Breaking News

ಗಾಂಧಿಜಿ ಮತ್ತು ಲಾಲ್ ಬಹದ್ದೂರ್ಶಾಸ್ತ್ರಿಯವರ ಸೇವೆ ಎಂದೆಂದಿಗೂ ಮರೆಯಲಾಗದು:ಸಂಗಮೇಶ ಎನ್ ಜವಾದಿ.

Gandhiji and Lal Bahadur Shastri’s service will never be forgotten : Sangamesh N Jawadi.

ಜಾಹೀರಾತು

ಚಿಟಗುಪ್ಪ: ಗಾಂಧಿಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯವರು ಈ ದೇಶಕ್ಕೆ ನೀಡಿದ ಅಮೂಲ್ಯ ನಿಸ್ವಾರ್ಥ ಸೇವೆಯನ್ನು ಎಂದೆಂದಿಗೂ ಮರೆಯಲಾಗದು ಎಂದು ಸಂಘದ ನಿರ್ದೇಶಕ ಸಂಗಮೇಶ ಎನ್ ಜವಾದಿ ನುಡಿದರು.
ನಗರದ ಪ್ರಾಥಮಿಕ ಗ್ರಾಹಕರ ಸಹಕಾರ ಸಂಘ ನಿಯಮಿತ ಚಿಟಗುಪ್ಪ ಕಛೇರಿಯಲ್ಲಿ ಆಯೋಜಿಸಿದ್ದ
ಗಾಂಧಿಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯವರ ಜನ್ಮದಿನ ಆಚರಿಸಿ ಮಾತನಾಡಿದ ಅವರು ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯವರು ತ್ಯಾಗ, ಬಲಿದಾನ ಮಾಡಿದ ಕಾರಣದಿಂದಲೇ ದೇಶಕ್ಕೆ ಸ್ವಾತಂತ್ರ್ಯ ಲಭಿಸಿದೆ. ಸ್ವಾರ್ಥ ರಾಜಕಾರಣವನ್ನು ಬದಿಗೊತ್ತಿ, ದೇಶದ
ಸರ್ವಾಂಗೀಣ,ಸರ್ವತೋಮುಖ ಬೆಳವಣಿಗೆಗೆ ಎಲ್ಲರೂ ಕಟ್ಟಿಬದ್ದರಾಗಿ ಶ್ರಮಿಸಬೇಕು. ಇವರ ಹಾದಿಯಲ್ಲಿ ನಾವೆಲ್ಲರೂ ಸಾಗಬೇಕಾಗಿದೆ.ಅಂದಗಾಲೇ ಮಾತ್ರ ದೇಶ ಅಭಿವೃದ್ಧಿ ಹೊಂದಲು ಸಾಧ್ಯವಿದೆ ಎಂದರು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ, ಸಂಘದ ಅಧ್ಯಕ್ಷ ಮೋಹನ್ ಗೌಳಿ ಗಾಂಧೀಜಿ ಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ನಿರ್ದೇಶಕರಾದ ವೀರಪ್ಪಾ ಜೇಟ್ಲಾ, ರೇವಣ್ಣಸಿದ್ದಪ್ಪ ಮಠಪತಿ, ಮಲ್ಲಪ್ಪಾ ಗಡಮಿ, ರವಿ ಶೀರಮುಂಡಿ,ಬಸಯ್ಯ ಅಂಬಲಗಿ, ಕಾರ್ಯದರ್ಶಿ ತಿಪ್ಪಣ್ಣ ಶರ್ಮಾ, ಸಹಾಯಕ ಚನ್ನಪ್ಪ ಅಂಬಲಗಿ, ಭಗವಾನ ಡಾಂಗೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

About Mallikarjun

Check Also

screenshot 2025 08 16 20 19 21 97 e307a3f9df9f380ebaf106e1dc980bb6.jpg

ಮೈನಹಳ್ಳಿ ಸರ್ಕಾರಿ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ ದಿನಾಚರಣೆ ಅಂಗವಾಗಿ ಪಠ್ಯ ಪುಸ್ತಕ ವಿತರಣೆ 

Textbook distribution at Mainahalli Government School as part of Independence Day celebrations      ಕೊಪ್ಪಳ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.