
Children's Day Celebration: State Award-Winning Principals and Teachers Honored

ಮಕ್ಕಳ ದಿನಾಚರಣೆ ಆಚರಣೆ: ರಾಜ್ಯ ಪ್ರಶಸ್ತಿ ಪುರಸ್ಕೃತ ಪ್ರಾಂಶುಪಾಲರು, ಶಿಕ್ಷಕರಿಗೆ ಸನ್ಮಾನ
ಹಿರೇಬೆಣಕಲ್ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸಂಭ್ರಮದ ಮಕ್ಕಳ ದಿನಾಚರಣೆ
ಗಂಗಾವತಿ, ನ.20: ಅಲ್ಪಸಂಖ್ಯಾತರ ಮುರಾರ್ಜಿ ದೇಸಾಯಿ ವಸತಿ ಶಾಲೆ ಹಿರೇಬೆಣಕಲ್-2ರಲ್ಲಿ ಮಕ್ಕಳ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಇದೇ ಸಂದರ್ಭದಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತ ಪ್ರಾಂಶುಪಾಲರು ಹಾಗೂ ಶಿಕ್ಷಕರಿಗೆ ಸನ್ಮಾನ ಸಮಾರಂಭವನ್ನು ಏರ್ಪಡಿಸಲಾಗಿತ್ತು.
ಅತ್ಯುತ್ತಮ ರಾಜ್ಯಮಟ್ಟದ ಪ್ರಾಂಶುಪಾಲ ಪ್ರಶಸ್ತಿ ಪುರಸ್ಕೃತ ರಾಮಲಿಂಗಪ್ಪ ಜಿ.ಎಂ., ಅತ್ಯುತ್ತಮ ಆಂಗ್ಲ ಭಾಷಾ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಯಮನೂರಪ್ಪ ಹಾಗೂ ಅತ್ಯುತ್ತಮ ಗಣಿತ ಶಿಕ್ಷಕ ಪ್ರಶಸ್ತಿ ಪುರಸ್ಕೃತ ದಾದಾ ಕಲಂದರ್ ಅವರನ್ನು ಶಾಲೆಯ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಗೌರವಿಸಿ ಸನ್ಮಾನಿಸಿದರು.
ಶಿಕ್ಷಕರ ಸಾಧನೆಗೆ ಗೌರವ ಸಲ್ಲಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಸಾಧನೆಯ ಹಂಬಲ, ಶಿಕ್ಷಣದ ಮಹತ್ವ ಹಾಗೂ ಶಿಕ್ಷಕರ ಮೇಲಿನ ಗೌರವವನ್ನು ಬೆಳೆಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಪ್ರಶಸ್ತಿ ಪುರಸ್ಕೃತ ಶಿಕ್ಷಕರ ಸಾಧನೆ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದ್ದು, ಶಾಲೆಯ ಹೆಮ್ಮೆಯ ಕ್ಷಣವಾಗಿದೆ.
ಕಾರ್ಯಕ್ರಮವನ್ನು ಲಾಳೇ ಮಶಾಕ್ ಹಾಗೂ ಹನಿಫ್ ನಿರೂಪಿಸಿದರು. ನಸ್ರೀನ್ ವಂದಿಸಿದರು.
ಈ ಸಂದರ್ಭದಲ್ಲಿ ಶಾಲಾ ಸಿಬ್ಬಂದಿಯವರಾದ ಮಹಿಬೂಬ್ ಸಾಬ್ ಮೂಲಿಮನಿ, ಲಕ್ಷ್ಮೀದೇವಿ, ಸಾವಿತ್ರಿ ಜಿಡಿ, ಉಷಾ, ಡಾ. ಎಸ್.ವಿ. ಗೋವಿಂದಮ್ಮ, ಯಂಕಮ್ಮ, ಅಂಜನೇಯ, ಜ್ಯೋತಿ, ಕಲ್ಪನಾ ಹಾಗೂ ನಿಲಯಪಾಲಕ ದಶವಂತಪ್ಪ ಸೇರಿದಂತೆ ಶಾಲಾ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


