ಲವರ್ಲ್ಡ್ ಸ್ಕಿಲ್ಸ್ ಶಾಂಘೈ–2026: ಅಂತರಾಷ್ಟ್ರೀಯ ಸೈಬರ್ ಸೆಕ್ಯುರಿಟಿ ಸ್ಪರ್ಧೆಗೆ ಗಂಗಾವತಿಯ ಸಾಯಿತೇಜ ಜಿ ಆಯ್ಕೆ

H.Mallikarjun
H.Mallikarjun - Kalyanasiri
1 Min Read
WorldSkills Shanghai 2026: Sai Teja G from Gangavathi selected for international cybersecurity competition.
 

 

ವರ್ಲ್ಡ್ ಸ್ಕಿಲ್ಸ್ ಶಾಂಘೈ–2026: ಅಂತರಾಷ್ಟ್ರೀಯ ಸೈಬರ್ ಸೆಕ್ಯುರಿಟಿ ಸ್ಪರ್ಧೆಗೆ ಗಂಗಾವತಿಯ ಸಾಯಿತೇಜ ಜಿ ಆಯ್ಕೆ

ಜಾಹೀರಾತು


ಕೊಪ್ಪಳ ಜಿಲ್ಲೆಗೆ ಹೆಮ್ಮೆ ತಂದ ಯುವ ಪ್ರತಿಭೆ; ಸೆ.22ರಿಂದ 27ರವರೆಗೆ ಚೀನಾದ ಶಾಂಘೈನಲ್ಲಿ ಸ್ಪರ್ಧೆ

 

ಗಂಗಾವತಿ: ತಾಲೂಕಿನ ಕೋಟಯ್ಯಕ್ಯಾಂಪ್ ನಿವಾಸಿಗಳಾದ ಶ್ರೀಮತಿ ಗೊಡವರ್ತಿ ಶೋಭಾ ಹಾಗೂ ಶ್ರೀ ಗೊಡವರ್ತಿ ನಾಗಮಲ್ಲೇಶ ಅವರ ಪುತ್ರ ಸಾಯಿತೇಜ ಜಿ ಅವರು ಅಂತರಾಷ್ಟ್ರೀಯ ಮಟ್ಟದ ವರ್ಲ್ಡ್ ಸ್ಕಿಲ್ಸ್ ಸೈಬರ್ ಸೆಕ್ಯುರಿಟಿ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.


ಚೀನಾದ ಶಾಂಘೈನಲ್ಲಿ ಸೆಪ್ಟೆಂಬರ್ 22ರಿಂದ 27ರವರೆಗೆ ನಡೆಯಲಿರುವ ವರ್ಲ್ಡ್ ಸ್ಕಿಲ್ಸ್ ಶಾಂಘೈ–2026 ಅಂತರಾಷ್ಟ್ರೀಯ ಸ್ಪರ್ಧೆಯಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ.

ಗಂಗಾವತಿಯ ಯುವ ಪ್ರತಿಭೆಯೊಬ್ಬರು ಈ ಪ್ರತಿಷ್ಠಿತ ಸ್ಪರ್ಧೆಗೆ ಆಯ್ಕೆಯಾಗಿರುವುದು ಕರ್ನಾಟಕ ರಾಜ್ಯಕ್ಕೆ, ಅದರಲ್ಲೂ ಕೊಪ್ಪಳ ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ ಎಂದು ಶ್ರೀರಾಮನಗರದ ಸ್ವಾಮಿ ವಿವೇಕಾನಂದ ಸೇವಾ ಸಂಘದ ಅಧ್ಯಕ್ಷ ಜಿ. ರಾಮಕೃಷ್ಣ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.
ಸಾಯಿತೇಜ ಜಿ ಅವರು ಬಿ.ಟೆಕ್ ಪದವಿ ವಿದ್ಯಾಭ್ಯಾಸ ಪೂರ್ಣಗೊಳಿಸಿದ್ದು, ಪ್ರಸ್ತುತ ಒಡಿಶಾದ ಭುವನೇಶ್ವರದಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌ನಲ್ಲಿ (ಟಿಸಿಎಸ್) ಸೆಕ್ಯುರಿಟಿ ಅನಾಲಿಸ್ಟ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಇತ್ತೀಚೆಗೆ ದೆಹಲಿಯಲ್ಲಿ ನಡೆದ ಇಂಡಿಯಾ ಸ್ಕಿಲ್ಸ್ ನ್ಯಾಷನಲ್ಸ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಹಾಗೂ ಹೈದರಾಬಾದ್‌ನಲ್ಲಿ ನಡೆದ ದಕ್ಷಿಣ ಪ್ರಾದೇಶಿಕ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗಳಿಸಿರುವುದು ಅವರ ಸಾಧನೆಗೆ ಮತ್ತಷ್ಟು ಮೆರುಗು ತಂದಿದೆ.
ಶಾಂಘೈನಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಸ್ಪರ್ಧೆಯಲ್ಲಿ ಸಾಯಿತೇಜ ಜಿ ಅವರು ಉತ್ತಮ ಪ್ರದರ್ಶನ ನೀಡಿ, ದೇಶಕ್ಕೆ ಹಾಗೂ ಕರ್ನಾಟಕಕ್ಕೆ ಕೀರ್ತಿ ತರಲಿ ಎಂದು ಜಿ. ರಾಮಕೃಷ್ಣ ಅವರು ಹಾರೈಸಿದ್ದಾರೆ.

ಹೆಚ್ಚಿನಮಾಹಿತಿ:
ಜಿ. ರಾಮಕೃಷ್ಣ
ಅಧ್ಯಕ್ಷರು, ಸ್ವಾಮಿ ವಿವೇಕಾನಂದ ಸೇವಾ ಸಂಘ (ರಿ.), ಶ್ರೀರಾಮನಗರ
ಮೊ: 9448228738

 

 

 

 

 

Total Views: 0
ಜಾಹೀರಾತು
Share This Article