Breaking News

ಗಡಿ ಗ್ರಾಮಗಳಲ್ಲಿ ಕನ್ನಡ ರಾಜ್ಯೋತ್ಸವದ ಆಚರಣೆ ಶ್ಲಾಘನೀಯ : ಶಾಸಕ ಎಂ.ಆರ್ ಮಂಜುನಾಥ್

Celebration of Kannada Rajyotsava in border villages is commendable: MLA MR Manjunath

ಜಾಹೀರಾತು


ವರದಿ :ಬಂಗಾರಪ್ಪ ಸಿ ಹನೂರು.
ಹನೂರು : ಕ್ಷೇತ್ರ ವ್ಯಾಪ್ತಿಯಲ್ಲಿನ ಪಿ.ಜಿ ಪಾಳ್ಯ ಗ್ರಾಮದಲ್ಲಿ ವಾಹನ ಚಾಲಕರು ಮತ್ತು ಮಾಲೀಕರ ಒಕ್ಕೂಟ ವತಿಯಿಂದ 50ನೇ ವರ್ಷದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಅದ್ದೂರಿಯಾಗಿ ಮೆರವಣಿಗೆ ಮಾಡುವ ಮೂಲಕ ಶಾಸಕ ಎಮ್ ಆರ್ ಮಂಜುನಾಥ್ ಆಚರಣೆ ಮಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಕನ್ನಡ ಆಚರಣೆಯನ್ನು ಸಂಭ್ರಮಿಸೋಣ ಕನ್ನಡವನ್ನು ಉಸಿರಾಡೋಣ, ಮುಂದಿನ ದಿನಗಳಲ್ಲಿ ನಮ್ಮ ಮಕ್ಕಳಿಗೆ ಕನ್ನಡಾಭಿಮಾನ ಬೆಳೆಸಿಕೊಳ್ಳಬೇಕು. ಹಿರಿಮೆಯ ಮಹಾನ್ ಕವಿಗಳು ಅವರ ಚಿಂತನೆಗಳು ಸಾಧಕರು ಎಲ್ಲವನ್ನು ಅರ್ಥಪೂರ್ಣವಾಗಿ ಕನ್ನಡದ ಬಗ್ಗೆ ಬಹಳಷ್ಟು ಸಾಹಿತ್ಯದ ಮೂಲಕ ತಿಳಿಸಿಕೊಟ್ಟಿದ್ದಾರೆ. ಕನ್ನಡ ಭಾಷೆಗೆ ಮೆರಗನ್ನು ತಂದು ಕೊಡುವಂತಹ ಕೆಲಸವನ್ನು ಮಾಡಿದ್ದಾರೆ.ನಮ್ಮ ಕ್ಷೇತ್ರದ ಗಡಿ ಭಾಗದಲ್ಲಿ ಕನ್ನಡ ಅಭಿಮಾನ ಉಳಿಸಿಕೊಂಡು ಬೆಳೆಸುವುದು ಶ್ಲಾಘನೀಯವಾದುದ್ದು. ಈ ಗ್ರಾಮದಲ್ಲಿ ಕನ್ನಡ ರಾಜ್ಯೋತ್ಸವದ ಆಚರಣೆ ಮಾಡಿರುವುದು ಹೋಬಳಿ ಮಟ್ಟಕ್ಕೆ ಮಾದರಿಯಾಗಿದೆ. ಅಪೂರ್ಣವಾಗಿ ಆಚರಣೆ ಮಾಡಿದ್ದಾರೆ. ಇದೆ ಅಭಿಮಾನ ಮುಂದೆಯೂ ಉಳಿಯಲಿ ಕನ್ನಡ ಅಭಿಮಾನ ಕನ್ನಡ ಭಾಷೆಗೆ ಉಳಿಸಿ ಬೆಳೆಸುವು ನಮ್ಮೆಲ್ಲರ ಕರ್ತವ್ಯ ಎಂದು ತಿಳಿಸಿದರು.
ಇದೇ ಸಮಯದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ಸಂತೋಷ್ ಕುಮಾರ್, ಒಡೆಯರ ಪಾಳ್ಯ ಮಲೆ ಮಾದೇಶ್ವರ ಕಾಲೇಜು ಪ್ರಾಂಶುಪಾಲರು ಶಿವಸ್ವಾಮಿ,ಹಾಲು ಉತ್ಪಾದಕ ಸಹಕಾರ ಸಂಘದ ಅಧ್ಯಕ್ಷ ಕೃಷ್ಣಮೂರ್ತಿ, ಅರಣ್ಯ ಇಲಾಖೆ ಸೋಮೇಂದ್ರ, ಗ್ರಾಮಸ್ಥರು ಹಾಜರಿದ್ದರು.

About Mallikarjun

Check Also

ರಾಯಚೂರ ಜಿಲ್ಲೆಯ ನೂತನ ಜಿಲ್ಲಾ ಪಂಚಾಯತ್ ಸಿಇಓ ಈಶ್ವರ ಕುಮಾರ ಕಾಂದೂ ಅಧಿಕಾರ ಸ್ವೀಕಾರ

Raichur district's new Zilla Panchayat CEO Ishwar Kumar Kandu assumes office ರಾಯಚೂರ ಜುಲೈ 9 (ಕ.ವಾ.): …

Leave a Reply

Your email address will not be published. Required fields are marked *