Breaking News

ಪ್ರಿಯಾಂಕ್ ಖರ್ಗೆ ವಿರುದ್ಧ ಸ್ಪರ್ಧಿಸಿದ್ದ ಬಿಜೆಪಿ ಮುಖಂಡ ಅರೆಸ್ಟ್​

BJP leader who contested against Priyank Kharge arrested


IMG 20230715 WA0277 1 300x200

ಕಲಬುರಗಿ(ಜು.15): ಕಲಬುರಗಿ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಅರೆಸ್ಟ್ ಆಗಿದ್ದಾರೆ. ಪ್ರಿಯಾಂಕ್ ಖರ್ಗೆ ವಿರುದ್ದ ಸ್ಪರ್ಧಿಸಿ ಸೋಲನುಭವಿಸಿದ್ದ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ್ ಚುನಾವಣಾ ಸಂದರ್ಭದಲ್ಲಿನ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದಾರೆ. ಹೀಗಿದ್ದರೂ ವಿಶೇಷ ಜಾಮೀನು ಪಡೆದ ಮಣಿಕಂಠ ರಾಠೋಡ್ ರಾತ್ರಿಯೇ ಜೈಲಿನಿಂದ ಹೊರ ಬಂದಿದ್ದಾರೆ.
ಇನ್ನು ಅತ್ತ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುಟುಂಬಕ್ಕೆ ಕೊಲೆ ಬೆದರಿಕೆ ಪ್ರಕರಣದ ತನಿಖೆ ಚುರುಕುಗೊಂಡಿದ್ದು, ಖರ್ಗೆ ಕುಟುಂಬ ಸಾಫ್ ಮಾಡುವುದಾಗಿ ಮಣಿಕಂಠ ಹೇಳಿದ್ದ ಆಡಿಯೋ ಚುನಾವಣೆ ಸಂದರ್ಭದಲ್ಲಿ ತೀವ್ರ ಸಂಚಲನ ಸೃಷ್ಟಿಸಿತ್ತು. ಇದೀಗ ಈ ಪ್ರಕರಣದ ತನಿಖೆಯನ್ನೂ ಚಿತ್ತಾಪುರ ಪೊಲೀಸರು ಚುರುಕುಗೊಳಿಸಿದ್ದಾರೆ. ಈ ಪ್ರಕರಣದಲ್ಲಿಯೂ ಮಣಿಕಂಠ ರಾಠೋಡ್ ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ಪಡೆದಿದ್ದಾರೆ.
ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಮಣಿಕಂಠ ರಾಠೋಡ್ ಜಾಮೀನು ಪಡೆದಿದ್ದರೂ ಚಿತ್ತಾಪುರ ಪೊಲೀಸರು ಅವರಿಗೆ ನೋಟಿಸ್ ನೀಡಿದ್ದಾರೆ. ಈ ಮೂಲಕ ವಿಧಾನಸಭಾ ಚುನಾವಣೆಯಲ್ಲಿ ಪ್ರಿಯಾಂಕ್ ಖರ್ಗೆ ವಿರುದ್ದ ತೊಡೆತಟ್ಟಿದ್ದ ಮಣಿಕಂಠ ರಾಠೋಡ್​ಗೆ ಇದೀಗ ಸಂಕಷ್ಟ ಬಂದಿದೆ.

ಜಾಹೀರಾತು

About Mallikarjun

Check Also

img20250929192755.jpg

ಕಲ್ಯಾಣ ಕ್ರಾಂತಿ ಕಥಾ ಪಠಣ ಚಲವಾದಿ ಓಣಿಯ ಯಮುನೂರಪ್ಪ ಚಲವಾದಿ ಯವರ ಮನೆಯಲ್ಲಿ ಜರುಗಿತು.

The Kalyana Kranti Katha recitation took place at the house of Yamunurappa Chalavadi of Chalavadi …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.