Breaking News

ಕನ್ನಡ ನಾಮಫಲಕ ಬಳಸುವಂತೆ ಜಯ ಕರ್ನಾಟಕ ಸಂಘಟನೆ ಒತ್ತಾಯ

Jaya Karnataka organization insists on using Kannada nameplate

ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನಲ್ಲಿ ಇವತ್ತು ಶೇಕಡ 60ರಷ್ಟು ಕಡ್ಡಾಯ ಕನ್ನಡ ನಾಮಫಲಕ ಬಳಸುವಂತೆ ಅಂಗಡಿ ಮುಂಗಟ್ಟು ಹಾಗೂ ಬ್ಯಾಂಕುಗಳಿಗೆ ಜಯ ಕರ್ನಾಟಕ ಸಂಘಟನೆ ಆಗ್ರಹಿಸಿ ಮನವಿಪತ್ರ ಸಲ್ಲಿಸಲಾಯಿತು.

ಈ ವೇಳೆ ಮಾತನಾಡಿದ ತಾಲೂಕು ಅಧ್ಯಕ್ಷ ಆಕಾಶ ನಂದಗಾoವ ಕರ್ನಾಟಕದಲ್ಲಿ ಹುಟ್ಟಿ ಬೆಳೆದವರು, ಹೊರರಾಜ್ಯದಿಂದ ಇಲ್ಲಿಗೆ ಬಂದು ಬದುಕು ಕಟ್ಟಿಕೊಂಡವರನ್ನು ನಾವು “ಕನ್ನಡಿಗ”ರೇ ಎಂದು ಭಾವಿಸಿದ್ದೇವೆ.

ಕನ್ನಡ ನೆಲದಲ್ಲಿ ಕನ್ನಡಕ್ಕೇ ಮೊದಲ ಪ್ರಾಶಸ್ತ್ಯ, ಅನ್ನ ಕೊಡುವ ಈ ನೆಲದ ನಿಯಮ ಪಾಲನೆ ಮಾಡಬೇಕಿರುವುದು ಪ್ರತಿಯೊಬ್ಬರ ಕರ್ತವ್ಯ ಕೂಡ.

ಕನ್ನಡವನ್ನು ಉಳಿಸಿ, ಕನ್ನಡತನವನ್ನು ಬೆಳೆಸುವ ಸಲುವಾಗಿ ಬೆಂಗಳೂರಿನ ವಾಣಿಜ್ಯ ಮಳಿಗೆಗಳ ನಾಮಫಲಕದಲ್ಲಿ ಶೇ.60 ಕನ್ನಡ ಅಕ್ಷರಗಳ ಬಳಕೆ ಕಡ್ಡಾಯಗೊಳಿಸಲಾಗಿದೆ. ಇದಕ್ಕೆ ಫೆಬ್ರವರಿ 28 ಕಡೆಯ ದಿನವಾಗಿದ್ದು, ನಿಯಮ ಪಾಲನೆ ಮಾಡಿ “ಹೆಮ್ಮೆಯ ಕನ್ನಡಿಗ”ರಾಗಿ. ಎಂದು ಹೇಳಿದರು
ಒಂದು ವೇಳೆ 60ರಷ್ಟು ಕನ್ನಡ ಬಳಸದೆ ಇದ್ದಲ್ಲಿ ಅಂಗಡಿ ಮುಂಗಟ್ಟಿನ ನಾಮಫಲಕ್ಕೆ ಮಸಿ ಬಳಿಯಲಾಗುವುದು ಎಂದು ಎಚ್ಚರಿಕೆ ನೀಡಿದರು

ಈ ವೇಳೆ ಜಿ ಉಪಾಧ್ಯಕ್ಷ ಪ್ರಹ್ಲಾದ್ ವಾಗಮೊರೆ ಹೋರಾಟ ಸಮಿತಿಯ ಅಧ್ಯಕ್ಷ ವಿಜಯಕುಮಾರ್ ಪವಾರ್ ಜಿಲ್ಲಾ ಹೋರಾಟ ಸಮಿತಿಯ ಅಧ್ಯಕ್ಷರಾದ ಪ್ರಶಾಂತ್ ತೊಡ್ಕರ್ ಸುನಿಲ್ ನಾಯಿಕ್ ರಿಯಾಜ್ ಬಿರಾದಾರ್ ಹಜರತ್ ಅಲಿ ಶ್ರೀಧರ್ ಪವಾರ್ ಬೀರಪ್ಪ ತುರಾಯಿ ಸಚಿನ್ ಕಾಂಬಳೆ ಚೇತನ್ ಸನದಿ ಗಂಗೂಲಿ ತುರಾಯಿ ಮಹೇಶ್ ವಾಗಮೋಡೆ ಬಸವರಾಜ್ ನಂದಗಾವ್ ಮಾಳಪ್ಪ ಮಂಗಸುಳಿ ಅಭಿ ಕಾಂಬಳೆ ಸಚಿನ್ ಜಾಬಗೌಡರ ಶಿವರಾಜ್ ಜಾಬಗೌಡ್ರ್ ನಾಗರಾಜ್ ಸಂತೋಷ್ ಬೇವನೂರ್ ಹಾಗೂ ಸಂಘಟನೆಯ ಮುಖಂಡರು ಉಪಸ್ಥರಿದ್ದರು

About Mallikarjun

Check Also

ಅಂಜಲಿ ಕೊಲೆ ಆರೋಪಿಗೆ ಕಠಿಣ ಶಿಕ್ಷೆ  ವಿಧಿಸುವಂತೆ ಗಂಗಾಮತ ಸಮಜದಿಂದ ಒತ್ತಾಯ

Gangamat Samaj insists that the accused of Anjali’s murder should be punished severely ಗಂಗಾವತಿ.ಮೇ.15: ಹುಬ್ಬಳ್ಳಿಯ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.