Breaking News

ತಿಪಟೂರು:ಮಾತೃಭಾಷೆ ಎಂಬ ಕಲ್ಪನೆ ಕೇವಲ ಮಾತಿನಲ್ಲಿರದೆ ಮನಸಿನ ಭಾವನೆ ಯಲ್ಲಿರಬೇಕು – ಡಾ.ರುದ್ರಮುನಿಸ್ವಾಮೀಜಿ.

Tipaturu: The idea of ​​mother tongue should not only be in the words but in the feeling of the mind – Dr. Rudramuniswameeji.

ಜಾಹೀರಾತು

ತಿಪಟೂರು ಕನ್ನಡ ಭಾಷೆಯು ಸುಮಾರು ನಾಲ್ಕು ಸಾವಿರ ವರ್ಷಗಳ ಹಿಂದಿನ ಇತಿಹಾಸ ಹೊಂದಿದ್ದು ಇಂತಹ ಸುಧೀರ್ಘ ಇತಿಹಾಸ ಹೊಂದಿರುವ ಕನ್ನಡ ಭಾಷೆಯು ಕೇವಲ ಜನಗಳ ನಡುವೆ ಆಡು ಭಾಷೆಯಾಗಿ ಉಳಿಯದೆ ಮನಸ್ಸಿನ ಭಾಷೆಯಾಗಿ ಉಳಿಯಬೇಕು ಆಗ ಮಾತ್ರ ಕನ್ನಡ ಭಾಷೆಯ ಉಳಿವು ಸಾಧ್ಯ ಎಂದು ಷಡಕ್ಷರ ಮಠದ ಡಾ. ರುದ್ರಮುನಿ ಮಹಾಸ್ವಾಮೀಜಿಯವರು ತಿಳಿಸಿದರು.
ನಗರದ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ಕರ್ನಾಟಕ ಭೀಮಸೇನೆ ವತಿಯಿಂದ 68ನೇ ಕನ್ನಡ ರಾಜ್ಯೋತ್ಸವ ಹಾಗೂ ಸಾರ್ವಜನಿಕ ಆಸ್ಪತ್ರೆಯ ಬಡ ರೋಗಿಗಳಿಗೆ ಉಚಿತ ಹಣ್ಣು ಹಂಪಲು ವಿತರಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು
ಒಂದು ಭಾಷೆಯು ಕೇವಲ ಆಡು ಭಾಷೆಯಾಗಿ ಉಳಿಯುವುದರ ಜೊತೆಗೆ ಪ್ರತಿಯೊಬ್ಬರ ಮನಸ್ಸಿನಲ್ಲಿ ಉಳಿಯುವಂತಹ ಭಾಷೆಯಾಗಬೇಕು ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಕನ್ನಡಿಗನು ಮನಸ್ಸು ಪೂರ್ವಕವಾಗಿ ಕನ್ನಡ ಭಾಷೆಯನ್ನು ಉತ್ತುಂಗಕ್ಕೆ ಕೊಂಡೊಯ್ಯುವಂತೆ ಮಾಡುವುದೇ ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯವಾಗಿದೆ ಎಂದು ತಿಳಿಸಿದರು.
ಈ ವೇಳೆ ಕರ್ನಾಟಕ ಭೀಮಸೇನೆ ರಾಜ್ಯ ಅಧ್ಯಕ್ಷ ಶಂಕರ್ ರಾಮಲಿಂಗಯ್ಯ ಮಾತನಾಡಿ ತಿಪಟೂರು ತಾಲೂಕು ಅಧ್ಯಕ್ಷರಾದ ಮಂಜುನಾಥ್ ಅಂಜನಪ್ಪನವರ ನೇತೃತ್ವದಲ್ಲಿ ಈ ಬಾರಿ ತಿಪಟೂರು ತಾಲೂಕು ಮಟ್ಟದಲ್ಲಿ ಕರ್ನಾಟಕ ಭೀಮಸೇನೆ ವತಿಯಿಂದ ಕನ್ನಡ ರಾಜ್ಯೋತ್ಸವ ಆಚರಿಸುತ್ತಿರುವುದು ಹೆಮ್ಮೆಯ ಸಂಗತಿ ಹಾಗೂ ಬಡ ರೋಗಿಗಳಿಗೆ ಹಣ್ಣುಹಂಪಲು ವಿತರಿಸುತ್ತಿರುವ ಕಾರ್ಯ ಶ್ಲಾಘನೀಯ ಎಂದ ಅವರು ಅವಶ್ಯವಿದ್ದಲ್ಲಿ ಮುಂದಿನ ದಿನಮಾನಗಳಲ್ಲಿ ಕರ್ನಾಟಕ ಭೀಮಸೇನೆ ರಾಜ್ಯ ವತಿಯಿಂದ ಹೆಚ್ಚಿನ ಸಹಕಾರ ನೀಡುವುದಾಗಿ ಇದೇ ವೇಳೆ ಅವರು ಭರವಸೆ ನೀಡಿದರು.

ತಿಪಟೂರು ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಕೆ ಎಂ ಪರಮೇಶ್ವರಯ್ಯ ಮಾತನಾಡಿ ಕನ್ನಡ ಭಾಷೆಯ ಇತಿಹಾಸ ಬಹಳ ಹಿಂದಿನಿಂದಲೂ ಇದ್ದು ಸುಮಾರು ನಾಲ್ಕರಿಂದ ಐದು ಸಾವಿರ ವರ್ಷಗಳ ಇತಿಹಾಸ ಹೊಂದಿದೆ ಇಂತಹ ಕನ್ನಡ ಭಾಷೆಯನ್ನು ಲಿಪಿಗಳ ರಾಣಿ ಎಂದು ಕರೆಯುವುದು ಉಂಟು ಹಿಂದೆ ಅನೇಕ ದೇಶಗಳಲ್ಲಿ ಕನ್ನಡ ಭಾಷೆಯ ಲಿಪಿಯನ್ನು ಕೂಡ ನೋಟುಗಳಲ್ಲಿ ಮುದ್ರಿಸಲಾಗುತ್ತಿದ್ದು ಇದರಿಂದ ಕನ್ನಡ ಭಾಷೆ ಎಷ್ಟು ಪುರಾತನ ಎಂಬುದು ತಿಳಿಯುತ್ತದೆ. ಇಂತಹ ಕನ್ನಡ ಭಾಷೆಯು ಇಂದು ಹಲವು ಭಾಷೆಗಳ ದಬ್ಬಾಳಿಕೆ ನಡುವೆ ನಲುಗಿರುವುದು ಕಳವಳಕಾರಿ ವಿಚಾರ. ಇದೇ ರೀತಿ ಮುಂದುವರೆದಲ್ಲಿ ಮುಂದೆ ಕನ್ನಡ ಭಾಷೆಯು ಕೇವಲ ಯಾವುದೋ ಪುಸ್ತಕದಲ್ಲಿ ನೋಡುವ ದಿನ ದೂರವಿಲ್ಲ ಹಾಗಾಗಿ ಇಂತಹ ಭಾಷೆಯನ್ನು ಉಳಿಸಿ ಬೆಳೆಸುವ ಕರ್ತವ್ಯ ಪ್ರತಿಯೊಬ್ಬ ಕನ್ನಡಿಗರಿಗೆ ಸೇರಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ತಾಲೂಕು ಅಧ್ಯಕ್ಷ ಮಂಜುನಾಥ್ ಆಂಜನಪ್ಪ ಜಿಗಣಿ ಶಂಕರ್. ಕುಮಾರ್ ಆಸ್ಪತ್ರೆಯ ಡಾ.ಶ್ರೀಧರ್.
ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಅಧ್ಯಕ್ಷ ವಿಜಯಕುಮಾರ್ ತಿಪಟೂರು ಟೌನ್‌ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷ ಬಿ ಕೆ ರಾಮಯ್ಯ ವಕೀಲರಾದ ಚನ್ನಕೇಶವ ತಾಲೂಕು ಉಪಾಧ್ಯಕ್ಷರಾದ ಲಕ್ಷ್ಮಯ್ಯ ಗ್ರಾಮ ಪಂಚಾಯತಿ ಸದಸ್ಯರಾದ ತಿಮ್ಮೇಗೌಡ. ರಾಜೇಶ್ವರಿ ಹಾಗೂ ಕರ್ನಾಟಕ ಭೀಮಸೇನೆಯ ರಂಗಸ್ವಾಮಿ ಅಂಜನಪ್ಪ ಮಂಗಳಮ್ಮ ಮೊದಲಾದ ಪದಾಧಿಕಾರಿಗಳು ಕಾರ್ಯಕರ್ತರು ಹಾಜರಿದ್ದರು

About Mallikarjun

Check Also

ಜ್ಞಾನಾಕ್ಷಿರಾಜರಾಜೇಶ್ವರಿ ಮ್ಯೂಸಿಕ್ ವಿಡಿಯೋ ಆಲ್ಬಮ್ ಶೀರ್ಷಿಕೆ ಅನಾವರಣ

Gnanakshi Rajarajeshwari Music Video Album Title Unveiled ಬೆಂಗಳೂರಿನ ಸುಪ್ರಸಿದ್ದ ಐತಿಹಾಸಿಕ ಶ್ರೀ ಜ್ಞಾನಾಕ್ಷಿ ರಾಜರಾಜೇಶ್ವರಿ ದೇವಸ್ಥಾನ, ಶ್ರೀ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.