ಸಿ.ವಿ. ರಾಮನ್ ಬಡಾವಣೆ ವಿರುದ್ಧ ನಮ್ಮನೆ ಪ್ರಶಾಂತ್ ಅಪಪ್ರಚಾರ: ನಿರ್ಮಾಣಕಾರ ರಾಮನ್ ಆರೋಪ

H.Mallikarjun
H.Mallikarjun - Kalyanasiri
2 Min Read
ಜಾಹೀರಾತು

C.V. Nammane Prashant defamation against Raman barangay: producer Raman accused

ಸಿ.ವಿ. ರಾಮನ್ ಬಡಾವಣೆ ವಿರುದ್ಧ ನಮ್ಮನೆ ಪ್ರಶಾಂತ್ ಅಪಪ್ರಚಾರ: ನಿರ್ಮಾಣಕಾರ ರಾಮನ್ ಆರೋಪ

ಜಾಹೀರಾತು


“ಚೂಡಾ ಅನುಮೋದನೆ, ನಗರಸಭೆಯ ಎನ್‌ಒಸಿ ಪಡೆದಿದ್ದೇವೆ; ಆದರೂ ನಿವೇಶನಗಳ ಮಾರಾಟಕ್ಕೆ ಅಡ್ಡಿಪಡಿಸುತ್ತಿದ್ದಾರೆ” ಎಂದು ಸುದ್ದಿಗೋಷ್ಠಿಯಲ್ಲಿ ದೂರಿದ ಬಡಾವಣೆ ಮುಖ್ಯಸ್ಥರು

ಕಲ್ಯಾಣ ಸಿರಿ:
ಚಾಮರಾಜನಗರ: ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದ ಬಳಿ ನಿರ್ಮಿಸಲಾಗಿರುವ ನೂತನ ಸಿ.ವಿ. ರಾಮನ್ ಬಡಾವಣೆಯ ವಿರುದ್ಧ ಸಾಮಾಜಿಕ ಹೋರಾಟಗಾರ ಹಾಗೂ ಯೂಟ್ಯೂಬರ್ ನಮ್ಮನೆ ಪ್ರಶಾಂತ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಬಡಾವಣೆಯ ನಿರ್ಮಾಣಕಾರ ರಾಮನ್ ಆರೋಪಿಸಿದ್ದಾರೆ.
ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಡಾವಣೆಯು ನಗರಾಭಿವೃದ್ಧಿ ಪ್ರಾಧಿಕಾರದ ಅನುಮೋದಿತ ನಕ್ಷೆಯಂತೆ ನಿರ್ಮಾಣವಾಗಿಲ್ಲ, ನಗರಸಭೆಯಿಂದ ನಿರಾಕ್ಷೇಪಣಾ ಪತ್ರ (ಎನ್‌ಒಸಿ) ಪಡೆದಿಲ್ಲ, ರಸ್ತೆಗಳು ಹಾಗೂ ಒಳಚರಂಡಿ ಕಾಮಗಾರಿಗಳು ಕಳಪೆಯಾಗಿವೆ ಎಂದು ಆರೋಪಿಸಿ, ಸಾರ್ವಜನಿಕರು ನಿವೇಶನಗಳನ್ನು ಖರೀದಿಸಬಾರದೆಂದು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊಗಳ ಮೂಲಕ ಪ್ರಚಾರ ಮಾಡಲಾಗುತ್ತಿದೆ ಎಂದು ದೂರಿದರು.
ನಿಯಮಾನುಸಾರ ಬಡಾವಣೆ ನಿರ್ಮಾಣ: ರಾಮನ್ ಸ್ಪಷ್ಟನೆ
ಚಾಮರಾಜನಗರ ನಗರಾಭಿವೃದ್ಧಿ ಪ್ರಾಧಿಕಾರದಿಂದ (ಚೂಡಾ) ಅನುಮೋದನೆ ಪಡೆದು, ನಿಯಮಾವಳಿಗಳ ಪ್ರಕಾರ ಸುಮಾರು 2.75 ಎಕರೆ ಪ್ರದೇಶದಲ್ಲಿ 49 ನಿವೇಶನಗಳನ್ನು ಒಳಗೊಂಡ ಬಡಾವಣೆಯನ್ನು ನಿರ್ಮಿಸಲಾಗಿದೆ. ನಗರಸಭೆಯ ಅಧಿಕಾರಿಗಳು ಪರಿಶೀಲನೆ ನಡೆಸಿ ಎನ್‌ಒಸಿ ನೀಡಿದ್ದಾರೆ ಎಂದು ರಾಮನ್ ಸ್ಪಷ್ಟಪಡಿಸಿದರು.
ಬಡಾವಣೆಯಲ್ಲಿ ಈಗಾಗಲೇ ಕೆಲವರು ನಿವೇಶನಗಳನ್ನು ಖರೀದಿಸಿ ಮನೆಗಳನ್ನು ನಿರ್ಮಿಸುತ್ತಿದ್ದಾರೆ. ಉಳಿದ ನಿವೇಶನಗಳ ಮಾರಾಟಕ್ಕೆ ನಮ್ಮನೆ ಪ್ರಶಾಂತ್ ಅವರ ಅಪಪ್ರಚಾರ ಅಡ್ಡಿಯಾಗುತ್ತಿದೆ ಎಂದು ಅವರು ಆರೋಪಿಸಿದರು.
ಇದಲ್ಲದೆ, ಮೂರನೇ ವ್ಯಕ್ತಿಯ ಮೂಲಕ ಹಣ ಅಥವಾ ನಿವೇಶನಕ್ಕೆ ಬೇಡಿಕೆ ಇಟ್ಟು ತೊಂದರೆ ನೀಡಲಾಗುತ್ತಿದೆ ಎಂಬ ಗಂಭೀರ ಆರೋಪವನ್ನೂ ಬಡಾವಣೆಯ ಮುಖ್ಯಸ್ಥರು ಮಾಡಿದ್ದಾರೆ. ಈ ಆರೋಪಗಳ ಕುರಿತು ಸಂಬಂಧಪಟ್ಟವರ ಪ್ರತಿಕ್ರಿಯೆ ಲಭ್ಯವಾಗಿಲ್ಲ.
ಅಧಿಕಾರಿಗಳ ಪರಿಶೀಲನೆಯ ಬಳಿಕವೂ ವಿವಾದ
ಬಡಾವಣೆಯ ರಸ್ತೆಗಳು ಮತ್ತು ಚರಂಡಿಗಳ ಗುಣಮಟ್ಟದ ಕುರಿತು ನಗರಸಭೆ ಹಾಗೂ ಚೂಡಾ ಅಧಿಕಾರಿಗಳಿಗೆ ದೂರು ನೀಡಲಾಗಿತ್ತು. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಬಡಾವಣೆ ನಿಯಮಾನುಸಾರವಾಗಿದೆ ಎಂದು ತಿಳಿಸಿ ತೆರಳಿದ್ದಾರೆ ಎಂದು ರಾಮನ್ ಹೇಳಿದರು.
ಬಡಾವಣೆಯ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಆರೋಪಿಸಿ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಸೆಸ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಲಾಗಿತ್ತು. ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಬಡಾವಣೆಯ ವಿರುದ್ಧ ಪ್ರಕಟಿಸಿದ್ದ ವಿಡಿಯೊಗಳನ್ನು ತೆರವುಗೊಳಿಸಲಾಗಿದೆ. ಆದರೂ ಕಿರುಕುಳ ಮುಂದುವರಿದಿದೆ ಎಂದು ಅವರು ದೂರಿದರು.
ಬಡಾವಣೆಯ ನಿರ್ಮಾಣಕಾರ ರಾಮನ್, ಬಡಾವಣೆಯ ನಿವಾಸಿ ಮನೋಹರ್ ಹಾಗೂ ವಿನಯ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Total Views: 3
ಜಾಹೀರಾತು
Share This Article