October 24 is World Polio Day
ಗಂಗಾವತಿ, ವಿಶ್ವದಾದ್ಯಂತ ಪೋಲಿಯೋ ನಿರ್ಮೂಲನೆ ಮತ್ತು ಪೋಲಿಯೋ ಲಸಿಕೆ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿವರ್ಷ ಅಕ್ಟೋಬರ್ 24ರಂದು ವಿಶ್ವ ಪೋಲಿಯೋ ದಿನ ಆಚರಿಸಲಾಗುತ್ತದೆ ಎಂದು ಗಂಗಾವತಿ ರೋಟರಿ ಸಂಸ್ಥೆ ಅಧ್ಯಕ್ಷರಾದ ಎ. ಶಿವಕುಮಾರ ರವರು ಇಂದು ಜಯನಗರ ರೋಟರಿ ಆಫೀಸ್ ನಲ್ಲಿ ವಿಶ್ವ ಪೋಲಿಯೋ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು*
ಯುನಿಸೆಫ್ ಮತ್ತು ರೋಟರಿ ಅಂತರಾಷ್ಟ್ರೀಯ ಸಂಸ್ಥೆ ಪಲ್ಸ್ ಪೋಲಿಯೋ ಅಭಿಯಾನದಲ್ಲಿ ಭಾರತ ಆರೋಗ್ಯ ಸಚಿವಾಲಯ ಮತ್ತು ವಿಶ್ವ ಆರೋಗ್ಯ ಸಂಸ್ಥೆ ಭಾರತ ಸರ್ಕಾರ ಈ ಅಭಿಯಾನವನ್ನು ಮಕ್ಕಳ ಮನೆ ಮನೆಗೆ ತೆರಳಿ ಪಲ್ಸ್ ಪೋಲಿಯೋ ಲಸಿಕೆ ನೀಡಲಾಗುತ್ತಿದೆ ಎಂದು ತಿಳಿಸಿದರು
ರೋಟರಿ ಡಿಸ್ಟ್ರಿಕ್ ಸೆಕ್ರೆಟರಿ ಟಿ. ಆಂಜನೇಯರವರು ಪಲ್ಸ್ ಪೋಲಿಯೋ ಲಸಿಕೆ ಕಂಡುಹಿಡಿದ ವಿಜ್ಞಾನಿ ಡಾ. ಜೋನಾಸ್ ಸಾಲ್ಕ್ ರವರ ಜನ್ಮದಿನದ ನೆನಪಿನಲ್ಲಿ ಅಕ್ಟೋಬರ್ 24 ವಿಶ್ವ ಪಲ್ಸ್ ಪೋಲಿಯೋ ದಿನವನ್ನಾಗಿ ಆಚರಿಸಲಾಗುತ್ತದೆ
1955 ರಲ್ಲಿ ಪಲ್ಸ್ ಪೋಲಿಯೋ ಲಸಿಕೆಯನ್ನು ಕಂಡುಹಿಡಿದಿದ್ದಾರೆ. 30 ವರ್ಷಗಳ ಹಿಂದೆ ಭಾರತದಲ್ಲಿ ಪೋಲಿಯೋ ಸಾಮಾನ್ಯ ಖಾಯಿಲೆ ಎಂದು ಪರಿಗಣಿಸಲಾಗಿತ್ತು. 1995 ಭಾರತದಲ್ಲಿ ಪಲ್ಸ್ ಪೋಲಿಯೋ ಲಸಿಕೆ ಪ್ರಾರಂಭಿಸಿ, 27 .03.2014 ರಂದು ವಿಶ್ವ ಆರೋಗ್ಯ ಸಂಸ್ಥೆಯಿಂದ ಭಾರತವು ಪೋಲಿಯೋ ಮುಕ್ತ ರಾಷ್ಟ್ರ ಎಂದು ಘೋಷಿಸಲಾಯಿತು ಈ ಮಹತ್ವದ ಕಾರ್ಯದಲ್ಲಿ ರೋಟರಿ ಇಂಟರ್ ನ್ಯಾಷನಲ್ ಸಂಸ್ಥೆ ಕೇಂದ್ರ ಮತ್ತು ರಾಜ್ಯ ಸರಕಾರದ ಆರೋಗ್ಯ ಇಲಾಖೆಗಳೊಂದಿಗೆ ನಿರ್ಮೂಲನೆ ಯಲ್ಲಿ ಸಾಕಷ್ಟು ಶ್ರಮಿಸಿದೆ ಎಂದು ತಿಳಿಸಿದರು.
ಅಕ್ಟೋಬರ್ 24. ವಿಶ್ವ ಪೋಲಿಯೊ ದಿನವನ್ನು ಆಚರಿಸಲಾಗುತ್ತಿದೆ. ಈಗ ಮತ್ತು ಎಂದೆಂದಿಗೂ ಪೋಲಿಯೊವನ್ನು ಕೊನೆಗೊಳಿಸುವ ಭರವಸೆಯನ್ನು ನೆನಪಿಸಲು. ಹೌದು ರೋಟರಿಯನ್ನರು ನಾವು ಪೋಲಿಯೊ ವಿರುದ್ಧದ ಹೋರಾಟವನ್ನು ಪ್ರಾರಂಭಿಸಿದ್ದೇವೆ ಮತ್ತು ಪೋಲಿಯೊವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವವರೆಗೆ ಮತ್ತು ಪ್ರಪಂಚದ ಮಕ್ಕಳು ಅದರ ಹಾನಿಕಾರಕ ಪರಿಣಾಮಗಳಿಂದ ಮುಕ್ತರಾಗುವವರೆಗೆ ನಾವು ಅದನ್ನು ಮುಗಿಸುತ್ತೇವೆ. ರೋಟರಿ ಇಂಟರ್‌ನ್ಯಾಷನಲ್‌ಗೆ ಹೋಗಿ… ರೋಟರಿಯನ್ಸ್ ಆಫ್ ದಿ ವರ್ಲ್ಡ್ ಹೋಗಿ … ಈಗ ಪೋಲಿಯೊವನ್ನು ಕೊನೆಗೊಳಿಸೋಣ!!! ಹೌದು ನಾವು ಹತ್ತಿರದಲ್ಲಿದ್ದೇವೆ
ರೋಟರಿ 2024 ರ ನಿಯೋಜಿತ ಅಸಿಸ್ಟೆಂಟ್ ಗವರ್ನರ್ ಮಹೇಶ್ ಸಾಗರ್ ರವರು ವಿಶ್ವಸಂಸ್ಥೆ ಪಲ್ಸ್ ಪೋಲಿಯೋ ಜಾಗೃತಿಗಾಗಿ ರೋಟರಿ ಸಂಸ್ಥೆ ವಿಶ್ವ ಆರೋಗ್ಯ ಸಂಸ್ಥೆ ಹಾಗು ಯುನಿಸೆಫ್ ಇನ್ನಿತರ ಸಂಸ್ಥೆಗಳೊಂದಿಗೆ ಪೋಲಿಯೋ ನಿರ್ಮೂಲನೆಯಲ್ಲಿ ಸಾಕಷ್ಟು ಶ್ರಮಿಸಿ ಇಂದು ನಮ್ಮ ರಾಷ್ಟ್ರ ಪೋಲಿಯೋ ಮುಕ್ತವಾಗಿದೆ ಎಂದು ತಿಳಿಸಿದರು. ಅಲ್ಲದೆ ಇನ್ನು ಎರಡು ರಾಷ್ಟ್ರಗಳಾದ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಲ್ಲಿ ಕೆಲವು ಕಾಯಿಲೆಗಳು ಕಂಡು ಬಂದಿದ್ದು ಅವುಗಳ ನಿರ್ಮೂಲನೆಗಾಗಿ ವಿಶ್ವಸಂಸ್ಥೆ ಮತ್ತು ರೋಟರಿ ಶ್ರಮಿಸುತ್ತಿದೆ ಎಂದು ತಿಳಿಸಿದರು
ರೋಟರಿ ಮಾಜಿ ಅಧ್ಯಕ್ಷರಾದ ಜನಾದ್ರಿ ದೊಡ್ಡಯ್ಯ ರವರು ರೋಟರಿ ಎಂದರೆ ಪಲ್ಸ್ ಪೋಲಿಯೋ ಎಂದು ಹೆಸರು ಗಳಿಸಿ ಅದರಲ್ಲೂ ನಮ್ಮ ಗಂಗಾವತಿ ಸಂಸ್ಥೆ ಈ ಹಿಂದೆ ಪಲ್ಸ್ ಪೋಲಿಯೋ ಜಾಗೃತಿಗಾಗಿ ಕನಕಗಿರಿ ಭಾಗದ ಐ ರಿಸ್ಕ್ ಏರಿಯಾ ಇರುವ ಆರು ಹಳ್ಳಿಗಳನ್ನು ದತ್ತು ಪಡೆದು ಪೋಲಿಯೋ ಲಸಿಕೆ ಹಾಕುವಲ್ಲಿ ನಾವು ಯಶಸ್ಸು ಕಂಡಿದ್ದೇವೆ ಎಂದು ತಿಳಿಸಿದರು
ರೋಟರಿ ಮಾಜಿ ಕಾರ್ಯದರ್ಶಿ ಮಂಜುನಾಥ್ ಹೆಚ್ .ಎಂ.ರವರು ಇಂದು ವಿಶ್ವದಲ್ಲಿಯೇ ಪೋಲಿಯೋ ನಿರ್ಮೂಲನೆಗಾಗಿ ರೋಟರಿ ಸಂಸ್ಥೆ ವಿಶ್ವ ಆರೋಗ್ಯ ಸಂಸ್ಥೆಯೊಂದಿಗೆ ಶ್ರಮಿಸಿ ಇಂದು ನಮ್ಮ ಭಾರತ ಪೋಲಿಯೋ ಮುಕ್ತ ರಾಷ್ಟ್ರವಾಗಿದೆ. ಆದರೂ ನಾವು ನಮ್ಮ ಮಕ್ಕಳು ಅಂಗವಿಕಲತೆ ದಿಂದ ದೂರ ಇರಲು ಪಲ್ಸ್ ಪೋಲಿಯೋ ಲಸಿಕೆ ಹಾಕುವಲ್ಲಿ ಮತ್ತು ನಿರ್ಮೂಲನೆ ಹಾಗೂ ಲಸಿಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯ ನಮ್ಮದಾಗಿದೆ ಎಂದು ತಿಳಿಸಿದರು
ಈ ವಿಶ್ವ ಪೋಲಿಯೋ ದಿನಾಚರಣೆ ಕಾರ್ಯಕ್ರಮದಲ್ಲಿ ರೋಟರಿ ಸದಸ್ಯರು ಉಪಸ್ಥಿತರಿದ್ದರು