Breaking News

ಕರ್ನಾಟಕ ರಾಜ್ಯ ರೈತ ಸಂಘದ ನೂತನ ಗ್ರಾಮ ಘಟಕ ಉದ್ಘಾಟನೆ ಮಾಡುವುದುಶ್ಲಾಘನೀಯ : ಪ್ರಸನ್ನಗೌಡ ಅಭಿಮತ

Inauguration of new village unit of Karnataka State Farmers Association is commendable: Prasanna Gowda Abhimat

ಜಾಹೀರಾತು

ಹನೂರು : ಪ್ರತಿ ಗ್ರಾಮದಲ್ಲಿ ನೊಂದವರ ಧ್ವನಿ,ಅವರ ನೋವಿಗೆ ಸ್ಪಂದಿಸುವುದು ಹಾಗೂ ಕೇಳಿ ಅದಕ್ಕೆ ಸಕಾಲದಲ್ಲಿ ಸಹಕರಿಸುವುದೆ ನಮ್ಮ ಕರ್ನಾಟಕ ರಾಜ್ಯ ರೈತ ಸಂಘಟನೆ ಮಾತ್ರ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಸರ್ವೋದಯ ಪಕ್ಷದ ರಾಜ್ಯ ಪ್ರದಾನ ಕಾರ್ಯದರ್ಶಿ ಪ್ರಸನ್ನ ಗೌಡ ತಿಳಿಸಿದರು.ತಾಲೂಕಿನ ಗಡಿಯಂಚಿನ ಹೂಗ್ಯಂ ಗ್ರಾ. ಪಂ ವ್ಯಾಪ್ತಿಯ ನೆಲ್ಲೂರು ಗ್ರಾಮದಲ್ಲಿ ನೂತನವಾಗಿ ಗ್ರಾಮ ಘಟಕದ ನಾಮಫಲಕ ಹಾಗೂ ವೇದಿಕೆ ಕಾರ್ಯಕ್ರಮದಲ್ಲಿ ಗಿಡಕ್ಕೆ ನೀರು ಹಾಕುವುದರ ಮೂಲಕ ಉದ್ಘಾಟನೆ ಮಾಡಿದ ನಂತರಮಾತನಾಡಿದ ಅವರು ನಾವು ಒಗ್ಗಟ್ಟಾಗಿ ಇದ್ದರೆ ನಮ್ಮ ಸಮಸ್ಯೆಗಳನ್ನ ಸಂಘಟನೆಯ ಮೂಲಕ ಬಗೆಹರಿಸಿಕೊಳ್ಳಬಹುದು , ರೈತ ಸಂಘದ ತಾಲ್ಲೂಕು ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ಎರಡು ಕಣ್ಣಿದ್ದಂತೆ.ಗ್ರಾಮ ಘಟಕದ ಚೆನ್ನಾಗಿದ್ದರೆ, ತಾಲ್ಲೂಕು, ಜಿಲ್ಲಾ, ರಾಜ್ಯ ಘಟಕಗಳು ಚೆನ್ನಾಗಿರುತ್ತದೆ.ಇದು ವ್ಯಕ್ತಿ ಆದಾರಿತ ಸಂಘಟನೆಯಲ್ಲ. ಯಾವ ಸರ್ಕಾರವು ಏನು ಮಾಡಿಲ್ಲ, ಎಲ್ಲ ರೈತ ಸಂಘಟನೆಯಿಂದ ಮಾತ್ರ ಸಾಧ್ಯ. ರೈತ ಸಂಘ ರೈತರ ಕಷ್ಟ ಕೇಳುವುದರ ಜೊತೆಗೆ, ಭ್ರಷ್ಟಾಚಾರ, ಅರಣ್ಯ, ಅಕ್ರಮ ಚಟುವಟಿಕೆ ವಿರುದ್ಧ ರೈತ ಸಂಘಟನೆ ನಿಂತಿದೆ. ನಾವು ಯಾರ ಮೂಲಾಜಿಗೂ ಒಳಗಾಗಬಾರದು ಇದು ಸಾರ್ವಜನಿಕರ ಸ್ವತ್ತು ರೈತರೆ ಮಾಲಿಕರು ಎಂದು ತಿಳಿಸಿದರು. ಇದೇ ವೇಳೆ ಮಾತನಾಡಿದ ಹನೂರು ಘಟಕದ ಅಧ್ಯಕ್ಷ ಅಮ್ಜದ್ ಖಾನ್ ರೈತ ಸಂಘಟನೆ ಯಾವ ರೀತಿ ಕೆಲಸ ಮಾಡಬೇಕು ಎಂದು ತಿಳಿಸುತ್ತದೆ. ಈ ಸಂಘದಲ್ಲಿ ಅಧ್ಯಕ್ಷರ ಪಾತ್ರ ಬಹಳ ಮುಖ್ಯವಾಗಿದೆ.ನಮ್ಮ ಸಮಸ್ಯೆಯನ್ನ ನಮ್ಮ ಸಂಘಟನೆ ಮೂಲಕ ಬಗೆಹರಿಸಿ ಕೊಳ್ಳಬೇಕು. ರೈತರು ಬೆಳೆದ ಬೆಳೆಗಳನ್ನ ಕಾಡು ಪ್ರಾಣಿಗಳು ನಾಶ ಪಡಿಸಿದರೆ ಅದಕ್ಕೆ ಪರಿಹಾರ ಕಂಡು ಕೊಳ್ಳುವುದು ನಮ್ಮ ರೈತ ಸಂಘಟನೆ ಮೂಲಕ ನಮಗೆ ಯಾವ ಜನಪ್ರತಿನಿಧಿಗಳಾಗಲಿ ಅಧಿಕಾರಿಗಳಾಗಲಿ ಮೊದಲಿಗೆ ಸ್ಪಂದಿಸೊದಿಲ್ಲ ಎಂದು ಹೇಳಿದರು. ಇದೇ ಕಾರ್ಯಕ್ರಮಕ್ಕೆ ಆಗಮಿಸಿದ ಜಿಲ್ಲಾ ಉಪಾಧ್ಯಕ್ಷರಾದ ಗೌಡ ಗೌಡ ಮಾತನಾಡಿ ನಮ್ಮ ಸಂಘವು
43 ವರ್ಷಗಳಿಂದಲು ಕಾರ್ಯನಿರ್ವಹಿಸುತ್ತದೆ , ಕರ್ನಾಟಕ ರಾಜ್ಯ ರೈತ ಸಂಘ ಹುಟ್ಟಿದಂತಹ ಇತಿಹಾಸವಿದೆ . ಯಾವುದೇ ರಾಜಕೀಯ ಸರ್ಕಾರ ಇದ್ದರು ವಿರೋಧ ಪಕ್ಷವಾಗಿ ರೈತ ಸಂಘಟನೆಗಳು ಕೆಲಸ ಮಾಡುತ್ತದೆ ಎಂದು ಗೌಡೇಗೌಡ ತಿಳಿಸಿದರು.

ನೂತನ ಪದಾಧಿಕಾರಿಗಳು :ಗೌರವಧ್ಯಕ್ಷರಾಗಿ ಅಂಗು ರಾಜು, ಅಧ್ಯಕ್ಷರಾಗಿ ಸೇಂದಿಲ್, ಉಪಾಧ್ಯಕ್ಷರಾಗಿ ಕುಮಾರ್, ಕಾರ್ಯದರ್ಶಿ ವಿಜಯ್ ಕುಮಾರ್, ಸಹ ಕಾರ್ಯದರ್ಶಿ ರವಿ, ಖಜಾಂಚಿ ಈಶ್ವರ ಮೂರ್ತಿ, ಸಂಘಟನಾ ಕಾರ್ಯದರ್ಶಿ ಶಿವಕುಮಾರ್, ಸದಸ್ಯರುಗಳಾಗಿ ವೇಲು, ಪಳನಿ ಸ್ವಾಮಿ, ವೇಲುಸ್ವಾಮಿ, ಕುಪ್ಪರಾಜು, ಗೋವಿಂದ ರಾಜು, ಕನಕರಾಜು, ಧನರಾಜು,ಹಾಗೂ 60 ಕ್ಕೂ ಹೆಚ್ಚು ಜನರು ಸದಸ್ಯರಾಗಿ ಆಯ್ಕೆಯಾಗಿ, ನಂತರ ಶಾಲು ದೀಕ್ಷೆ ಪಡೆದುಕೊಂಡರು.
ಇದೇ ಸಮಯದಲ್ಲಿ
ನೆಲ್ಲೂರು ಗ್ರಾಮದ ಸಮಸ್ಯೆಗಳನ್ನು ಪಟ್ಟಿ ಮಾಡಲಾಯಿತು .

ಇದೇ ಸಂದರ್ಭದಲ್ಲಿ ಚಾಮರಾಜನಗರ ಜಿಲ್ಲಾಧ್ಯಕ್ಷ ಶಾಂತಮಲ್ಲಪ್ಪ, ಉಪಾಧ್ಯಕ್ಷ ಗೌಡೇಗೌಡ, ಕೊಳ್ಳೇಗಾಲ ತಾಲೂಕಿನ ಅಧ್ಯಕ್ಷ ಶಿವಮಲ್ಲು, ಚಾ. ನಗರ. ಜಿಲ್ಲಾ ಖಾಯಂ ಸದಸ್ಯ ರವಿನಾಯ್ಡು, ಹನೂರು ತಾಲೂಕಿನ ಗೌರವಧ್ಯಕ್ಷ ರಾಜಣ್ಣ, ಗುಂಡ್ಲುಪೇಟೆ ಗ್ರಾಮ ಘಟಕದ ಅಧ್ಯಕ್ಷ ಅಧ್ಯಕ್ಷ ಅಮ್ಜದ್ ಖಾನ್, ಕಾರ್ಯದರ್ಶಿ ಗೋಪಾಲ್, ಸಂಘಟನಾ ಕಾರ್ಯದರ್ಶಿ ಕಾಂಚಳ್ಳಿ ಬಸವರಾಜು, ಚಾ. ನ ರೈತ ಮುಖಂಡ ಸಂತೋಷ್, ದೊಡ್ಡಿದುವಾಡಿ ವಸಂತ್, ಗುಂಡ್ಲುಪೇಟೆ ಕಾರ್ಯದರ್ಶಿ ಪಾಪಣ್ಣ,ಮಾರ್ಟಳ್ಳಿ ಘಟಕದ ಗೌರವಧ್ಯಕ್ಷ ಅರ್ಪುದರಾಜು,ಯುವ ಘಟಕದ ಅಧ್ಯಕ್ಷ ಸೂರ್ಯ,ವೆಟ್ಟುಕಾಡು ಗ್ರಾಮದ ಸೋಶಿಯಮ್ಮ, ಮಹಿಳಾ ಘಟಕದ ಪದಾಧಿಕಾರಿಗಳು ವಿವಿಧ ಗ್ರಾಮ ಘಟಕದ ಪದಾಧಿಕಾರಿಗಳು, ರೈತ ಮುಖಂಡರು, ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.

About Mallikarjun

Check Also

ಸೆ. 2 ಮತ್ತು 3 ರಂದು ವಿವಿಧ ಇಲಾಖೆಗಳ ಗ್ರೂಪ್ ಸಿ ಹುದ್ದೆಗಳ ಪರೀಕ್ಷೆ: ನಿಷೇಧಾಜ್ಞೆ ಜಾರಿ

Exams for Group C posts of various departments on Sept. 2 and 3: Prohibitory order …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.