Breaking News

ಸಮಗಾರ ಹರಳಯ್ಯ ಜಯಂತ್ಯುತ್ಸವ

Samagara Haralaiya Jayantyutsava


ಗಂಗಾವತಿ: ಸಮಗಾರ ಹರಳಯ್ಯ ಶ್ರಮಿಕ ವರ್ಗದ ಸಂಕೇತವಾಗಿದ್ದು ಹರಳಯ್ಯನವರಂತೆ ಕಾಯಕ ನಿಷ್ಠೆಯಿಂದ ಕಾಯಕ ಮತ್ತು ದಾಸೋಹ ತತ್ವ ಪಾಲನೆ ಮಾಡುವಂತೆ ಆದರ್ಶ ಶಾಲೆಯ ಮುಖ್ಯಶಿಕ್ಷಕ ಶಿವಕುಮಾರ ಹೇಳಿದರು.
ಅವರು ನಗರದ ಸಮಗಾರ ಓಣಿಯಲ್ಲಿ ಸಮಗಾರ ಹರಳಯ್ಯ ಜಯಂತ್ಯುತ್ಸವದ ನಿಮಿತ್ತ ಹರಳಯ್ಯ ಭಾವಚಿತ್ರಕ್ಕೆ ಪೂಜೆ ನೆರವೇರಿಸಿ ಮಾತನಾಡಿದರು.
ಎಸ್ಸಿ, ಎಸ್ಟಿ ಹಿಂದುಳಿದವರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುವ ಮೂಲಕ ಮುಖ್ಯವಾಹಿನಿಗೆ ಬರಲು ನೆರವಾಗಬೇಕು. ದುಶ್ಚಟಗಳಿಂದ ಸರ್ವನಾಶವಾಗುತ್ತದೆ. ದುಶ್ಚಟಗಳನ್ನು ಬಿಟ್ಟು ಕಾಯಕ ಮತ್ತು ಶಿಕ್ಷಣಕ್ಕೆ ಆದ್ಯತೆ ನೀಡುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಕೆಆರ್‌ಪಿ ಪಾರ್ಟಿ ಜುಬೇರ್, ಬಾಷಾ, ಹುಲಿಗೇಶ, ಮಹಾದೇವ , ಬಾಬು, ಹುಚ್ಚಮ್ಮ, ಶಿವಪ್ಪ ಸೇರಿ ಸಮಗಾರ ಸಮಾಜದವರಿದ್ದರು.

About Mallikarjun

Check Also

ಆಸ್ತಿ ತೆರಿಗೆ ಕಡಿಮೆ ಮಾಡಲುವಾಣಿಜ್ಯೋದ್ಯಮ ಮತ್ತು ಕೈಗಾರಿಕಾ ಸಂಸ್ಥೆಗಳ ಮನವಿ.

ಗಂಗಾವತಿ:ಕಲ್ಯಾಣ ಕರ್ನಾಟಕ ಭಾಗಕ್ಕೆ ನೂತನ ಕೈಗಾರಿಕಾ ನೀತಿ ಜಾರಿ ಮಾಡಲು ಮತ್ತು ಆಸ್ತಿ ತೆರಿಗೆ ಕಡಿಮೆ ಮಾಡಲು ಕಲಬುರ್ಗಿ ವಿಭಾಗ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.