
13th Death Anniversary of Huchappa Dombara: Free Health Check-up Camp

ಹುಚ್ಚಪ್ಪ ಡೊಂಬರ ಅವರ 13ನೇ ಪುಣ್ಯಸ್ಮರಣೆ: ಉಚಿತ ಆರೋಗ್ಯ ತಪಾಸಣಾ ಶಿಬಿರ

ಗ್ರಾಮೀಣ ಬಡಜನರಿಗೆ ಆರೋಗ್ಯ ಸೇವೆ ಒದಗಿಸುವ ಉದ್ದೇಶ: ನೂರಾರು ಜನರಿಂದ ಆರೋಗ್ಯ ತಪಾಸಣೆ
ಗಂಗಾವತಿ: ತಾಲೂಕಿನ ವಡ್ಡರಹಟ್ಟಿ ಸಮೀಪದ ಸಂಗಮೇಶ್ವರ ಕ್ಯಾಂಪ್ನಲ್ಲಿ ಪ್ರಗತಿಪರ ರೈತ ದಿವಂಗತ ಹುಚ್ಚಪ್ಪ ಡೊಂಬರ ಅವರ 13ನೇ ಪುಣ್ಯಸ್ಮರಣೆ ಅಂಗವಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು.
ದಿವಂಗತ ಹುಚ್ಚಪ್ಪ ಡೊಂಬರ ಅವರ ಮೊಮ್ಮಗ ಹಾಗೂ ಹೈದರಾಬಾದ್ನ ವೈದ್ಯರಾದ ಡಾ. ಗೋವರ್ಧನ ಗಿರಿ ಅವರ ನೇತೃತ್ವದಲ್ಲಿ ಸ್ಥಳೀಯ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಈ ಶಿಬಿರ ನಡೆಯಿತು.
ಶಿಬಿರದಲ್ಲಿ ವಡ್ಡರಹಟ್ಟಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ನೂರಾರು ಜನರು ಭಾಗವಹಿಸಿ ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ಗ್ರಾಮೀಣ ಪ್ರದೇಶದ ಬಡ ಮತ್ತು ಅಗತ್ಯವಿರುವ ಜನರಿಗೆ ಉಚಿತ ಆರೋಗ್ಯ ಸೇವೆ ಒದಗಿಸುವ ಸದುದ್ದೇಶದಿಂದ ಈ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಡಾ. ಅಶೋಕ ಡೊಂಬರ ತಿಳಿಸಿದರು.
ಈ ಸಂದರ್ಭದಲ್ಲಿ ಡಾ. ಗೋವರ್ಧನ ಗಿರಿ ಅವರ ಸಹೋದರರು ಹಾಗೂ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.



