Breaking News

ಡಾ.ಸಿದ್ಧರಾಮ ವಾಘಮಾರೆರಿಗೆ ನಿಗಮ, ಮಂಡಳಿ ಅಧ್ಯಕ್ಷ ಸ್ಥಾನ ನೀಡಲು ಆಗ್ರಹ

Demand for Dr. Siddharama Waghamare to be given the position of Chairman of the Corporation and Board

ಬೀದರ್: ಗೋಂಧಳಿ ಸಮಾಜದ ಮುಖಂಡರು, ಕೆಪಿಸಿಸಿ ರಾಜ್ಯ ಓಬಿಸಿ ಘಟಕದ ಉಪಾಧ್ಯಕ್ಷರೂ ಆಗಿರುವ ಡಾ.ಸಿದ್ಧರಾಮ ದಾದಾರಾವ್ ವಾಘಮಾರೆ ಅವರಿಗೆ ನಿಗಮ, ಮಂಡಳಿ ಅಥವಾ ವಿಧಾನ ಪರಿಷತ್ ಸದಸ್ಯ ಸ್ಥಾನ ನೀಡಬೇಕೆಂದು ಬೀದರ್ ಜಿಲ್ಲೆ ಮಾದಾರ ಚೆನ್ನಯ್ಯ ಸಮಾಜ ಅಭಿವೃದ್ಧಿ ವೇದಿಕೆಯ ಜಿಲ್ಲಾ ಸಂಚಾಲಕರಾದ ಶಾಮಣ್ಣಾ ಬಾವಗಿ ಅವರು ಆಗ್ರಹಿಸಿದ್ದಾರೆ.

ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಭಾಪತಿ ಯು.ಟಿ.ಖಾದರ್ ಸೇರಿದಂತೆ ಸಚಿವ ಸಂಪುಟದ ಹಿರಿಯ ಸಚಿವರಾದ ಈಶ್ವರ್ ಖಂಡ್ರೆ, ಶಿವರಾಜ್ ತಂಗಡಗಿ, ಪ್ರಿಯಾಂಕ್ ಖರ್ಗೆ ಸೇರಿದಂತೆ ಎಲ್ಲ ಶಾಸಕರು, ಸಂಸದರು, ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿರುವ ಅವರು, ಸ್ವಾತಂತ್ರ್ಯಾನಂತರದ ದಿನಗಳಿಂದಲೂ ಗೋಂಧಳಿ ಸಮಾಜ ಅತ್ಯಂತ ಹೀನಾಯ ಸ್ಥಿತಿಯಲ್ಲಿದೆ. ಶಿಕ್ಷಣ, ರಾಜಕೀಯ, ಸಾಮಾಜಿಕ ಹಾಗೂ ಆರ್ಥಿಕವಾಗಿ ತೀರಾ ಹಿಂದುಳಿದಿರುವ ಈ ಸಮಾಜದ ಸಬಲೀಕರಣದ ಹಿತದೃಷ್ಟಿಯಿಂದ ಡಾ.ಸಿದ್ಧರಾಮ ವಾಘಮಾರೆ ಅವರಿಗೆ ನಿಗಮ, ಮಂಡಳಿ ಅಥವಾ ವಿಧಾನಪರಿಷತ್ ಸದಸ್ಯ ಸ್ಥಾನ ನೀಡುವ ಮೂಲಕ ಸಾಮಾಜಿಕ ನ್ಯಾಯ ಎತ್ತಿ ಹಿಡಿಯಬೇಕೆಂದು ಅವರು ಒತ್ತಾಯಿಸಿದ್ದಾರೆ.

ಡಾ.ಸಿದ್ಧರಾಮ ವಾಘಮಾರೆ ಅವರು ಆಕಾಶವಾಣಿ ಕಲಾವಿದರಾಗಿದ್ದು, ಕರ್ನಾಟಕ ಸಾಹಿತ್ಯ ಅಕಾಡೆಮಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಆಯೋಜಿಸಿರುವ ಹಲವಾರು ಕಾರ್ಯಕ್ರಮಗಲ್ಲಿ ಗೋಂಧಳಿ ಕಲೆಯನ್ನು ಪ್ರದರ್ಶಿಸಿದ್ದಾರೆ. ಶೋಷಿತ ಸಮಾಜಕ್ಕೆ ಸೇರಿದ ಎನ್.ಟಿ., ಎಸ್.ಎನ್.ಟಿ., ಅಲೆಮಾರಿಗಳಾಗಿರುವ ಇವರು ಗೋಂಧಳಿ ಸಮಾಜದಲ್ಲಿ ಶಿಕ್ಷಣ, ಆರೋಗ್ಯ, ಉದ್ಯೋಗ ನಿವಾರಣೆಗೆ ಶ್ರಮಿಸುತ್ತಿದ್ದಾರೆ. ಅಲೆಮಾರಿ ಜನಾಂಗಗಳಲ್ಲಿಯೇ ಸಾಮಾಜಿಕ, ರಾಜಕೀಯವಾಗಿ ಅತ್ಯಂತ ಹಿಂದುಳಿದಿರುವ ಈ ಸಮಾಜವನ್ನು ಸುಧಾರಿಸಬೇಕಾದರೆ ಇದೇ ಸಮುದಾಯದ ಡಾ.ಸಿದ್ಧರಾಮ ವಾಘಮಾರೆ ಅವರನ್ನು ಸರ್ಕಾರದ ಮಟ್ಟದಲ್ಲಿ ಉನ್ನತವಾದ ನಿಗಮ, ಮಂಡಳಿ ಅಥವಾ ವಿಧಾನ ಪರಿಷತ್ ಸ್ಥಾನ ಮಾನ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ತೆಲಂಗಾಣದಲ್ಲಿ ಪ್ರಮಾಣ ಪತ್ರ ನೀಡಲು ಮನವಿ:

ತೆಲಂಗಾಣ ರಾಜ್ಯದ ಗೋಂಧಳಿ ಸಮಾಜದ ರಾಜ್ಯಾಧ್ಯಕ್ಷರಾಗಿರುವ ಏಕನಾಥ್ ದುನಗೆ ಅವರು ಕೂಡ ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಭಾಪತಿ ಯು.ಟಿ.ಖಾದರ್ ಸಚಿವರಾದ ಈಶ್ವರ್ ಖಂಡ್ರೆ, ಶಿವರಾಜ್ ತಂಗಡಗಿ ಮತ್ತು À ಪ್ರಿಯಾಂಕ್ ಖರ್ಗೆ ಅವರನ್ನು ಭೇಟಿಯಾಗಿ ತೆಲಂಗಾಣ ರಾಜ್ಯದಲ್ಲಿ ಕರ್ನಾಟಕ, ಮಹಾರಾಷ್ಟ್ರ ಮಾದರಿಯಲ್ಲಿ ಗೋಂಧಳಿ ಸಮಾಜಕ್ಕೆ ಜಾತಿ, ಆದಾಯ ಪ್ರಮಾಣ ಪತ್ರ ಮತ್ತು ಬಿಸಿಎ ನೀಡಲು ತೆಲಂಗಾಣ ರಾಜ್ಯದ ಮುಖ್ಯಮಂತ್ರಿಗಳು ಮತ್ತು ಸಂಬಂಧಿಸಿದ ಸರ್ಕಾರದ ಕಾರ್ಯದರ್ಶಿಗಳಿಗೆ ಶಿಫಾರಸ್ಸು ಮಾಡಬೇಕೆಂದು ಮನವಿ ಮಾಡಿದರು. ಕರ್ನಾಟಕ ಮೂಲದ ನಾವುಗಳು ಅಲೆಮಾರಿಗಳಾಗಿ ತೆಲಂಗಾಣ ರಾಜ್ಯದಲ್ಲಿ ಸಾವಿರಾರು ಸಂಖ್ಯೆಯಲ್ಲಿ ವಾಸ ಮಾಡಿಕೊಂಡಿದ್ದೇವೆ. ಅಲ್ಲಿನ ಸರ್ಕಾರಕ್ಕೆ ನಮ್ಮ ಜಾತಿ ಸಮುದಾಯಕ್ಕೆ ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಮಾರ್ಗದರ್ಶನ ಮಾಡಬೇಕೆಂದು ಒತ್ತಾಯಿಸಿದರು.

ಅದೇರೀತಿ, ಗೋಂಧಳಿ ಸಮಾಜ ಅತಿ ಹಿಂದುಳಿದ ಸಮಾಜವಾಗಿದೆ. ಇದುವರೆಗೂ ಯಾವುದೇ ಸರ್ಕಾರ ಬಂದರೂ ಈ ಸಮಾಜಕ್ಕೆ ಮನ್ನಣೆ ನೀಡಿರುವುದಿಲ್ಲ. ಸಾಮಾಜಿಕ ನ್ಯಾಯದ ಹರಿಕಾರರಾದ ತಾವುಗಳು ಡಾ.ಸಿದ್ಧರಾಮ ದಾದಾರಾವ್ ವಾಘಮಾರೆ ಅವರಿಗೆ ನಿಗಮ, ಮಂಡಳಿ ಅಧ್ಯಕ್ಷ ಸ್ಥಾನ ಅಥವಾ ವಿಧಾನಪರಿಷತ್ ಸದಸ್ಯ ಸ್ಥಾನ ಮಾನ ನೀಡಬೇಕೆಂದು ಕೋರಿದರು.

ಈ ನಿಯೋಗದಲ್ಲಿ ಗೋಂಧಳಿ ಸಮಾಜದ ಮುಖಂಡರಾದ ಸಂಜಯ್ ಪಾಚಂಗೆ, ದತ್ತುರಾವ್ ಗರುಡಮಾನೆ ಮತ್ತು ರಾಜು ಕಾಳೆ ಸೇರಿದಂತೆ ಮಾದಾರ ಚೆನ್ನಯ್ಯ ಸಮಾಜ ಅಭಿವೃದ್ಧಿ ವೇದಿಕೆಯ ಪದಾಧಿಕಾರಿಗಳು, ಕಾರ್ಯಕರ್ತರು ಇದ್ದರು.

About Mallikarjun

Check Also

ಅಂಜಲಿ ಕೊಲೆ ಆರೋಪಿಗೆ ಕಠಿಣ ಶಿಕ್ಷೆ  ವಿಧಿಸುವಂತೆ ಗಂಗಾಮತ ಸಮಜದಿಂದ ಒತ್ತಾಯ

Gangamat Samaj insists that the accused of Anjali’s murder should be punished severely ಗಂಗಾವತಿ.ಮೇ.15: ಹುಬ್ಬಳ್ಳಿಯ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.