ಬೆಳ್ಳಂ ಬೆಳಿಗ್ಗೆ ಲಾಲ್ ಬಾಗ್ ಗೆ ಭೇಟಿ: ಪಶ್ಚಿಮ ದ್ವಾರದಲ್ಲಿ ಪರಿಸರ ಸ್ನೇಹಿ ಮಣ್ಣಿನ ಗೌರಿ, ಗಣೇಶ ಮೂರ್ತಿ ವಿತರಿಸಿದ ಸಚಿವ ರಾಮಲಿಂಗಾ ರೆಡ್ಡಿ

H.Mallikarjun
H.Mallikarjun - Kalyanasiri
2 Min Read
Early morning visit to Lalbagh: Minister Ramalinga Reddy distributed eco-friendly clay Gauri and Ganesha idols at the West Gate.
 

ಬೆಳ್ಳಂ ಬೆಳಿಗ್ಗೆ ಲಾಲ್ ಬಾಗ್ ಗೆ ಭೇಟಿ: ಪಶ್ಚಿಮ ದ್ವಾರದಲ್ಲಿ ಪರಿಸರ ಸ್ನೇಹಿ ಮಣ್ಣಿನ ಗೌರಿ, ಗಣೇಶ ಮೂರ್ತಿ ವಿತರಿಸಿದ ಸಚಿವ ರಾಮಲಿಂಗಾ ರೆಡ್ಡಿ

ಜಾಹೀರಾತು

ಬೆಂಗಳೂರು, ಸೆ.13: ಪಿಒಪಿ ಗಣೇಶೋತ್ಸವಗಳಿಗೆ ಕರೆಯಬೇಡಿ, ಪಾಲ್ಗೊಳ್ಳುವುದೂ ಇಲ್ಲ ಎಂದು ಘೋಷಿಸಿರುವ ಅರಣ್ಯ ಮತ್ತು ಪರಿಸರ ಸಚಿವ ರಾಮಲಿಂಗಾ ರೆಡ್ಡಿ, ಇಂದು ಬೆಳ್ಳಂ ಬೆಳಿಗ್ಗೆ ಲಾಲ್ ಬಾಗ್ ಗೆ ಭೇಟಿ ನೀಡಿ ಪರಿಸರ ಸ್ನೇಹಿ ಮಣ್ಣಿನ ಗೌರಿ, ಗಣೇಶ ಮೂರ್ತಿಗಳನ್ನು ವಿತರಿಸಿದರು. ಪ್ರತಿಯೊಬ್ಬರೂ ಪರಿಸರ ಉಳಿಸುವ ಮೂಲಕ ಅರ್ಥಪೂರ್ಣವಾಗಿ ಗಣೇಶ ಹಬ್ಬ ಆಚರಿಸಬೇಕು ಎಂದು ಕರೆ ನೀಡಿದ್ದಾರೆ.

ಅವೆನ್ಯೂ ರಸ್ತೆಯ ಆರ್ಯ ವೈಷ್ಯ ಮಂಡಳಿ ಹಾಗೂ ವಾಸವಿ ಯುವಜನ ಸಂಘದ ವತಿಯಿಂದ ಕಳೆದ ಹತ್ತು ವರ್ಷಗಳಿಂದ ನಿರಂತರವಾಗಿ ಗಣೇಶ ಚತುರ್ಥಿಯನ್ನು ಪರಿಸರ ಸ್ನೇಹಿ ಹಾಗೂ ಅರ್ಥಪೂರ್ಣವಾಗಿ ಆಚರಿಸುತ್ತಿದ್ದು, ಈ ಬಾರಿಯೂ ಸಾರ್ವಜನಿಕರಿಗೆ 251 ಪರಿಸರ ಸ್ನೇಹಿ ಗಣೇಶ ಹಾಗೂ ಗೌರಿ ಮೂರ್ತಿಗಳನ್ನು ವಿತರಿಸಲಾಯಿತು, ಭಾನುವಾರ ಬೆಳಿಗ್ಗೆ ಲಾಲ್‌ ಬಾಗ್‌ ನ ಪಶ್ಚಿಮ ದ್ವಾರದಲ್ಲಿ ಅರಣ್ಯ ಮತ್ತು ಪರಿಸರ ಸಚಿವರಾದ ರಾಮಲಿಂಗಾರೆಡ್ಡಿ ಮಣ್ಣಿನ ಮೂರ್ತಿಗಳನ್ನು ವಿತರಿಸಿದರು

ಸ್ವತಃ ಸಚಿವ ರಾಮಲಿಂಗಾರೆಡ್ಡಿ ಸಾರ್ವಜನಿಕರಿಗೆ ಮೂರ್ತಿಗಳನ್ನು ವಿತರಿಸಿ ಮಾತನಾಡಿ, ವಾಸವಿ ಮಂಡಳಿ ಮತ್ತು ವಾಸವಿ ಯುವಜನ ಸಂಘದ ಸದಸ್ಯರು ನೈಜ ಪರಿಸರ ಪ್ರೇಮಿಗಳು. ಇದೇ ಮಾದರಿಯಲ್ಲಿ ಎಲ್ಲಾ ಸಂಘ ಸಂಸ್ಥೆಗಳು ಪರಿಸರ ಸ್ನೇಹಿಯಾಗಿ ಹಬ್ಬ ಆಚರಿಸಬೇಕು. ಪರಿಸರ ಮಾಲೀನ್ಯ ನಿಯಂತ್ರಣ ಮಂಡಳಿಯೂ ಸಹ ಪಿಒಪಿ ಗಣೇಶ ಮೂರ್ತಿಗಳ ವಿರುದ್ಧ ವ್ಯಾಪಕ ಕಾರ್ಯಾಚರಣೆ ಕೈಗೊಂಡಿದೆ. ದೀಪಾವಳಿ ಸಂದರ್ಭದಲ್ಲೂ ಪಟಾಕಿ ಬೇಡ ಎಂದು ಮನವಿ ಮಾಡುತ್ತೇವೆ. ಪ್ರತಿಯೊಬ್ಬರೂ ಪರಿಸರ ಸಂರಕ್ಷಣೆಗೆ ಸರ್ಕಾರ ಮತ್ತು ಸಮಾಜದ ಜೊತೆ ಕೈಜೋಡಿಸಬೇಕು ಎಂದು ಕರೆ ನೀಡಿದರು.

ಗಣೇಶ ಮೂರ್ತಿಗಳೊಂದಿಗೆ ಶಿಕ್ಷಣ ತಜ್ಞ ಸಿಎ ಡಾ. ವಿಷ್ಣು ಭರತ್ ಆಲಂಪಲ್ಲಿ ಅವರು ರಚಿಸಿರುವ “ಎಜುಕೇಶ್ ಇಸ್ ಎ ಟೂಲ್ ಆಫ್ ಸೆಕ್ಸಸ್ ” (ಶಿಕ್ಷಣವು ಯಶಸ್ಸಿನ ಸಾಧನ) ಎಂಬ ಪುಸ್ತಕವನ್ನೂ ಸಾರ್ವಜನಿಕರಿಗೆ ವಿತರಿಸಲಾಯಿತು.

ಬಳಿಕ ಮಾತನಾಡಿದ ಸಿಎ ಡಾ. ವಿಷ್ಣು ಭರತ್ ಆಲಂಪಲ್ಲಿ, ಹಬ್ಬವನ್ನು ಪರಿಸರ ಕ್ರಮಗಳ ಮೂಲಕ ಆಚರಿಸಲು ಸಚಿವರು ನಮೆಗೆ ಪ್ರೇರಣೆಯಾಗಿದ್ದಾರೆ. ಸಂಪ್ರದಾಯ ಮತ್ತು ಭಕ್ತಿಭಾವದಿಂದ ಪರಿಸರ ಸಂರಕ್ಷಿಸುವ ನಿಟ್ಟಿನಲ್ಲಿ ಹಬ್ಬ ಆಚರಿಸೋಣ. ಜಲಮೂಲಗಳಿಗೆ ಮಾಲಿನ್ಯ ಉಂಟುಮಾಡುವುದು ಬೇಡ ಎಂದರು.

ವಾಸವಿ ಯುವ ಜನ ಸಂಘದ ಅಧ್ಯಕ್ಷ ಗುರುಪ್ರಸಾದ್ ಮಾತನಾಡಿ, ಪಿಒಪಿ ಮೂರ್ತಿಗಳನ್ನು ಪ್ರತಿಷ್ಠಾಪಿಸಿರುವ ಕಾರ್ಯಕ್ರಮಗಳಲ್ಲಿ ತಾವು ಭಾಗವಹಿಸುವುದಿಲ್ಲ ಎಂದು ಸಚಿವ ರಾಮಲಿಂಗಾ ರೆಡ್ಡಿ ಹೇಳಿರುವುದು ಅತ್ಯಂತ ಸ್ವಾಗತಾರ್ಹ ಎಂದು ಹೇಳಿದರು.

ವಾಸವಿ ಯುವ ಜನ ಸಂಘದ ಗೌರವಾಧ್ಯಕ್ಷರು ಆದ ಮುರಳಿಕೃಷ್ಣ, ಕಾರ್ಯದರ್ಶಿಗಳಾದ ರಾಜ ಅಂಜನ್, ಎಂ. ಆರ್. ಓ ಆದ ಬಾಲಾಜಿ. ಬಿ.ಪಿ ರವರು ಉಪಸ್ಥಿತರಿದ್ದರು

Total Views: 0
ಜಾಹೀರಾತು
Share This Article