
WorldSkills Competition 2026: Interested youth, please register.ವರ್ಲ್ಡ್ ಸ್ಕಿಲ್ ಸ್ಪರ್ಧೆ-2026: ಆಸಕ್ತ ಯುವಜನರು ನೋಂದಾಯಿಸಿಕೊಳ್ಳಿ
ಕೊಪ್ಪಳ ಅಕ್ಟೋಬರ್ 13 (ಕರ್ನಾಟಕ ವಾರ್ತೆ): ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ ವತಿಯಿಂದ ಸ್ಕಿಲ್ ಇಂಡಿಯಾ ಕಾರ್ಯಕ್ರಮವು ವಿಶ್ವದ ಅತಿ ದೊಡ್ಡ ಕೌಶಲ್ಯ ವರ್ಲ್ಡ್ ಸ್ಕಿಲ್ ಸ್ಪರ್ಧೆಯು ಪ್ರತಿ ಎರಡು ವರ್ಷಗಳಿಗೊಮ್ಮೆ ನಡೆಯುವ ಜಗತ್ತಿನ ಅತಿ ದೊಡ್ಡ ವೃತ್ತಿಪರ ಕೌಶಲ್ಯ ಸ್ಪರ್ಧೆಯಾಗಿದ್ದು, ಮುಂದಿನ ವರ್ಲ್ಡ್ ಸ್ಕಿಲ್ 2028 ಜಾಗತಿಕ ಸ್ಪರ್ಧೆಯು ಜಪಾನಿನ ಐಚಿ ನಗರದಲ್ಲಿ ನಡೆಯಲಿದೆ.
ಕರ್ನಾಟಕ ರಾಜ್ಯ ಕೌಶಲ್ಯ ಒಲಿಂಪಿಕ್ಸ್ 2026-27 ಅನ್ನು ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮ ಆಯೋಜಿಸುತ್ತಿದೆ. ಜಪಾನಿನ ಐಚಿಯಲ್ಲಿ ನಡೆಯಲಿರುವ ವರ್ಲ್ಡ್ ಸ್ಕಿಲ್ 2028 ಜಾಗತಿಕ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲು ಬಯಸುವ ಯುವಕ-ಯುವತಿಯರಿಗೆ ಇದೊಂದು ಅಧಿಕೃತ ರಾಜ್ಯ ಮಟ್ಟದ ವೇದಿಕೆಯಾಗಿದೆ.
ಸ್ಪರ್ಧೆಯಲ್ಲಿ 63 ವಿವಿಧ ವೃತ್ತಿಪರ ಕೌಶಲ್ಯ ವಿಭಾಗಗಳಲ್ಲಿ ನೈಪುಣ್ಯತೆ ಹೊಂದಿರುವ 16 ರಿಂದ 25 ವರ್ಷ ವಯೋಮಿತಿಯ ಯುವಜನರು ಭಾಗವಹಿಸಬಹುದು. ಅತ್ಯುತ್ತಮ ಪ್ರದರ್ಶನ ನೀಡುವ ಅಭ್ಯರ್ಥಿಗಳಿಗೆ ನಗದು ಬಹುಮಾನಗಳು ಹಾಗೂ ಉಚಿತವಾಗಿ ಉನ್ನತ ಮಟ್ಟದ ಸುಧಾರಿತ ತರಬೇತಿಯನ್ನು ನೀಡಲಾಗುತ್ತದೆ. ರಾಜ್ಯಮಟ್ಟದಲ್ಲಿ ವಿಜೇತರಾದವರು ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮ ಆಯೋಜಿಸುವ ಪ್ರಾದೇಶಿಕ ಹಾಗೂ ರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಿಗೆ ಅಯ್ಕೆಯಾಗುತ್ತಾರೆ. ಅಲ್ಲಿ ಗೆದ್ದು ಅಂತಿಮವಾಗಿ ಜಾಗತಿಕ ಮಟ್ಟದಲ್ಲಿ ಟೀಮ್ ಇಂಡಿಯಾ ಪ್ರತಿನಿಧಿಸುವ ಸುವರ್ಣಾವಕಾಶ ಪಡೆಯುತ್ತಾರೆ.
ನೋಂದಣಿ ದಿನಾಂಕವನ್ನು ಅಕ್ಟೋಬರ್ 19 ವರೆಗೆ ವಿಸ್ತರಿಸಲಾಲಾಗಿದ್ದು, ಜಿಲ್ಲೆಯ ಎಲ್ಲಾ ಆಸಕ್ತ ಯುವಕ-ಯುವತಿಯರು ಮತ್ತು ವಿದ್ಯಾರ್ಥಿಗಳು www.skillindiadigital.gov.in/home ವೆಬ್ ಪೋರ್ಟಲ್ ನಲ್ಲಿ ನೋಂದಣಿ ಮಾಡಿಕೊಳ್ಳುವುದರ ಮೂಲಕ ಸ್ಪರ್ಧೆಯಲ್ಲಿ ಭಾಗವಹಿಸಿ ಈ ಮಹತ್ವದ ಅವಕಾಶವನ್ನು ಬಳಸಿಕೊಳ್ಳುಬೇಕು ಎಂದು ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



