KRPP youth leader Hosamali Ramesh Nayak urges district administration to monitor Corona
ಗಂಗಾವತಿ:ರಾಜ್ಯದಲ್ಲಿ ಈಗಾಗಲೆ ಕರೋನಾ ನಿಧಾನವಾಗಿ ಹೆಚ್ಚಳವಾಗುತ್ತಿದ್ದು ಇನ್ನೂ ನಮ್ಮ ಕೊಪ್ಪಳ ಜಿಲ್ಲೆಗೆ ಇನ್ನು ಕಾಲಿರಿಸಿಲ್ಲ. ಜಿಲ್ಲೆಯ ಜನತೆ ಆರೋಗ್ಯ ರಕ್ಷಣೆಯ
ದೃಷ್ಟಿಯಿಂದ ಕೂಡಲೆ ಜಿಲ್ಲಾಡಳಿತ ಸಕಲ
ಮುಂಜಾಗ್ರತಾ ಸಿದ್ಧತೆ ಕೈಗೊಳ್ಳಬೇಕು ಎಂದು ಕೆಆರ್ ಪಿ.ಪಿ.ಯುವ ಮುಖಂಡ ಹೊಸಮಲಿ ರಮೇಶ ನಾಯಕ್ ಒತ್ತಾಯಿಸಿದ್ದಾರೆ.
ಈ ಬಗ್ಗೆ ಮಾತನಾಡಿ, ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಆರೋಗ್ಯ ಇಲಾಖೆ ಕೈಗೊಂಡ ಸಿದ್ದತೆಗಳ ಪರಿಶೀಲನೆ ನಡೆಸಬೇಕು. ಬಳಿಕ ಎಲ್ಲಾ ಇಲಾಖೆಯ ಅಧಿಕಾರಿಗಳ ಸಭೆ ನಡೆಸಬೇಕು. ಕರೋನಾ ಸ್ಥಿತಿಯನ್ನು ಎದುರಿಸಲು ಜಿಲ್ಲಾಡಳಿತ ಸಂಪೂರ್ಣ ಸಿದ್ಧತೆ ಮಾಡಿಕೊಳ್ಳಬೇಕು.
ಕರೋನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಈಗಾಗಲೆ ಕೇವಲ ಔಪಚಾರಿಕ ಸಭೆಗಳು ನಡೆದಿವೆ. ಅದು ಅನುಷ್ಠಾನಕ್ಕೆ ಬರಬೇಕು. ಜಿಲ್ಲೆಯಲ್ಲಿ ನಡೆಯುವ ಸಾರ್ವಜನಿಕ ಉತ್ಸವ, ಸಭೆ, ಸಮಾರಂಭಗಳ ಮೇಲೆ ಜಿಲ್ಲಾಡಳಿತ ನಿಗಾವಹಿಸಬೇಕು.
ಅಲ್ಲದೇ ವರ್ಷಾಚರಣೆ ಸೇರಿದಂತೆ ಸಭೆ-ಸಮಾರಂಭದಲ್ಲಿ ಜನದಟ್ಟಣೆ ಅಧಿಕವಾಗದಂತೆ ತಡೆಯಲು ಪೊಲೀಸ್ ಇಲಾಖೆಯ ನೆರವಿನೊಂದಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಮಾಸ್ಕ್ ಸೇರಿದಂತೆ ಅಗತ್ಯ ಮುನ್ನೆಚ್ಚರಿಕೆ ಕೈಗೊಳ್ಳಲು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದು ಹೊಸಮಲಿ ರಮೇಶ ನಾಯಕ್ ಒತ್ತಾಯಿಸಿದ್ದಾರೆ