Breaking News

ಕೆ ಎನ್ ಫೌಂಡೆಷನ್ ವತಿಯಿಂದ ಸಾಮಾಜಿಕ ಕಾರ್ಯ

Social work by KN Foundation

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು


ವರದಿ :ಬಂಗಾರಪ್ಪ ಸಿ ಹನೂರು .
ಹನೂರು :ಸಮೀಪದ ಕಾಂಚಳ್ಳಿ ಗ್ರಾಮದ ಸರ್ಕಾರಿ ಉನ್ನತಿಕರಿಸಿದ ಪ್ರಾಥಮಿಕ ಶಾಲೆಯಲ್ಲಿ ಕೆ ಎನ್,ಫೌಂಡೇಶನ್ ಬೆಂಗಳೂರು, ಇವರ ವತಿಯಿಂದ ಗರ್ಭಿಣಿ ಮಹಿಳೆಯರಿಗೆ ಸಿಮಂತ ಕಾರ್ಯಕ್ರಮ, ಸಾಧಕರಿಗೆ ಸನ್ಮಾನ,ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು.
ಕಾರ್ಯಕ್ರಮಕ್ಕೆ ಆಗಮಿಸಿದ ಕೆ ಏನ್ ಫೌಂಡೇಶನ್ ವ್ಯವಸ್ಥಾಪಕರಾದ ರಾಜ್ ಕೃಷ್ಣ ಮೂರ್ತಿ ಮಾತನಾಡಿ ಗರ್ಭಿಣಿ ಮಹಿಳೆ ಯರನ್ನು ಗುರುತಿಸಿ ಅವರಿಗೆ ಸೀ ಮಂತ ಕಾರ್ಯವನ್ನು ಪ್ರತಿ ವರ್ಷ ಮಾಡುತ್ತಿದ್ದೇವೆ ಅದೇ ರೀತಿಯಾಗಿ ಈ ವರ್ಷವೂ ಸಹ ಆಯೋಜನೆ ಮಾಡಲಾಯಿತು ಇನ್ನೂ ನಮ್ಮ ಸಮುದಾಯದ ಮಕ್ಕಳು ಎಸ್ ಎಸ್ ಎಲ್ ಸಿ ಪರೀಕ್ಷೆ ಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳು ಹಾಗೂ ಸಾಧಕರನ್ನು ಗುರುತಿಸಿ ಅವರಿಗೆ ಸನ್ಮಾನ ಮಾಡುವ ಮೂಲಕ ಪ್ರೋತ್ಸಾಹ ನೀಡುವ ದೆಸೆಯಿಂದ ಈ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗುತ್ತಿದೆ, ಜಾತಿ ಭೇದ ವಿಲ್ಲದೆ ಎಲ್ಲಾ ಸಮುದಾಯದ ಗರ್ಭಿಣಿ ಮಹಿಳೆಯರಿಗೆ ಸೀಮಂತ ಶಾಸ್ತ್ರ ಮಾಡಲಾಯಿತು,ನಮ್ಮ ವನ್ನಿ ಕುಲ ಕ್ಷೇತ್ರಿಯ ಜನಾಂಗದವರು ಸಮಾಜದ ಮುಖ್ಯ ವಾಹಿನಿಗೆ ಬರಬೇಕು ಎನ್ನುವ ನಿಟ್ಟಿನಲ್ಲಿ ಅವರನ್ನು ಗುರುತಿಸಿ ಸನ್ಮಾನಿಸಲಾಯಿತು. ಗರ್ಭ ಧರಿಸಿದ ತಾಯಿಗೆ ಹೆಣ್ಣು,ಮಗುವಾಗಲಿ ಅಥವಾ ಗಂಡು ಮಗುವಾಗಲಿ ಹುಟ್ಟಿದ ಮಗು ಸಮಾಜಕ್ಕೆ ಉತ್ತಮ ಪ್ರಜೆಯಾಗಲಿ, ಸಮಾಜದಲ್ಲಿ ಒಳ್ಳೆಯ ಹೆಸರು ಮಾಡಲಿ ,ಕೆ ಏನ್ ಫೌಂಡೇಶನ್ ವತಿಯಿಂದ ನಿರಂತರವಾಗಿ ಹಲವಾರು ಜನಪರ ಕಾರ್ಯಕ್ರಮಗಳನ್ನು ಮಾಡುತ್ತ ಬಂದಿದೀವಿ, ನಮ್ಮ ವನ್ನಿ ಕುಲ ಕ್ಷತ್ರಿಯ ಸಮಾಜದವರು ಆರ್ಥಿಕವಾಗಿ, ಸಾಮಾಜಿಕ, ಶೈಕ್ಷಣಿಕ ವಾಗಿ ಅಭಿವೃದ್ಧಿ ಯನ್ನು ಹೊಂದ ಬೇಕು ,
ಆಟೋಟ ಸ್ಪರ್ಧೆ ಯಲ್ಲಿ ಭಾಗವಹಿಸಿ ವಿಜೇತ ರಾದ 24 ಮಕ್ಳಳಿಗೆ ಬಹುಮಾನ ಗಳನ್ನು ವಿತರಣೆ ಮಾಡಲಾಯಿತು ಎಂದರು .
ಇದೇ ಸಂದರ್ಭದಲ್ಲಿ ಕೆ ಎನ್ ಪೌಂಡೇಶನ್ ನ ಉಪಾಧ್ಯಕ್ಷ ವಿಶ್ವನಾಥ್, ಕಾರ್ಯದರ್ಶಿ ನಿರಂಜನ್, ವನ್ನಿ ಕುಲ ಕ್ಷತ್ರಿಯ ಸಂಘದ ಅಧ್ಯಕ್ಷ ಎಂ ಮಹದೇವ್, ಶಾಲಾ ಮುಖ್ಯ ಶಿಕ್ಷಕ ವೆಂಕಟೇಶ್,ಬಸಪ್ಪನ ದೊಡ್ಡಿ ಗ್ರಾಮ ಪಂಚಾಯತಿ ಸದಸ್ಯ ಲಕ್ಷ್ಮಿ ಜಡೇ ಸ್ವಾಮಿ, ಅಜ್ಜೀಪುರ ಗ್ರಾಮ ಪಂಚಾಯತಿ ಸದಸ್ಯ ಮಹದೇವ, ಶಿಕ್ಷಕರರಾದ ಕೃಷ್ಣೆ ಗೌಡ, ದೈಹಿಕ ಶಿಕ್ಷಕ ನಾರಾಯಣ್, ಮುಖಂಡರಾದ ಬಸವರಾಜ್ ,ಗ್ರಾಮದ ಮುಖಂಡರುಗಳು ಹಾಗೂ ಆಶಾ ಕಾರ್ಯಕರ್ತೆಯರು,ಸೇರಿದಂತೆ ಇನ್ನಿತರರು ಹಾಜರಿದ್ದರು.

About Mallikarjun

Check Also

ಜಿಲ್ಲಾ ಕಾಂಗ್ರೆಸ್‌ಗೆ ಕಾರ್ಯದರ್ಶಿಯಾಗಿ ವಿಶಾಲಾಕ್ಷಿ ನೇಮಕ

Vishalakshi appointed as secretary of District Congress ಕೊಪ್ಪಳ: ತಾಲೂಕಿನ ಕಿನ್ನಾಳ ಗ್ರಾಮದ ವಿಶಾಲಾಕ್ಷಿ ವಿರೇಶ ತಾವರಗೇರಿ ಅವರನ್ನು …

Leave a Reply

Your email address will not be published. Required fields are marked *