ್ರೀ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.