ಬೆಂಗಳೂರಿನ ಇಬ್ಬರು ಪುಟ್ಟ ಬಾಲಕರಿಂದ ದಾಖಲೆಯ ಸಾಧನೆ | ಕಲಾಂ ವರ್ಲ್ಡ್ ರೆಕಾರ್ಡ್ಸ್ | ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಗೌರವ

H.Mallikarjun
H.Mallikarjun - Kalyanasiri
2 Min Read

ಬೆಂಗಳೂರಿನ ಇಬ್ಬರು ಪುಟ್ಟ ಬಾಲಕರಿಂದ ದಾಖಲೆಯ ಸಾಧನೆ | ಕಲಾಂ ವರ್ಲ್ಡ್ ರೆಕಾರ್ಡ್ಸ್ | ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಗೌರವ

ಜಾಹೀರಾತು
Record-breaking achievement by two young boys from Bengaluru | Kalam World Records | India Book of Records honor

ಬೆಂಗಳೂರು: ಸೆ.24: ಬೆಂಗಳೂರಿನ ಇಬ್ಬರು ಸಹೋದರರು ಅತ್ಯಂತ ಚಿಕ್ಕ ವಯಸ್ಸಿನಲ್ಲಿ ಮಾನಸಿಕ ಗಣಿತದಲ್ಲಿ ಅಸಾಮಾನ್ಯ ಪ್ರತಿಭೆಯನ್ನು ಪ್ರದರ್ಶಿಸುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಮತ್ತು ಕಲಾಂ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ದಾಖಲೆ ಬರೆದಿದ್ದಾರೆ. 7 ವರ್ಷದ ಯದುವೀರ್ ರಾಜ್ ಮತ್ತು 5 ವರ್ಷದ ಪೃಥ್ವಿ ರಾಜ್ ಈ ಸಾಧನೆ ಮಾಡಿದ ಪುಟ್ಟ ಪ್ರತಿಭೆಗಳಾಗಿದ್ದಾರೆ.

ಈ ಸಾಧಕ ಬಾಲಕರು ಪ್ರತಿಷ್ಠಿತ ಸಂಸ್ಥೆಯ ನಿರ್ದೇಶಕರಾದ ಶಿವುನಾಯ್ಕ್ ಮತ್ತು ನಿರ್ದೇಶಕರಾದ ಶ್ರೀಮತಿ ಪೂಜಾ ಕೆ. ಅವರ ಮುದ್ದಿನ ಪುತ್ರರಾಗಿದ್ದಾರೆ.

ಯದುವೀರ್ ರಾಜ್ ಸಾಧನೆ: ಯದುವೀರ್ ರಾಜ್, ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ 180 ಪೂರ್ಣಾಂಕಗಳ (ಧನಾತ್ಮಕ- ಋಣಾತ್ಮಕ) ಸಮಸ್ಯೆಗಳನ್ನು ಕೇವಲ 1 ನಿಮಿಷ 53 ಸೆಕೆಂಡುಗಳಲ್ಲಿ ಮೌಖಿಕವಾಗಿ ಪರಿಹರಿಸಿ ದಾಖಲೆ ಬರೆದಿದ್ದಾರೆ. ಅಲ್ಲದೆ, ಕಲಾಂ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ಅತ್ಯಂತ ವೇಗವಾಗಿ ಮಾನಸಿಕ ಗಣಿತದ ಮೂಲಕ 180 ಅಂಕಿಗಳ ಸಮಸ್ಯೆಗಳನ್ನು ಸೇರಿಸುವುದು ಮತ್ತು ಕಳೆಯುವುದರಲ್ಲಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

ಪೃಥ್ವಿ ರಾಜ್ ಸಾಧನೆ: ಪೃಥ್ವಿ ರಾಜ್, ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಹಾಗೂ ಕಲಾಂ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ 100 ಪೂರ್ಣಾಂಕಗಳ (ಧನಾತ್ಮಕ – ಋಣಾತ್ಮಕ) ಸಮಸ್ಯೆಗಳನ್ನು ಕೇವಲ 1 ನಿಮಿಷ 54 ಸೆಕೆಂಡುಗಳಲ್ಲಿ ಮೌಖಿಕವಾಗಿ ಪರಿಹರಿಸಿ ದಾಖಲೆ ನಿರ್ಮಿಸಿದ್ದಾರೆ.

ಗೌರವ ಮತ್ತು ಪುರಸ್ಕಾರ: ಇತ್ತೀಚೆಗೆ ಚೆನ್ನೈನಲ್ಲಿ ನಡೆದ ಸಮಾರಂಭದಲ್ಲಿ ಈ ಇಬ್ಬರು ಬಾಲಕರಿಗೆ ಕಲಾಂ ವರ್ಲ್ಡ್ ರೆಕಾರ್ಡ್ಸ್ ಪ್ರಮಾಣಪತ್ರ ಮತ್ತು ಟ್ರೋಫಿಗಳನ್ನು ನೀಡಿ ಗೌರವಿಸಲಾಯಿತು. ಹಾಗೆಯೇ ಹರಿಯಾಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಪದಕ, ಗೌರವ ಸನ್ಮಾನಗಳನ್ನು ನೀಡಿ ಪ್ರಶಂಸಿಸಲಾಯಿತು.

ಅವರ ಇಂತಹ ಅಸಾಮಾನ್ಯ ಸಾಧನೆಯನ್ನು ದೇಶಾದ್ಯಂತ ಅಪಾರ ಜನರು ಪ್ರಶಂಸಿಸಿದ್ದಾರೆ. ಪೋಷಕರಾದ ಶಿವುನಾಯ್ಕ್ ಮತ್ತು ಶ್ರೀಮತಿ ಪೂಜಾ ಕೆ. ಹಾಗೂ ಅವರ ಶಿಕ್ಷಕರು ಮಕ್ಕಳ ಮಹತ್ತರ ಯಶಸ್ಸಿನ ಬಗ್ಗೆ ಅಪಾರ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಈ ಇಬ್ಬರು ಪುಟ್ಟ ಪ್ರತಿಭೆಗಳ ಸಾಧನೆ ದೇಶದ ಇತರ ಮಕ್ಕಳಿಗೂ ಸ್ಪೂರ್ತಿಯಾಗಲಿ ಎಂದು ಶುಭ ಹಾರೈಸಲಾಗಿದೆ.

Total Views: 2
ಜಾಹೀರಾತು
Share This Article