Massive protest by BJP Zilla Yuva Morcha condemning the killing of Jain sages and the neglectful attitude of the Planetary Department.
ಗಂಗಾವತಿ,,15 ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಕಾನೂನು ವ್ಯವಸ್ಥೆಯನ್ನು ರಕ್ಷಿಸುವಲ್ಲಿ ಸಂಪೂರ್ಣ ವಿಫಲವಾಗಿದ್ದು ಇತ್ತೀಚಿಗೆ ಜರುಗಿದ ಜೈನ ಮುನಿಗಳ ಹತ್ಯೆ ಬಿ ಗ್ರೇಡ್ ಮುಖಂಡ ವೇಣುಗೋಪಾಲ್ ಹತ್ಯೆ ಸೇರಿದಂತೆ ರಾಜ್ಯದಲ್ಲಿಅ ರಾಜಕಥೆ ತಾಂಡವಾಡುತ್ತಿದ್ದು, ಖಂಡಿಸಿ ಭಾರತೀಯ ಜನತಾ ಪಕ್ಷ ಕೊಪ್ಪಳ ಜಿಲ್ಲಾ ಯುವ ಘಟಕದ ನೇತೃತ್ವದಲ್ಲಿ ಶನಿವಾರದಂದು ಬೃಹತ್ ಪ್ರತಿಭಟನೆ ನಡೆಸಿದರು, ಸಿಬಿಎಸ್ ವೃತ್ತದಿಂದ ಹೊರಟ ಪ್ರತಿಭಟನಾ ಮೆರವಣಿಗೆಯನ್ನು ಮಾಜಿ ಶಾಸಕ ಪರಣ್ಣ ಮುನವಳ್ಳಿ ಚಾಲನೆ ನೀಡಿ ಮಾತನಾಡಿ ಕಾಂಗ್ರೆಸ್ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದು 45 ದಿನಗಳು ಸಹ ಪೂರ್ಣಗೊಂಡಿಲ್ಲ ಈ ಅವಧಿಗಳಿಗೆ ಬೆಳಗಾವಿ ಚಿಕ್ಕೋಡಿಯ ಜೈನ ಮುನಿಗಳ ಬರ್ಬರ ಹತ್ಯ ಇಡೀ ನಾಗರಿಕ ಸಮಾಜ ತಲೆ ತಗ್ಗಿಸುವಂತೆ ಆಗಿದೆ, ಹಾಗೆ ಹಿಂದು ಮುಖಂಡ ವೇಣುಗೋಪಾಲ್ ಹತ್ತೆ ಸಹಷುಲ್ಲಕ ಕಾರಣಕ್ಕೆ ಜರಗಿದ್ದು ಸರ್ಕಾರದ ವೈಫಲ್ಯ ಎದ್ದು ಕಾಣುತ್ತಿದೆ ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಶಾಂತಿ ಯನ್ನು ಕಾಪಾಡುವಲ್ಲಿ ಗ್ರಹ ಇಲಾಖೆ ವಿಶೇಷ ಗಮನ ಹರಿಸಲು ರಾಜ್ಯಪಾಲರು ಸೂಚನೆ ನೀಡಬೇಕೆಂದು ಒಪ್ಪಿಸಲಾಗುತ್ತದೆ ಎಂದರು, ಯುವ ಘಟಕದ ಜಿಲ್ಲಾಧ್ಯಕ್ಷ
ಶಿವಕುಮಾರ್ ಅರಿಕೇರಿ ವೀರಭದ್ರಪ್ಪ ನಾಯಕ್ ಕಾಶಿನಾಥ್ ತಿಪ್ಪೇರುದ್ರಸ್ವಾಮಿ ಹನುಮಂತಪ್ಪ ನಾಯಕ್ ಸೇರಿದಂತೆ ಹಲವು ಘಟಕಗಳ ಸದಸ್ಯರು ಅಧ್ಯಕ್ಷ ಪದಾಧಿಕಾರಿಗಳು ಹಾಗೂ ಜೈನ್ ಸಮಾಜದ ಮುಖಂಡರು ಪಾಲ್ಗೊಂಡಿದ್ದರು ಬಳಿಕ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಶ್ರೀ ಮಹಾವೀರ ವೃತ್ತದಲ್ಲಿ ತಸಿಲ್ದಾರರ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದರು