Breaking News

ಬೆಂಗಳೂರಿನ ಕೋರಮಂಗಲದ 100 ಅಡಿ ರಸ್ತೆಯಲ್ಲಿನ ನವೀಕರಿಸಿದ ಕಲ್ಯಾಣ್ ಜ್ಯುವೆಲರ್ಸ್ ಷೋರೂಂ ಉದ್ಘಾಟಿಸಿದ ಬಾಲಿವುಡ್ ತಾರೆ ಸೋನಾಕ್ಷಿ ಸಿನ್ಹಾ

Bollywood star Sonakshi Sinha inaugurated the revamped Kalyan Jewelers showroom at 100 Feet Road, Koramangala, Bengaluru.

ಜಾಹೀರಾತು

  • ವಿಶ್ವ ದರ್ಜೆಯ ವಾತಾವರಣದಲ್ಲಿ ಗ್ರಾಹಕರಿಗೆ ಐಷಾರಾಮಿ ಖರೀದಿ ಅನುಭವ ನೀಡಲಿರುವ ಹೊಸ ಷೋರೂಂ ಉದ್ಘಾಟನೆಯ ಸಂಭ್ರಮಾಚರಣೆಗೆ ಭಾರಿ ರಿಯಾಯ್ತಿಗಳ ಘೋಷಣೆ

ಬೆಂಗಳೂರು, 7 ಅಕ್ಟೋಬರ್ 2023: ಭಾರತದ ಅತ್ಯಂತ ವಿಶ್ವಾಸಾರ್ಹ ಮತ್ತು ಪ್ರಮುಖ ಆಭರಣ ಕಂಪನಿಗಳಲ್ಲಿ ಒಂದಾಗಿರುವ ಕಲ್ಯಾಣ್ ಜ್ಯುವೆಲ್ಲರ್ಸ್, ಇಂದು ಕೋರಮಂಗಲದ 100 ಅಡಿ ರಸ್ತೆಯಲ್ಲಿನ ತನ್ನ ಮರುವಿನ್ಯಾಸಗೊಳಿಸಿದ ಷೋರೂಂ ಪ್ರಾರಂಭಿಸಿದೆ. ಬಾಲಿವುಡ್ ತಾರೆ ಸೋನಾಕ್ಷಿ ಸಿನ್ಹಾ ಅವರು ಈ ಷೋರೂಂ ಉದ್ಘಾಟಿಸಿದರು. ಕಲ್ಯಾಣ್ ಜ್ಯುವೆಲರ್ಸ್ನ ವಿವಿಧ ಸಂಗ್ರಹಗಳ ವ್ಯಾಪಕ ಶ್ರೇಣಿಯ ಆಭರಣಗಳ ವಿನ್ಯಾಸಗಳನ್ನು ಈ ಷೋರೂಂ ಒಳಗೊಂಡಿದೆ. ಈ ಷೋರೂಂನಲ್ಲಿ ಗ್ರಾಹಕರು ವಿಶ್ವ ದರ್ಜೆಯ ವಾತಾವರಣದೊಂದಿಗೆ ಅತ್ಯಾಧುನಿಕ ಸೌಲಭ್ಯಗಳನ್ನು ನಿರೀಕ್ಷಿಸಬಹುದು. ಇದು ಗ್ರಾಹಕರಿಗೆ ಸರಿಸಾಟಿಯಿಲ್ಲದ ಖರೀದಿ ಅನುಭವವನ್ನು ನೀಡುತ್ತದೆ.

ಈ ಸಂದರ್ಭದಲ್ಲಿ, ಬಾಲಿವುಡ್ ತಾರೆ ಸೋನಾಕ್ಷಿ ಸಿನ್ಹಾ ಅವರು ಮಾತನಾಡಿ, ‘ಈ ಅದ್ಧೂರಿ ಸಂಭ್ರಮಾಚರಣೆಯ ಭಾಗವಾಗಿರುವುದಕ್ಕೆ ನನಗೆ ಸಂತೋಷವಾಗುತ್ತದೆ. ಗ್ರಾಹಕರಿಗೆ ಸರಿಸಾಟಿಯಿಲ್ಲದ ಚಿನ್ನಾಭರಣಗಳ ಖರೀದಿ ಅನುಭವವನ್ನು ನೀಡಲು ಬ್ರ್ಯಾಂಡ್ನ ಅಚಲ ಬದ್ಧತೆಗೆ ಈ ಭವ್ಯ ಷೋರೂಂ ಸಾಕ್ಷಿಯಾಗಿದೆ. ನಂಬಿಕೆ, ಪಾರದರ್ಶಕತೆ ಮತ್ತು ಗ್ರಾಹಕರ ತೃಪ್ತಿಯನ್ನು ಪ್ರತಿನಿಧಿಸುವ ಕಲ್ಯಾಣ್ ಜುವೆಲ್ಲರ್ಸ್ ಬ್ರ್ಯಾಂಡ್ ಪ್ರತಿನಿಧಿಸಲು ಇದು ನನಗೆ ಅಪಾರವಾದ ಹೆಮ್ಮೆಯನ್ನು ನೀಡುತ್ತದೆ. ಈ ನವೀಕರಿಸಿದ ಷೋರೂಂನಲ್ಲಿ ಗ್ರಾಹಕರು ಖರೀದಿ ಅನುಭವವನ್ನು ಆನಂದಿಸುವ ಬಗ್ಗೆ ನನಗೆ ದೃಢ ನಂಬಿಕೆ ಇದೆ’ ಎಂದು ಹೇಳಿದ್ದಾರೆ.

ಹೊಸ ಷೋರೂಂ ಕುರಿತು ಮಾತನಾಡಿದ ಕಲ್ಯಾಣ್ ಜ್ಯುವೆಲರ್ಸ್ನ ಕಾರ್ಯನಿರ್ವಾಹಕ ನಿರ್ದೇಶಕ ರಮೇಶ್ ಕಲ್ಯಾಣರಾಮನ್ ಅವರು, ‘ಒಂದು ಕಂಪನಿಯಾಗಿ ನಾವು ದೊಡ್ಡ ಮೈಲಿಗಲ್ಲುಗಳನ್ನು ಸಾಧಿಸಿದ್ದೇವೆ. ಗ್ರಾಹಕರ ಖರೀದಿ ಅನುಭವವನ್ನು ಹೆಚ್ಚಿಸಲು ಸಮಗ್ರ ಪರಿಸರ ವ್ಯವಸ್ಥೆಯನ್ನು ರೂಪಿಸುವ ನಿಟ್ಟಿನಲ್ಲಿ ನಾವು ದೃಢ ನಿರ್ಧಾರ ತೆಗೆದುಕೊಂಡಿದ್ದೇವೆ. ಕಲ್ಯಾಣ್ ಜ್ಯುವೆಲರ್ಸ್ನಲ್ಲಿ, ಗ್ರಾಹಕರಿಗೆ ಉತ್ತಮ ಗುಣಮಟ್ಟದ ಮತ್ತು ಪರಿಣತ ಅನುಭವವನ್ನು ಸುಧಾರಿಸಲು ಮತ್ತು ಒದಗಿಸಲು ನಾವು ನಿರಂತರವಾಗಿ ಕೆಲಸ ಮಾಡುತ್ತಿದ್ದೇವೆ . ಕಂಪನಿಯ ಪ್ರಮುಖ ಮೌಲ್ಯಗಳಾದ ನಂಬಿಕೆ ಮತ್ತು ಪಾರದರ್ಶಕತೆಗೆ ನಾವು ಬದ್ಧವಾಗಿರುವುದರಿಂದ ವರ್ಷಗಳಿಂದ ನಿರಂತರವಾಗಿ ನೀಡುತ್ತಿರುವ ಬೆಂಬಲ ಮತ್ತು ಪ್ರೀತಿಗಾಗಿ ನಾವು ನಮ್ಮ ಗ್ರಾಹಕರಿಗೆ ಕೃತಜ್ಞತೆ ಸಲ್ಲಿಸಲು ನಾವು ಬಯಸುತ್ತೇವೆ’ ಎಂದು ಹೇಳಿದ್ದಾರೆ.

ಹೊಸ ನವೀಕರಿಸಿದ ಷೋರೂಂ ಆರಂಭಿಸಿರುವುದರ ಸಂಭ್ರಮಾಚರಣೆ ಭಾಗವಾಗಿ ಕಲ್ಯಾಣ್ ಜ್ಯುವೆಲರ್ಸ್, ಕನಿಷ್ಠ ₹ 1 ಲಕ್ಷ ಮೊತ್ತದ ಖರೀದಿಗೆ ವಿಶೇಷ ದೀಪಾವಳಿ ಕೊಡುಗೆಯನ್ನು ಘೋಷಿಸಿದೆ. ಗ್ರಾಹಕರು ಚಿನ್ನಾಭರಣಗಳ ಖರೀದಿಗೆ ಮಾಡುವ ಪ್ರತಿ ₹ 50,000 ವೆಚ್ಚಕ್ಕೆ 1 ಗ್ರಾಂ ಚಿನ್ನದ ನಾಣ್ಯವನ್ನು ಪೂರಕವಾಗಿ ಸ್ವೀಕರಿಸುತ್ತಾರೆ.

ಕಲ್ಯಾಣ್ ಜ್ಯುವೆಲರ್ಸ್ನಲ್ಲಿ ಚಿಲ್ಲರೆಯಾಗಿ ಮಾರಾಟವಾಗುವ ಎಲ್ಲಾ ಆಭರಣಗಳು ಬಿಐಎಸ್ ಹಾಲ್ಮಾರ್ಕ್ ಆಗಿರಲಿದ್ದು, ಬಹು ಹಂತದ ಶುದ್ಧತೆ ಪರೀಕ್ಷೆಗಳ ಮೂಲಕ ಹೋಗುತ್ತವೆ. ಗ್ರಾಹಕರು ಕಲ್ಯಾಣ್ ಜ್ಯುವೆಲರ್ಸ್ನ 4-ಹಂತದ ಭರವಸೆ ಪ್ರಮಾಣಪತ್ರವನ್ನು (4-Level Assurance Certificate) ಸಹ ಪಡೆಯುತ್ತಾರೆ, ಇದು ಶುದ್ಧತೆ, ಆಭರಣಗಳ ಉಚಿತ ಜೀವಿತಾವಧಿ ನಿರ್ವಹಣೆ, ವಿವರವಾದ ಉತ್ಪನ್ನ ಮಾಹಿತಿ, ಪಾರದರ್ಶಕ ವಿನಿಮಯ ಮತ್ತು ಮರುಖರೀದಿ ನೀತಿಗಳನ್ನು ಖಾತರಿಪಡಿಸುತ್ತದೆ. ಪ್ರಮಾಣಪತ್ರ ನೀಡುವುದು ತನ್ನ ನಿಷ್ಠಾವಂತ ಗ್ರಾಹಕರಿಗೆ ಅತ್ಯುತ್ತಮವಾದದ್ದನ್ನು ನೀಡುವ ಬ್ರ್ಯಾಂಡ್ನ ಬದ್ಧತೆಯ ಭಾಗವಾಗಿದೆ.

ಕಲ್ಯಾಣ್ ಜ್ಯುವೆಲರ್ಸ್ನ ಸಂಪೂರ್ಣ ಹೊಸದಾದ ಈ ಷೋರೂಂನಲ್ಲಿ ಭಾರತದಾದ್ಯಂತ ಕುಶಲಕರ್ಮಿಗಳು ಕೌಶಲದಿಂದ ತಯಾರಿಸಿರುವ ವಧುವಿನ ಆಭರಣಗಳಾದ ಮುಹೂರ್ತ ಇರಲಿದೆ. ಇದು ಕಲ್ಯಾಣ್ನ ಜನಪ್ರಿಯ ಮನೆ ಬ್ರ್ಯಾಂಡ್ಗಳಾದ ತೇಜಸ್ವಿ (ಪೋಲ್ಕಿ ಆಭರಣಗಳು), ಮುಧ್ರಾ (ಕರಕುಶಲ ಪುರಾತನ ಆಭರಣಗಳು), ನಿಮಾಹ್ (ಟೆಂಪಲ್ ಜ್ಯುವೆಲ್ಲರಿ), ಗ್ಲೋ (ಡ್ಯಾನ್ಸಿಂಗ್ ಡೈಮಂಡ್ಸ್), ಜಿಯಾ (ಒಂಟಿಹರಳಿನ ತರಹದ ವಜ್ರದ ಆಭರಣ), ಅನೋಖಿ (ಕತ್ತರಿಸದ ವಜ್ರ) ಅಪೂರ್ವ (ವಿಶೇಷ ಸಂದರ್ಭಗಳಲ್ಲಿ ಬಳಸುವ ವಜ್ರಾಭರಣಗಳು), ಅಂತರಾ (ಮದುವೆ ವಜ್ರಾಭರಣಗಳು), ಹೇರಾ (ನಿತ್ಯ ಧರಿಸುವ ವಜ್ರಾಭರಣ), ರಂಗ್ (ಅಮೂಲ್ಯ ಹರಳುಗಳ ಆಭರಣಗಳು) ಮತ್ತು ಇತ್ತೀಚೆಗೆ ಪರಿಚಯಿಸಿರುವ ಲೀಲಾ (ಬಣ್ಣದ ಹರಳುಗಳು ಮತ್ತು ವಜ್ರದ ಆಭರಣಗಳು) ಒಳಗೊಂಡ ವಿಶೇಷ ವಿಭಾಗಗಳನ್ನು ಸಹ ಹೊಂದಿದೆ.

About Mallikarjun

Check Also

ಕುಷ್ಟಗಿ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟ: ನೋಂದಣಿಗೆ ಸೂಚನೆ

Kushtagi Taluk Level Dasara Games: Notice for registration ಕೊಪ್ಪಳ ಆಗಸ್ಟ್ 29 (ಕರ್ನಾಟಕ ವಾರ್ತೆ): 2025-26ನೇ ಸಾಲಿನ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.