ಉತ್ತರ ಕರ್ನಾಟಕದಲ್ಲಿ ಒಕ್ಕಲಿಗ ಜಾತಿ ಪ್ರಮಾಣ ಪತ್ರ ಕೊಡದಿದ್ದಕ್ಕೆ ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ರಾಜ್ಯ ಉಪಾಧ್ಯಕ್ಷ ಸಾಗರ್ ಗೌಡ ಆಕ್ರೋಶ

H.Mallikarjun
H.Mallikarjun - Kalyanasiri
2 Min Read
ಜಾಹೀರಾತು
ಜಾಹೀರಾತು
Sagar Gowda, State Vice-President of the Akhila Karnataka Vokkaligara Sangha, expresses outrage over the failure to issue Vokkaliga caste certificates in North Karnataka.

ಉತ್ತರ ಕರ್ನಾಟಕದಲ್ಲಿ ಒಕ್ಕಲಿಗ ಜಾತಿ ಪ್ರಮಾಣ ಪತ್ರ ಕೊಡದಿದ್ದಕ್ಕೆ ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ರಾಜ್ಯ ಉಪಾಧ್ಯಕ್ಷ ಸಾಗರ್ ಗೌಡ ಆಕ್ರೋಶ

ಜಾಹೀರಾತು

ಗಂಗಾವತಿ: ವಡ್ಡರಹಟ್ಟಿಯ ಬೃಂದಾವನ ಕಾಲೋನಿಯಲ್ಲಿ ಹಮ್ಮಿಕೊಂಡಿದ್ದ ನೂತನವಾಗಿ ರಚನೆಗೊಂಡಿರುವ ಕೊಪ್ಪಳ ಜಿಲ್ಲಾ ಒಕ್ಕಲಿಗರ ಸಂಘವನ್ನು ಉದ್ಘಾಟಿಸಿ ಮಾತನಾಡಿದ ಅವರು ಒಕ್ಕಲಿಗ ಒಕ್ಕದಿದ್ದರೆ ಬಿಕ್ಕುವುದು ಜಗವೆಲ್ಲ ಎಂಬ ನಾಣ್ಣುಡಿಯಂತೆ ಜಗತ್ತಿಗೆ ಅನ್ನ ನೀಡುವ ರೈತ ಸಮುದಾಯವನ್ನು ಸರ್ಕಾರ ನಿರ್ಲಕ್ಷ್ಯ ಧೋರಣೆಯನ್ನು ಮಾಡುತ್ತಿದೆ ಈ ಒಕ್ಕಲಿಗ ಸಮುದಾಯದ ಇತಿಹಾಸವನ್ನು ನೋಡಿದರೆ ಶಂಬು ಜೋಶಿ ಅವರು ಬರೆದಿರುವ ಕo ನಾಡಕತೆ ಎಂಬ ಪುಸ್ತಕದಲ್ಲಿ ಕುಡು ಒಕ್ಕಲಿಗರು ರಾಷ್ಟ್ರಕೂಟ ಮನೆತನದವರು ಎಂಬುದಾಗಿ ಹೇಳಿದ್ದಾರೆ ಕನ್ನಡದ ಮೊಟ್ಟ ಮೊದಲ ಉಪಲಬ್ಧ ಗ್ರಂಥ ಕವಿರಾಜ ಮಾರ್ಗದಲ್ಲಿಯೂ ಕುಡು ಒಕ್ಕಲಿಗರ ಬಗ್ಗೆ ಉಲ್ಲೇಖವಿದೆ ಆದರೆ ಉತ್ತರ ಕರ್ನಾಟಕದ 14 ಜಿಲ್ಲೆಯಲ್ಲಿ ಕಂಡು ಬರುವ ಕುಡು ಒಕ್ಕಲಿಗ ಜನಾಂಗಕ್ಕೆ ಜಾತಿ ಪ್ರಮಾಣ ಪತ್ರ ಕೊಡದಿದ್ದಕ್ಕೆ ತೀವ್ರ ಬೇಸರ ವ್ಯಕ್ತಪಡಿಸಿ ಪ್ರಮಾಣ ಪತ್ರವನ್ನು ನೀಡದಿದ್ದರೆ ಮುಂದಿನ ದಿನಮಾನದಲ್ಲಿ ಉತ್ತರ ಕರ್ನಾಟಕದ 14 ಜಿಲ್ಲೆಯ ಪ್ರತಿ ಜಿಲ್ಲೆಯಲ್ಲಿ ಹೋರಾಟವನ್ನು ಮಾಡಲಾಗುವುದು ಎಂದು ಈ ಸಭೆಯ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಕಲ್ಬುರ್ಗಿ ಕುಡು ಒಕ್ಕಲಿಗ ಸೇವಾ ಅಭಿವೃದ್ಧಿ ಸಂಘದ ಕಾರ್ಯಾಧ್ಯಕ್ಷೆ ಮಾಣಿಕ್ಯ ಚಿಲ್ಲೂರು ಮಾತನಾಡಿ ಉತ್ತರ ಕರ್ನಾಟಕದಲ್ಲಿ ನೆಲೆಸಿರುವ ಕುಡು ಒಕ್ಕಲಿಗರ ಬಗ್ಗೆ ಚಿನ್ನಪ್ಪ ರೆಡ್ಡಿ, ವೆಂಕಟಸ್ವಾಮಿ, ಎನ್ ಶಂಕ್ರಪ್ಪನವರ ಆಯೋಗ ಕುಡು ಒಕ್ಕಲಿಗ ಜನಾಂಗ ಒಕ್ಕಲಿಗರ ಒಳಪಂಗಡವೆಂದು ಸರ್ಕಾರಕ್ಕೆ ವರದಿ ಸಲ್ಲಿಸಿದರು ಕೂಡ ಅದನ್ನು ಜಾತಿ ಪಟ್ಟಿಯಲ್ಲಿ ಸೇರಿಸದೆ ಹೊರಗಿಟ್ಟಿರುವುದು ವಿಷಾದನೀಯವೆಂದರು.

ಅದೇ ರೀತಿ ಜಿಲ್ಲಾ ಒಕ್ಕಲಿಗರ ಸಂಘದ ನೂತನ ಅಧ್ಯಕ್ಷರಾಗಿ ಬಸವರಾಜ ಮಾಲಿ ಪಾಟೀಲ್ ಇವರನ್ನು ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು ರಾಜ್ಯ ಒಕ್ಕಲಿಗರ ಸಂಘಕ್ಕೆ ಉತ್ತರ ಕರ್ನಾಟಕದಿಂದ 800 ಜನರ ಸದಸ್ಯತ್ವವನ್ನು ಮಾಡಲಾಗಿದ್ದು, ಮುಂದಿನ ದಿನದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸದಸ್ಯತ್ವ ಮಾಡಿಸಲಾಗುವುದೆಂದರು. ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ರಾಜ್ಯ ಉಪಾಧ್ಯಕ್ಷ ಸಂಕೇತ್ ಗೌಡ, ಧಾರವಾಡ ಜಿಲ್ಲೆಯ ಜಿಲ್ಲಾಧ್ಯಕ್ಷರಾದ ಹನುಮಂತಪ್ಪ ನೇಗಿನಾಳ, ಕುಂದಗೋಳ ತಾಲೂಕು ಒಕ್ಕಲಿಗರ ಸಂಘದ ಹನುಮಂತಣ್ಣ ಗೋಜನೂರ್ ಇತರರು ಉಪಸ್ಥಿತರಿದ್ದರು.

*ಜಿಲ್ಲಾ ಒಕ್ಕಲಿಗರ ಸಂಘ ಕೊಪ್ಪಳದ ನೂತನ ಪದಾಧಿಕಾರಿಗಳು*

ಗೌರವಾಧ್ಯಕ್ಷರಾಗಿ ಬಾನಾಪುರದ ಮದಲಗಟ್ಟೆಪ್ಪ ಕವಲೂರ, ಅಧ್ಯಕ್ಷರಾಗಿ ಬಸವರಾಜ ಮಾಲಿ ಪಾಟೀಲ್, ಪ್ರಧಾನ ಕಾರ್ಯದರ್ಶಿಯಾಗಿ ಶಿವರಾಜ ಕರಡಿ, ಕಾರ್ಯಾಧ್ಯಕ್ಷರಾಗಿ ಯಲ್ಲಪ್ಪ ಹುಲಗೂರು, ಜಯಶ್ರೀ ಕಾಳೇಶ್ ಹೋರಿ, ಖಜಾoಚಿ ಮಲ್ಲಿಕಾರ್ಜುನ ಹೆಚ್. ಉಪಾಧ್ಯಕ್ಷರಾಗಿ ವಿ. ಮಹೇಶ, ಶರಣಪ್ಪ ಒಕ್ಕಲಿಗರ, ಮಲ್ಲಪ್ಪ ಲಕ್ಷ್ಮೇಶ್ವರ, ನಾಗರಾಜ ಲಕ್ಷ್ಮೇಶ್ವರ, ಸಂಘಟನಾ ಕಾರ್ಯದರ್ಶಿಯಾಗಿ ಸರ್ವಮoಗಳ ಸೇರಿದಂತೆ ಒಟ್ಟು 10 ಜನರು ನಿರ್ದೇಶಕರಾಗಿ ನೇಮಕಗೊಂಡಿದ್ದಾರೆ.

Total Views: 0
Share This Article
Leave a Comment