Breaking News

ಸಕಾಲದಲ್ಲಿಫಲಾನುಭವಿಗಳಿಗೆ ಹಣ ನೀಡದ ಅಂಚೆ ಕಚೇರಿಯ ನೌಕರನ ವಿರುಧ್ದ ಪ್ರತಿಭಟನೆ ಮಾಡಿದ ಗ್ರಾಮಸ್ಥರು

The villagers protested against the post office employee who did not pay the beneficiaries on time.

ಜಾಹೀರಾತು


ವರದಿ : ಬಂಗಾರಪ್ಪ ಸಿ .
ಹನೂರು :ತಾಲೂಕಿನ ಸೂಳೆರಿಪಾಳ್ಯ ಗ್ರಾಮದಲ್ಲಿರುವ ಅಂಚೆ ಕಚೇರಿ ಅಧಿಕಾರಿಯ ಸಾರ್ವಜನಿಕರೊಂದಿಗೆ ನಡೆದುಕೊಳ್ಳುವ ರೀತಿಯಿಂದ ಗ್ರಾಮಸ್ಥರೆ ಪ್ರತಿಭಟಿಸಿ ಹೊರನಡೆದ ಪ್ರಸಂಗ ಹನೂರು ತಾಲ್ಲೂಕಿನ ಸೂಳೆರಿಪಾಳ್ಯ ಗ್ರಾಮದ ಅಂಚೆ ಕಛೇರಿಯಲ್ಲಿ ನಡೆದಿದೆ . ಇದೇ ಕಚೇರಿಯಲ್ಲಿ ಈ ಹಿಂದೆ ಅಧಿಕಾರಿ ಮಹೇಶ್ ಎಂಬುವರು ಕಾರ್ಯನಿರ್ವಹಿಸುತ್ತಿದ್ದು , ಕೋವಿಡ್ ಸಂದರ್ಭದಲ್ಲಿ ಮರಣ ಹೊಂದಿರುತ್ತಾರೆ. ಅದೆ ಸ್ಥಾನ ತುಂಬಲು ಆತನ ಸಹೋದರನಾದ ಹರೀಶ್ ಎಂಬುವವರಿಗೆ ಅನುಕಂಪದ ಆದಾರದ ಮೇಲೆ ಅಂಚೆ ಕಚೇರಿಯಲ್ಲಿ ನೌಕರಿಸಿಕ್ಕಿ ಕಾರ್ಯನಿರ್ವಹಿಸುತ್ತಿದ್ದಾರೆ.

ಕಿರಿದಾದ ಅಂಚೆ ಕಚೇರಿ :- ಸೂಳೆರಿಪಾಳ್ಯ ಗ್ರಾಮದಲ್ಲಿ ಸುಮಾರು 25 ವರ್ಷದ ಹಳೆ ಹೆಂಚಿನ ಮನೆಯ ಒಂದು ಮೂಲೆಯಲ್ಲಿ ಕಿರಿದಾದ ಜಾಗದಲ್ಲಿ ಅಂಚೆ ಕಚೇರಿ ನಡೆಸುತ್ತಿದ್ದು, ಅಲ್ಲಿ ಅಧಿಕಾರಿ ಮತ್ತು ಪೋಸ್ಟ್ ಮಾಸ್ಟರ್ ಕಾರ್ಯನಿರ್ವಹಿಸುತ್ತಿದ್ದಾರೆ. ಇದೇ ಅಂಚೆ ಕಚೇರಿಗೆ ಬಸಪ್ಪನ ದೊಡ್ಡಿ, ಕಾಂಚಳ್ಳಿ, ಗುಂಡಾಪುರ, ಪಚ್ಚೆ ದೊಡ್ಡಿ ಸೇರಿದಂತೆ ಹಲವು ಗ್ರಾಮಗಳ ಜನರು ದಿನ ನಿತ್ಯ ಆಗಮಿಸುತ್ತಾರೆ . ಇದರಿಂದ ಬಹಳ ಕಿರಿಕಿರಿಯಾಗಿದೆ ಅಧಿಕಾರಿಗಳು ಗಮನ ಹರಿಸಬೇಕು ಎಂದು ಗ್ರಾಮಸ್ಥರಾದ ರೈತ ಮುಖಂಡ ಕಾಂಚಳ್ಳಿ ಬಸವರಾಜು ತಿಳಿಸಿದರು .
ನಂತರ ಮಾತನಾಡಿದ ಅವರು ಇಲಾಖೆಯಲ್ಲಿ ಕಾರ್ಯ ನಿರ್ವಹಿಸುವ ಅಧಿಕಾರಿಗಳು ವೃದ್ಧಾಪ್ಯ ವೇತನ,ವಿಧವೆ ವೇತನ,ಅಂಗವಿಕಲರ ವೇತನ ಪಡೆಯಲು ಜನರ ಅಂಚೆ ಕಚೇರಿ ಮುಂದೆ ಜಮಾಯಿಸಿರುತ್ತಾರೆ ಸಕಾಲಕ್ಕೆ ಅವರಿಗೆ ಹಣ ಸಂದಾಯವಾಗುವುದಿಲ್ಲ. ಸರ್ಕಾರಿ
ಕಾನೂನಿನ ನಿಯಮದ ಪ್ರಕಾರ ಆಯ ಗ್ರಾಮಗಳಿಗೆ ತೆರಳಿ ವೃದ್ಧಾಪ್ಯ ವೇತನ ನೀಡಬೇಕೆಂಬ ನಿಯಮವಿದ್ದು, ನಿಯಮವನ್ನ ಗಾಳಿಗೆ ತೂರುತಿದ್ದಾರೆ.
ವಯೋವೃದ್ದರೂ ವೃದ್ಧಾಪ್ಯ ವೇತನ ಪಡೆಯಲು ಅಧಿಕಾರಿಯ ಬಳಿ ಕೇಳಿದರೆ ಇಂದಲ್ಲ ನಾಳೆ ಬನ್ನಿ ಎಂಬ ಉಡಾಫೆ ಉತ್ತರ ನೀಡುತ್ತಿದ್ದಾರೆ.
ಹಣ ಪಡೆಯಲು ದಿನಗಟ್ಟಲೆ ನೀರು,ಊಟವಿಲ್ಲದೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಇದೇ ಪರಿಸ್ಥಿತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ತಿಳಿಸಿದರು .
ಹಾಗೂ ಕೇಂದ್ರ ಸರ್ಕಾರ ಕಡು ಬಡವರಿಗೆ ನೀಡುವ ವೃದ್ಯಾಪ ವೇತನ,ವಿಧವೆ ವೇತನವನ್ನು ನೀಡುತ್ತಿದ್ದರೆ ಇತ್ತ ಅಂಚೆ ಅಧಿಕಾರಿಗಳು . ಕಚೇರಿಯಲ್ಲಿ ಠಿಕಾಣಿ ಹೂಡಿ 1200 ರೂಗೆ 50 ಕಮಿಷನ್ ಪಡೆಯುತ್ತಿದ್ದು, ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ವೃದ್ಯಾಪ್ಯ ವೇತನ ಪಡೆಯಲು ಬರುವ ಜನರ ಬಳಿ ಪುಸ್ತಕವನ್ನು ತಾವೇ ಇಟ್ಟು ಕೊಂಡಿದ್ದು ಪುಸ್ತಕದ ಮುಖಪುಟದಲ್ಲಿ ನಿಯಮವನ್ನು ಕೇಂದ್ರ ಸರ್ಕಾರ ಮುದ್ರಿಸಿದೆ. ಈ ನಿಯಮಯವನ್ನ ಪಾಲನೆ ಮಾಡುತ್ತಿಲ್ಲ.
ಗೃಹಲಕ್ಷ್ಮಿ,ಅನ್ನಭಾಗ್ಯ ನೀಡಲು ಹಿಂದೇಟು :- ಕೇಂದ್ರ ಸರ್ಕಾರದಿಂದ ಬರುವ ಸೌಲಭ್ಯ ಪಡೆಯಲು ಕೆಲ ಜನಸಾಮಾನ್ಯರು ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆಯನ್ನು ತೆರೆದಿರುತ್ತಾರೆ. ಇದೀಗ 2023ರಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಪಂಚ ಯೋಜನೆಗಳ ಪೈಕಿ ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯ ಹಣವನ್ನ ಅವರವರ ಖಾತೆಗೆ ಜಮಾ ಮಾಡುತ್ತಿದ್ದಾರೆ, ಇಲ್ಲಿ ಹಳ್ಳಿಗಾಡಿನ ಪ್ರದೇಶವಾದ್ದರಿಂದ ಹೆಚ್ಚಾಗಿ ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆ ತೆರೆದಿರುವುದು, ಗೃಹಲಕ್ಷ್ಮಿ, ಅನ್ನ ಭಾಗ್ಯವು ಅಂಚೆ ಕಚೇರಿಗೆ ಬರುವುದು. ಅದನ್ನು ಕೇಳಿ ಬಂದವರಿಗೆ ಇವತ್ತು ಹಣ ತಂದಿಲ್ಲ ಇನ್ನು ಮೂರು ದಿನ ಬಿಟ್ಟು ಬನ್ನಿ ಎಂದು ಜನರನ್ನ ಕಚೇರಿಗೆ ಅಲೆದಾಟ ನಡೆಸುವುದು ಇವರ ಕೆಲಸವಾಗಿದೆ
ಇದನ್ನು ಪ್ರಶ್ನಿಸಿದ ಹನೂರು ಘಟಕದ ರೈತ ಸಂಘ ದ ಸಂಘಟನಾ ಕಾರ್ಯದರ್ಶಿ ಬಸವರಾಜು ಆದ ನನಗೆ ಹಾರಿಕೆ ಉತ್ತರ ನೀಡುತ್ತಿದ್ದಾರೆ ಎಂದು ಆರೋಪಿಸುತ್ತಾರೆ .

About Mallikarjun

Check Also

ಜ್ಞಾನಾಕ್ಷಿರಾಜರಾಜೇಶ್ವರಿ ಮ್ಯೂಸಿಕ್ ವಿಡಿಯೋ ಆಲ್ಬಮ್ ಶೀರ್ಷಿಕೆ ಅನಾವರಣ

Gnanakshi Rajarajeshwari Music Video Album Title Unveiled ಬೆಂಗಳೂರಿನ ಸುಪ್ರಸಿದ್ದ ಐತಿಹಾಸಿಕ ಶ್ರೀ ಜ್ಞಾನಾಕ್ಷಿ ರಾಜರಾಜೇಶ್ವರಿ ದೇವಸ್ಥಾನ, ಶ್ರೀ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.