Breaking News

ಅಂಬೇಡ್ಕರ್ ವಿಧೋದ್ದೇಶ ಸಹಕಾರಿ ಸಂಘ ಸ್ಥಾಪನೆಗೆ ಪೂರ್ವ ಭಾವಿ ಸಭೆ

Ambedkar Vidhodesha Co-operative Society Pre-Prospective Meeting

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಸುಳ್ಯ: ಅಂಬೇಡ್ಕರ್ ಆದರ್ಶ ಸೇವಾ ಸಮಿತಿ ಕರ್ನಾಟಕ ದಕ್ಷಿಣಕನ್ನಡ ಜಿಲ್ಲೆ ಸುಳ್ಯ ತಾಲೂಕು ಇದರ ಆಶ್ರಯದಲ್ಲಿ ಅಂಬೇಡ್ಕರ್ ವಿವಿಧೋದ್ದೇಶ ಸಹಕಾರಿ ಸಂಘ ನಿ.ಇದರ ಪೂರ್ವ ಭಾವಿ ಸಭೆ ಮೇನಾಲ ಅಂಬೇಡ್ಕರ್ ಭವನದಲ್ಲಿ ಮನೋಹರ ಪಲ್ಲತ್ತಡ್ಕ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಅಂಬೇಡ್ಕರ್ ವಿವಿಧೋದ್ದೇಶ ಸಹಕಾರಿ ಸಂಘ ನಿ.ಇದರ ಸಂಸ್ಥಾಪಕರಾದ ತುಂಬಲ ರಾಮಣ್ಣ ಸಂಘದ ಮಾಹಿತಿ ನೀಡಿ ರಾಜ್ಯಾಧ್ಯಂತ 27 ಶಾಖೆ ಆರಂಭವಾಗಿದೆ ಇದರ ಸದುಪಯೋಗವನ್ನು ಪರಿಶಿಷ್ಟ ಜಾತಿ ಮತ್ತು ಪಂಗಡದವರು ಪಡೆದುಕೊಳ್ಳಿ ಸುಳ್ಯ ತಾಲೂಕಿನಲ್ಲಿ ಕೂಡ ಶಾಖೆ ತೆರೆದು ಸಮುದಾಯದ ಏಳಿಗೆಗೆ ಶ್ರಮ ವಹಿಸಿ ಎಂದರು. ಕೋಲಾರ ಶಾಖೆಯ ಸಿದ್ಧಾರ್ಥ್ ಆನಂದ ಮಾಲೂರು. ಕನಕಪುರ ಶಾಖೆಯ ಸಿಂಡಿಕೇಟ್ ಶಿವಣ್ಣ.ಪಿರಿಯಪಟ್ಣ ಶಾಖೆಯ ಐಲಪುರ ರಾಮು.ಕುಶಾಲನಗರ ಶಾಖೆಯ ಗಣೇಶ ಮತ್ತು ಆದಿದ್ರಾವಿಡ ಸುಳ್ಯ ತಾಲೂಕು ಅಧ್ಯಕ್ಷರಾದ ಬಾಲಕೃಷ್ಣ ಡಿ.ಪಿ.ದೊಡ್ಡೇರಿ.ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೆ ಹರೀಶ್ ಮೇನಾಲ.ಸುಂದರ ಬಾಡೇಲು. ಪ್ರಕಾಶ್ ಕಲ್ಲಗುಡ್ಡೆ, ಮಧುಸೂದನ್ ಕಾಟಿಪಳ್ಳ ಸಂಪೂರ್ಣ ಸಹಕಾರ ನೀಡಿದರು.ಮತ್ತು ಸಭೆಯಲ್ಲಿ ಐವತ್ತು ಹೆಚ್ಚು ಜನ ಭಾಗವಹಿಸಿದರು. ಸಾರ್ವಜನಿಕರಿಗೆ ಮಧ್ಯಾಹ್ನ ಭೋಜನ ವ್ಯವಸ್ಥೆ ಮಾಡಲಾಯಿತು.ಸತೀಶ್ ಬೂಡುಮಕ್ಕಿ ಸ್ವಾಗತಿಸಿದರು.ಚಂದ್ರಶೇಖರ ಕೆ ಪಲ್ಲತ್ತಡ್ಕ ಕಾರ್ಯಕ್ರಮ ನಿರೂಪಿಸಿದರು.

About Mallikarjun

Check Also

ಜಿಲ್ಲಾ ಕಾಂಗ್ರೆಸ್‌ಗೆ ಕಾರ್ಯದರ್ಶಿಯಾಗಿ ವಿಶಾಲಾಕ್ಷಿ ನೇಮಕ

Vishalakshi appointed as secretary of District Congress ಕೊಪ್ಪಳ: ತಾಲೂಕಿನ ಕಿನ್ನಾಳ ಗ್ರಾಮದ ವಿಶಾಲಾಕ್ಷಿ ವಿರೇಶ ತಾವರಗೇರಿ ಅವರನ್ನು …

Leave a Reply

Your email address will not be published. Required fields are marked *