
ಒನಕೆ ಓಬವ್ವ ಜಯಂತಿ ಆಚರಣೆಯಲ್ಲೂ ಸರ್ಕಾರಿ ಕಚೇರಿಯ ನಿರ್ಲಕ್ಷ್ಯ!

Negligence by a government office even during the celebration of Onake Obavva Jayanti!
ಮಧ್ಯಾಹ್ನದವರೆಗೂ ಕಾರ್ಯಕ್ರಮ ನಡೆಸದ ಸಿಬ್ಬಂದಿ ವಿರುದ್ಧ ಡಿಎಸ್ಎಸ್ ಮುಖಂಡರ ಆಕ್ರ
ಕೊಪ್ಪಳ: ವೀರ ವನಿತೆ ಒನಕೆ ಓಬವ್ವ ಅವರ ಜಯಂತಿ ಆಚರಣೆಯಲ್ಲಿ ನಿರ್ಲಕ್ಷ್ಯ ತೋರಿದ ಜಿಲ್ಲಾ ಕೈಗಾರಿಕಾ ಕೇಂದ್ರ ಕಚೇರಿಯ ಸಿಬ್ಬಂದಿ ವಿರುದ್ಧ ಡಿಎಸ್ಎಸ್ ಮುಖಂಡರಾದ ಹುಲುಗಪ್ಪ ಮಾಗಿ ಹಾಗೂ ಮಲ್ಲೇಶ್ ನಾಯಕ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಗರದಲ್ಲಿ ನಡೆದಿದೆ.

ನಗರದ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಜಂಟಿ ನಿರ್ದೇಶಕರ ಕಚೇರಿ ವ್ಯಾಪ್ತಿಯ ಜಿಲ್ಲಾ ಕೈಗಾರಿಕಾ ಕೇಂದ್ರಕ್ಕೆ ಮಲ್ಲೇಶ್ ನಾಯಕ್ ಅವರು ಭೇಟಿ ನೀಡಿದ ಸಂದರ್ಭದಲ್ಲಿ ಮಧ್ಯಾಹ್ನದವರೆಗೂ ಒನಕೆ ಓಬವ್ವ ಜಯಂತಿ ಆಚರಣೆಗೆ ಯಾವುದೇ ಸಿದ್ಧತೆ ನಡೆಸದೆ ಸಿಬ್ಬಂದಿ ತಮ್ಮ ದೈನಂದಿನ ಕೆಲಸಗಳಲ್ಲಿ ತೊಡಗಿರುವುದನ್ನು ಗಮನಿಸಿದ್ದಾರೆ.

ಇದರಿಂದ ಅಸಮಾಧಾನಗೊಂಡ ಅವರು, ಇತಿಹಾಸದಲ್ಲಿ ಧೈರ್ಯ, ಶೌರ್ಯ ಮತ್ತು ಸಾಹಸದ ಮೂಲಕ ಅಜರಾಮರರಾದ ವೀರ ಮಹಿಳೆ ಒನಕೆ ಓಬವ್ವ ಅವರ ಜಯಂತಿ ಆಚರಣೆಯಲ್ಲೇ ಸರ್ಕಾರಿ ಕಚೇರಿ ನಿರ್ಲಕ್ಷ್ಯ ತೋರುತ್ತಿರುವುದೇಕೆ ಎಂದು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.
ತರಾಟೆಯ ಬಳಿಕ ಎಚ್ಚೆತ್ತ ಸಿಬ್ಬಂದಿ:
ಡಿಎಸ್ಎಸ್ ಮುಖಂಡರಾದ ಹುಲುಗಪ್ಪ ಮಾಗಿ ಹಾಗೂ ಮಲ್ಲೇಶ್ ನಾಯಕ್ ಅವರ ಆಕ್ಷೇಪದ ಬಳಿಕ ಎಚ್ಚೆತ್ತ ಕಚೇರಿ ಸಿಬ್ಬಂದಿ ಮಧ್ಯಾಹ್ನ 12 ಗಂಟೆಗೆ ಜಯಂತಿ ಆಚರಣೆಗೆ ಮುಂದಾದರು. ಈ ಸಂದರ್ಭದಲ್ಲಿ ಹುಲುಗಪ್ಪ ಮಾಗಿ ಹಾಗೂ ಮಲ್ಲೇಶ್ ನಾಯಕ್ ಅವರ ಸಮ್ಮುಖದಲ್ಲಿ ಒನಕೆ ಓಬವ್ವ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವ ಸಮರ್ಪಿಸಲಾಯಿತು.
ಕಾರ್ಯಕ್ರಮದಲ್ಲಿ ಅಧಿಕಾರಿ ಪ್ರಮೀಳಾ ಬಾಯಿ, ವಿಶ್ವನಾಥ್ ಎಂ.ಡಿ. (ಎಫ್.ಡಿ.), ಕಮಲರಾಜ್, ಹನುಮಪ್ಪ ಸೇರಿದಂತೆ ಕಚೇರಿಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಗೌರವ ಸಲ್ಲಿಸುವುದೂ ಸರ್ಕಾರಿ ಕಚೇರಿಗಳ ಜವಾಬ್ದಾರಿ:
ನಾಡಿನ ಇತಿಹಾಸದಲ್ಲಿ ಧೈರ್ಯ, ಶೌರ್ಯ ಮತ್ತು ಸಾಹಸದ ಪ್ರತೀಕವಾಗಿ ಗುರುತಿಸಿಕೊಂಡಿರುವ ಒನಕೆ ಓಬವ್ವ ಅವರ ಜಯಂತಿಯನ್ನು ಸಕಾಲದಲ್ಲಿ ಆಚರಿಸುವುದು ಕೇವಲ ಔಪಚಾರಿಕ ಕಾರ್ಯಕ್ರಮವಲ್ಲ; ಅದು ನಮ್ಮ ನಾಡಿನ ಇತಿಹಾಸ ಮತ್ತು ವೀರ ಮಹಿಳೆಯರ ಕೊಡುಗೆಗೆ ಸಲ್ಲಿಸುವ ಗೌರವವಾಗಿದೆ. ಇಂತಹ ಮಹತ್ವದ ಜಯಂತಿ ಆಚರಣೆಯಲ್ಲೇ ಸರ್ಕಾರಿ ಕಚೇರಿಯಲ್ಲಿ ನಿರ್ಲಕ್ಷ್ಯ ಕಂಡುಬಂದಿರುವುದು ಸಾರ್ವಜನಿಕ ವಲಯದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.
ನಾಡಿನ ಮಹನೀಯರು ಹಾಗೂ ವೀರ ವನಿತೆಯರ ಜಯಂತಿಗಳನ್ನು ಸರ್ಕಾರಿ ಕಚೇರಿಗಳಲ್ಲಿ ಕೇವಲ ಒತ್ತಾಯ ಬಂದಾಗ ಆಚರಿಸುವ ಬದಲು, ನಿಗದಿತ ಸಮಯದಲ್ಲಿ ಗೌರವಪೂರ್ವಕವಾಗಿ ಆಚರಿಸುವ ಜವಾಬ್ದಾರಿಯನ್ನು ಅಧಿಕಾರಿಗಳು ಮತ್ತು ಸಿಬ್ಬಂದಿ ಅರಿತುಕೊಳ್ಳಬೇಕಿದೆ.ಎಂದು ಪ್ರಕಣೆ ಮೂಲಕ ತಿಳಿಸಿದ್ದಾರೆ.



