ಎಮ್ ಎಲ್ ಸಿ ಸಿ.ಪಿ. ಯೋಗೀಶ್ವ‌ರ್ ಬಾವ ಮಹದೇವಯ್ಯ ಮೃತದೇಹ ಪತ್ತೆ.

H.Mallikarjun
H.Mallikarjun - Kalyanasiri
1 Min Read
ಜಾಹೀರಾತು

MLC C.P. The dead body of Yogeeshwar Bava Mahadevaiah was found.

ಜಾಹೀರಾತು


ವರದಿ:ಬಂಗಾರಪ್ಪ ಸಿ ಹನೂರು .
ಹನೂರು : ಕಳೆದ ನಾಲ್ಕು ದಿನಗಳಿಂದ ನಾಪತ್ತೆಯಾಗಿದ್ದ ಮಾಜಿ ಸಚಿವ ಹಾಲಿ ವಿಧಾನ ಪರಿಷತ್‌ ಸದಸ್ಯ ಸಿ.ಪಿ ಯೋಗೀಶ್ವ‌ರ್ ಅವರ ಬಾವ ಮಹದೇವಯ್ಯ ಅವರ ಮೃತದೇಹ ರಾಮಾಪುರದಲ್ಲಿ ಸೋಮವಾರ ಪತ್ತೆಯಾಗಿದೆ.
ಕಳೆದ ನಾಲ್ಕು ದಿನಗಳಿಂದ ನಾಪತ್ತೆಯಾಗಿದ್ದ ಮಹದೇವಯ್ಯನವರನ್ನು ದುಷ್ಕರ್ಮಿಗಳು ಹತ್ಯೆ ಮಾಡಿ ರಾಮಾಪುರದಿಂದ ಮುಂಭಾಗದಲ್ಲಿರುವ ಅರಣ್ಯ ಪ್ರದೇಶದಲ್ಲಿ ಸುಮಾರು 50 ಅಡಿ ಎತ್ತರದಿಂದ ಕೆಳಕ್ಕೆ ಎಸೆದು ಕಲ್ಲಿನಿಂದ ಚಚ್ಚಿ ಮುಖವನ್ನು ಬಟ್ಟೆಯಿಂದ ಮುಚ್ಚಿದ್ದರು ಎನ್ನಲಾಗಿದೆ.

ಘಟನಾ ಸ್ಥಳಕ್ಕೆ ವಿಧಾನ ಪರಿಷತ್‌ ಸದಸ್ಯ ಸಿಪಿ ಯೋಗೇಶ್ವ‌ರ್ ಅವರ ಸೋದರ ಸಿಪಿ ರಾಜೇಶ್ ಹಾಗೂ ಇನ್ನಿತರರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಹತ್ಯೆಗೆ ಕಾರಣ ನಿಗೂಢವಾಗಿದ್ದು, ಪೊಲೀಸರ ತನಿಖೆಯಿಂದಷ್ಟೇ ಹತ್ಯೆಗೆ ಕಾರಣ ತಿಳಿದು ಬರಬೇಕಿದೆ.

Total Views: 0
Share This Article