Breaking News

ಸೃಷ್ಟಿಕರ್ತನಪ್ರತಿರೂಪವೇ ಮಹಿಳೆಯರು : ಪೂಜ್ಯ ಶ್ರೀ ಅಭಿನವ ಬಾಲಯೋಗಿಶಂಕರಲಿಂಗ ಶರಣರು.

Women are the image of the Creator: Pujya Sri Abhinava Balayogi Shankaralinga Sharanu.

ಜಾಹೀರಾತು

ವರದಿ – ಸಂಗಮೇಶ ಎನ್ ಜವಾದಿ.

ಚಿಟಗುಪ್ಪ : ಮಹಿಳೆಯರಿಗೆ ಎಲ್ಲಿ ಗೌರವಿಸಲ್ಪಡುತ್ತದೆಯೋ ಅಲ್ಲಿ ಭಗವಂತನ ನೆಲೆಸಿರುತ್ತಾನೆ. ಸೃಷ್ಟಿಕರ್ತನ ಪ್ರತಿರೂಪವೇ ಮಹಿಳೆಯರು ಎಂದು ಪೂಜ್ಯ ಶ್ರೀ ಅಭಿನವ ಬಾಲಯೋಗಿ ಶಂಕರಲಿಂಗ ಶರಣರು ನುಡಿದರು.

ತಾಲೂಕಿನ ಕಂದಗೂಳ ಗ್ರಾಮದ ಶ್ರೀ ಗುರು ಬಸವಲಿಂಗ ಶರಣರ ಸಮುದಾಯ ಭವನದಲ್ಲಿ ಜರುಗಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಸೀತಾಳಗೇರಾ ವಲಯದ ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟಗಳ ವತಿಯಿಂದ ಹಮ್ಮಿಕೊಂಡ ಧಾರ್ಮಿಕ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ರವರು ಇಂದಿನ ಮಹಿಳೆಯರು ನುಡಿದಂತೆ ನಡೆಯಬೇಕು.ತಮ್ಮ ಜವಾಬ್ದಾರಿ ಅರಿತು ಹೆಜ್ಜೆ ಹಾಕಬೇಕು.ದೇಶಕ್ಕೆ ಮಾದರಿಯಾಗುವ ಕೆಲಸ ಮಾಡಬೇಕು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಹಿಳೆಯರಿಗೆ ಆರ್ಥಿಕವಾಗಿ ಸ್ವಾವಲಂಬನೆ ಸಾಧಿಸಲು ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಹುಮನಾಬಾದ್ ಕ್ಷೇತ್ರದ ಜನಪ್ರಿಯ ಶಾಸಕ
ಡಾ. ಸಿದ್ದಲಿಂಗಪ್ಪಾ ಪಾಟೀಲ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಮಹಿಳಾ ಸಬಲೀಕರಣ, ಕುಟುಂಬದ ಆರ್ಥಿಕ ಸ್ಥಿತಿಗತಿ ಪ್ರಗತಿಕಡೆ ಕೊಂಡೊಯ್ಯುವ ಕೆಲಸ ಗ್ರಾಮಾಭಿವೃದ್ಧಿ ಯೋಜನೆ ನಿತ್ಯ ನಿರಂತರವಾಗಿ ಮಾಡಿಕೊಂಡು ಬರುತ್ತಿದ್ದಾರೆ.ಇದರ ಪ್ರಯೋಗಗಳನ್ನು ಪ್ರತಿಯೊಬ್ಬರೂ ಯೋಜನೆಯಗಳ ಸದುಪಯೋಗ ಪಡೆದುಕೊಳ್ಳಬೇಕು. ನಮ್ಮ ತಾಲೂಕಿನಲ್ಲಿ ಸುಮಾರು ಹದಿಮೂರು ವಿಭಾಗಗಳಲ್ಲಿ ಅಭಿವೃದ್ಧಿ ಸೇವಾ ಕೈಂಕರ್ಯಗಳು ಕೈಗೊಳ್ಳುತ್ತಿರುವುದು ಹೆಮ್ಮೆ ಪಡುವ ವಿಚಾರವಾಗಿದೆ ಎಂದರು.

ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯರಾದ ಸಂಗಮೇಶ ಎನ್ ಜವಾದಿ,ರಾಜಕುಮಾರ ಆರ್. ಹಡಪದ ಯೋಜನೆಯ ಕುರಿತು ಮಾತನಾಡಿದರು.

ತಾಲೂಕ ಯೋಜನಾಧಿಕಾರಿ ಬಸವರಾಜ ಕಾಳಪ್ಪನವರು ಪ್ರಾಸ್ತಾವಿಕವಾಗಿ ಮಾತನಾಡಿ, ತಾಲೂಕಿನಲ್ಲಿ ಕೈಗೊಂಡ ಕೆಲಸಗಳ ಕುರಿತು ಮಾಹಿತಿ ನೀಡಿದರು.

ಕಂದಗೂಳ ಗ್ರಾ. ಪಂ ಅಧ್ಯಕ್ಷರಾದ ರೇಣುಕಾ ಚರಕಪಳ್ಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ದೇವರಾಜ ನಿರೂಪಿಸಿದರು. ಜಾನ್ಸನ್ ಸ್ವಾಗತಿಸಿದರು, ಸಂತೋಷ ವಂದಿಸಿದರು.

ಕಾರ್ಯಕ್ರಮದಲ್ಲಿ ತಾಳಮಡಗಿ ಗ್ರಾಮ ಪಂಚಾಯತ ಉಪಾಧ್ಯಕ್ಷ ಅಣ್ಣಪ್ಪ ನಾಗನಕೇರ, ಎಎಸ್ಐ ಏಕನಾಥ, ಶ್ರೀ ಗುರು ಬಸವಲಿಂಗ ಆಶ್ರಮದ ಉಪಾಧ್ಯಕ್ಷ ಬಸವರಾಜ, ವಿಶ್ವನಾಥ ಪಾಟೀಲ, ಮಲ್ಲಿಕಾರ್ಜುನ ಸೀಗಿ ಹಾಗೂ ತಾಲೂಕಿನ ಮೇಲ್ವಿಚಾರಕರು, ಸೇವಾ ಪ್ರತಿನಿಧಿಯವರು, ಹಾಗೂ ಸ್ವ-ಸಹಾಯ ಸಂಘದ ಸದಸ್ಯರು ಹಾಗೂ ಜನಜಾಗೃತಿ ವೇದಿಕೆಯ ಸದಸ್ಯರು ಸೇರಿದಂತೆ ಗ್ರಾಮಸ್ಥರು, ಮಹಿಳಾ ತಾಯಿಯಂದಿಯರು ಉಪಸ್ಥಿತರಿದ್ದರು.

About Mallikarjun

Check Also

ಸೆ. 2 ಮತ್ತು 3 ರಂದು ವಿವಿಧ ಇಲಾಖೆಗಳ ಗ್ರೂಪ್ ಸಿ ಹುದ್ದೆಗಳ ಪರೀಕ್ಷೆ: ನಿಷೇಧಾಜ್ಞೆ ಜಾರಿ

Exams for Group C posts of various departments on Sept. 2 and 3: Prohibitory order …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.